ಲೋಕಸಭಾ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್(DK Shivakumar) ಶಕ್ತಿ ಕುಂದಿದೆ. ಅದರಲ್ಲೂ ಸ್ವಂತ ಸಹೋದರನ್ನು ಗೆಲ್ಲಿಸಿಕೊಳ್ಳಲು ಆಗದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಟೀಂ ತಿರುಗಿ ಬಿದ್ದಿದೆ. ಮೊದಲಿಗೆ ಸಮುದಾಯವಾರು ಡಿಸಿಎಂ ಸ್ಥಾನ ನೀಡಬೇಕು ಎನ್ನುವ ಚರ್ಚೆ ಶುರುವಾಗಿತ್ತು. ಈ ಮೊದಲು ಹೈಕಮಾಂಡ್ ಜೊತೆಗೆ ಒಬ್ಬರೇ ಡಿಸಿಎಂ ಎನ್ನುವ ಷರತ್ತು ವಿಧಿಸಿ ಸಿಎಂ ಸಿದ್ದರಾಮಯ್ಯ ಬಿಟ್ಟರೆ ನಾನೇ ನಾಯಕ ಎನ್ನುತ್ತಿರುವ ಡಿ.ಕೆ ಶಿವಕುಮಾರ್ಗೆ ಇರಿಸು ಮುರುಸು ಉಂಟಾಗಿತ್ತು. ಇನ್ನು ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿರುವ ನಾಯಕ ಎನ್ನುವ ಕಾರಣಕ್ಕೆ ಇದೇ ಬಿಸಿಯಲ್ಲಿ ಹೆಚ್ಚುವರಿ ಡಿಸಿಎಂ ಕೇಳಿ ಪಡೆದುಕೊಳ್ಳುವ ಮೂಲಕ ಡಿ.ಕೆ ಶಿವಕುಮಾರ್ ಶಕ್ತಿ ಕುಂದಿಸುವ ಕೆಲಸಕ್ಕೆ ಸಿಎಂ ಕೈ ಹಾಕಿದ್ದಾರೆ ಅನ್ನೋ ಚರ್ಚೆಗಳು ಶುರುವಾಗಿದ್ದವು. ಇದಕ್ಕೆ ಕೌಂಟರ್ ಕೊಡುವ ಕೆಲಸ ಮಾಡಿದ ಡಿಸಿಎಂ ಮತ್ತೆ ಪೆಟ್ಟು ತಿಂದಿದ್ದಾರೆ.
ಹೆಚ್ಚುವರಿ ಡಿಸಿಎಂ ಸ್ಥಾನ ಬೇಕು ಎಂದಿದ್ದ ಸಚಿವ ರಾಜಣ್ಣ (Rajanna) ಸೇರಿದಂತೆ ಉಳಿದ ನಾಯಕರಿಗೆ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ(Basavaraju Shivaganga) ತಿರುಗೇಟು ನೀಡಿದ್ದರು. ಸಿದ್ದರಾಮಯ್ಯ(Siddaramaiah) ರಾಜೀನಾಮೆ ಕೊಟ್ಟು ಡಿ.ಕೆ ಶಿವಕುಮಾರ್ ಅವರನ್ನು ಸಿಎಂ ಮಾಡಿ, ಆ ಬಳಿಕ ಒಂದು ಡಜನ್ ಡಿಸಿಎಂ ಮಾಡಿಕೊಳ್ಳಿ ಬೇಕಿದ್ದರೆ ಎಂದಿದ್ದರು. ಕೆಂಪೇಗೌಡ ಜಯಂತಿ ಆಚರಣೆ ವೇದಿಕೆಯಲ್ಲೇ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರದ ಕೂಗು ಪ್ರಬಲವಾಗಿ ಕೇಳಿಬಂದಿತ್ತು. ಸಿಎಂ ಸಿದ್ದರಾಮಯ್ಯ ಮುಂದೆಯೇ, ಡಿಕೆ ಶಿವಕುಮಾರ್ ಸಿಎಂ ಆಗಲಿ, ಸಿದ್ದರಾಮಯ್ಯ ಸಿಎಂ ಸೀಟು ಬಿಟ್ಟು ಕೊಡಲಿ ಎಂದು ಚಂದ್ರಶೇಖರ ಸ್ವಾಮೀಜಿ(Chandrashekar Swamiji) ಒತ್ತಾಯಿಸಿದ್ದರು. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿರೋದು ಡಿ.ಕೆ ಶಿವಕುಮಾರ್, ಖಂಡಿತ ಡಿ.ಕೆ ಶಿವಕುಮಾರ್ ಸಿಎಂ ಆಗ್ಬೇಕು. ಸಿದ್ದರಾಮಯ್ಯ ಧರ್ಮಾತ್ಮನಾಗಿದ್ರೆ ಬಿಟ್ಟುಕೊಡ್ಲಿ ಎಂದು ಚಂದ್ರಶೇಖರ ಸ್ವಾಮೀಜಿ ಹೇಳಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮನಸ್ಸು ಮಾಡಿ.. ಡಿ.