• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡಿಸಿಎಂ ಅಸ್ತ್ರಕ್ಕೆ ಸಿಎಂ ದಾಳ.. ತಿರುಗಿಸಿ ಕೊಟ್ಟ ಸಿಎಂ ಟೀಂ..

ಕೃಷ್ಣ ಮಣಿ by ಕೃಷ್ಣ ಮಣಿ
June 28, 2024
in Top Story, ಅಂಕಣ, ಕರ್ನಾಟಕ, ರಾಜಕೀಯ, ವಿಶೇಷ
0
Share on WhatsAppShare on FacebookShare on Telegram

ಲೋಕಸಭಾ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್‌(DK Shivakumar) ಶಕ್ತಿ ಕುಂದಿದೆ. ಅದರಲ್ಲೂ ಸ್ವಂತ ಸಹೋದರನ್ನು ಗೆಲ್ಲಿಸಿಕೊಳ್ಳಲು ಆಗದ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್‌ ವಿರುದ್ಧ ಸಿಎಂ ಸಿದ್ದರಾಮಯ್ಯ ಟೀಂ ತಿರುಗಿ ಬಿದ್ದಿದೆ. ಮೊದಲಿಗೆ ಸಮುದಾಯವಾರು ಡಿಸಿಎಂ ‌ಸ್ಥಾನ ನೀಡಬೇಕು ಎನ್ನುವ ಚರ್ಚೆ ಶುರುವಾಗಿತ್ತು. ಈ ಮೊದಲು ಹೈಕಮಾಂಡ್‌ ಜೊತೆಗೆ ಒಬ್ಬರೇ ಡಿಸಿಎಂ ಎನ್ನುವ ಷರತ್ತು ವಿಧಿಸಿ ಸಿಎಂ ಸಿದ್ದರಾಮಯ್ಯ ಬಿಟ್ಟರೆ ನಾನೇ ನಾಯಕ ಎನ್ನುತ್ತಿರುವ ಡಿ.ಕೆ ಶಿವಕುಮಾರ್‌ಗೆ ಇರಿಸು ಮುರುಸು ಉಂಟಾಗಿತ್ತು. ಇನ್ನು ಲೋಕಸಭಾ ಚುನಾವಣೆಯಲ್ಲಿ ಸೋಲುಂಡಿರುವ ನಾಯಕ ಎನ್ನುವ ಕಾರಣಕ್ಕೆ ಇದೇ ಬಿಸಿಯಲ್ಲಿ ಹೆಚ್ಚುವರಿ ಡಿಸಿಎಂ ಕೇಳಿ ಪಡೆದುಕೊಳ್ಳುವ ಮೂಲಕ ಡಿ.ಕೆ ಶಿವಕುಮಾರ್‌ ಶಕ್ತಿ ಕುಂದಿಸುವ ಕೆಲಸಕ್ಕೆ ಸಿಎಂ ಕೈ ಹಾಕಿದ್ದಾರೆ ಅನ್ನೋ ಚರ್ಚೆಗಳು ಶುರುವಾಗಿದ್ದವು. ಇದಕ್ಕೆ ಕೌಂಟರ್‌ ಕೊಡುವ ಕೆಲಸ ಮಾಡಿದ ಡಿಸಿಎಂ ಮತ್ತೆ ಪೆಟ್ಟು ತಿಂದಿದ್ದಾರೆ.