ಕೆ.ಶಿವಕುಮಾರ್ಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಮುಖ್ಯಮಂತ್ರಿಗಳ ಎದುರಲ್ಲೇ ಒಕ್ಕಲಿಗ ಸ್ವಾಮೀಜಿ ಬೇಡಿಕೆಯಿಟ್ಟ ಕೆಲವೇ ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಬಿಡಿ ಎಂದು ಅಲ್ಲಿಂದ ಹೇಳಿದ್ದರು. ಸ್ವಾಮೀಜಿ ಹೇಳಿದ ಮಾತ್ರಕ್ಕೆ ಆಗಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ರೆ ಅದೂ ಒಂದು ಕಾಲ ಬರುತ್ತೆ ಎಂದು ಚಲುವರಾಯಸ್ವಾಮಿ ಹೇಳಿದ್ದರು. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ತಂಡದಲ್ಲಿ ಗುರ್ತಿಸಿಕೊಂಡಿರುವ ಸಚಿವ ಕೆ.ಎನ್ ರಾಜಣ್ಣ, ಸ್ವಾಮೀಜಿ ಹೇಳಿದಾಕ್ಷಣ ಬಿಡ್ಬೇಕಾ..?, ‘ಸಿಎಂ ಸ್ಥಾನ ಖಾಲಿ ಇಲ್ಲ, 5 ಅಲ್ಲ, 10 ವರ್ಷವೂ ಸಿದ್ದರಾಮಯ್ಯ ಸಿಎಂ ಆಗಿ ಇರ್ತಾರೆ ಎಂದಿರುವ ರಾಜಣ್ಣ, ನಾನೇ ಸ್ವಾಮೀಜಿ ಆಗ್ತೀನಿ ಅವರ ಸ್ಥಾನ ಬಿಟ್ಟು ಬಿಡ್ತಾರಾ ? ಎಂದು ಮರು ಪ್ರಶ್ನೆ ಎಸೆದಿದ್ದರು.
ಸಿದ್ದರಾಮಯ್ಯ ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್ ಶಕ್ತಿ ಕುಂದಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸಿಎಂ ಸ್ಥಾನಕ್ಕೆ ಟವೆಲ್ ಹಾಕುವ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತ್ಯಾಸ್ತ್ರ ಬಿಟ್ಟಿದ್ದರು. ಇದೀಗ ಸಿಎಂ ಸ್ಥಾನ ಕೇಳಿದ ಡಿ.ಕೆ ಶಿವಕುಮಾರ್ ಹೇಳಿದ್ದೆಲ್ಲವನ್ನೂ ನಾವು ಕೇಳಬೇಕಾ..? ಎಂದು ರಾಜಣ್ಣ ಪ್ರಶ್ನೆ ಮಾಡುವ ಮೂಲಕ ರಾಜ್ಯದಲ್ಲಿ ಡಿ.ಕೆ ಶಿವಕುಮಾರ್ ಶಕ್ತಿ ಹೀನರು ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಇನ್ನು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಡಿ.ಕೆ ಶಿವಕುಮಾರ್ ವಿರೋಧಿ ಕುಮಾರಸ್ವಾಮಿ ಜೊತೆಗೂ ಸ್ನೇಹಲಾಘವ ಕೊಟ್ಟಿದ್ದಾರೆ. ಇದು ಮತ್ತಷ್ಟು ಇರುಸು ಮುಸುರು ತರುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರು ನಾಯಕರ ಜಗಳ್ ಬಂಧಿ ಬೀದಿಗೆ ಬಂದರೆ ಕಾಂಗ್ರೆಸ್ ಸರ್ಕಾರಕ್ಕೆ ಕಂಟಕ ಎದುರಾಗುವ ಸಾಧ್ಯತೆಯಿದೆ ಎನ್ನುವುದು ಕೇಸರಿ ನಾಯಕರ ಮಾತು.
ಕೃಷ್ಣಮಣಿ