ADVERTISEMENT

ಹೆಚ್ಚುವರಿ ಡಿಸಿಎಂ ಸ್ಥಾನ ಬೇಕು ಎಂದಿದ್ದ ಸಚಿವ ರಾಜಣ್ಣ (Rajanna) ಸೇರಿದಂತೆ ಉಳಿದ ನಾಯಕರಿಗೆ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ(Basavaraju Shivaganga) ತಿರುಗೇಟು ನೀಡಿದ್ದರು. ಸಿದ್ದರಾಮಯ್ಯ(Siddaramaiah) ರಾಜೀನಾಮೆ ಕೊಟ್ಟು ಡಿ.ಕೆ ಶಿವಕುಮಾರ್‌ ಅವರನ್ನು ಸಿಎಂ ಮಾಡಿ, ಆ ಬಳಿಕ ಒಂದು ಡಜನ್‌ ಡಿಸಿಎಂ ಮಾಡಿಕೊಳ್ಳಿ ಬೇಕಿದ್ದರೆ ಎಂದಿದ್ದರು. ಕೆಂಪೇಗೌಡ ಜಯಂತಿ ಆಚರಣೆ ವೇದಿಕೆಯಲ್ಲೇ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರದ ಕೂಗು ಪ್ರಬಲವಾಗಿ ಕೇಳಿಬಂದಿತ್ತು. ಸಿಎಂ ಸಿದ್ದರಾಮಯ್ಯ ಮುಂದೆಯೇ, ಡಿಕೆ ಶಿವಕುಮಾರ್ ಸಿಎಂ ಆಗಲಿ, ಸಿದ್ದರಾಮಯ್ಯ ಸಿಎಂ ಸೀಟು ಬಿಟ್ಟು ಕೊಡಲಿ ಎಂದು ಚಂದ್ರಶೇಖರ ಸ್ವಾಮೀಜಿ(Chandrashekar Swamiji) ಒತ್ತಾಯಿಸಿದ್ದರು. ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿರೋದು ಡಿ.ಕೆ ಶಿವಕುಮಾರ್‌, ಖಂಡಿತ ಡಿ.ಕೆ ಶಿವಕುಮಾರ್‌ ಸಿಎಂ ಆಗ್ಬೇಕು. ಸಿದ್ದರಾಮಯ್ಯ ಧರ್ಮಾತ್ಮನಾಗಿದ್ರೆ ಬಿಟ್ಟುಕೊಡ್ಲಿ ಎಂದು ಚಂದ್ರಶೇಖರ ಸ್ವಾಮೀಜಿ ಹೇಳಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮನಸ್ಸು ಮಾಡಿ.. ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಮುಖ್ಯಮಂತ್ರಿಗಳ ಎದುರಲ್ಲೇ ಒಕ್ಕಲಿಗ ಸ್ವಾಮೀಜಿ ಬೇಡಿಕೆಯಿಟ್ಟ ಕೆಲವೇ ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈ ಬಗ್ಗೆ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ ಬಿಡಿ ಎಂದು ಅಲ್ಲಿಂದ ಹೇಳಿದ್ದರು. ಸ್ವಾಮೀಜಿ ಹೇಳಿದ ಮಾತ್ರಕ್ಕೆ ಆಗಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ರೆ ಅದೂ ಒಂದು ಕಾಲ ಬರುತ್ತೆ ಎಂದು ಚಲುವರಾಯಸ್ವಾಮಿ ಹೇಳಿದ್ದರು. ಇದು ಇಷ್ಟಕ್ಕೇ ನಿಲ್ಲಲಿಲ್ಲ. ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ ತಂಡದಲ್ಲಿ ಗುರ್ತಿಸಿಕೊಂಡಿರುವ ಸಚಿವ ಕೆ.ಎನ್‌ ರಾಜಣ್ಣ, ಸ್ವಾಮೀಜಿ ಹೇಳಿದಾಕ್ಷಣ ಬಿಡ್ಬೇಕಾ..?, ‘ಸಿಎಂ ಸ್ಥಾನ ಖಾಲಿ ಇಲ್ಲ, 5 ಅಲ್ಲ, 10 ವರ್ಷವೂ ಸಿದ್ದರಾಮಯ್ಯ ಸಿಎಂ ಆಗಿ ಇರ್ತಾರೆ ಎಂದಿರುವ ರಾಜಣ್ಣ, ನಾನೇ ಸ್ವಾಮೀಜಿ ಆಗ್ತೀನಿ ಅವರ ಸ್ಥಾನ ಬಿಟ್ಟು ಬಿಡ್ತಾರಾ ? ಎಂದು ಮರು ಪ್ರಶ್ನೆ ಎಸೆದಿದ್ದರು.

ಸಿದ್ದರಾಮಯ್ಯ ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್‌ ಶಕ್ತಿ ಕುಂದಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸಿಎಂ ಸ್ಥಾನಕ್ಕೆ ಟವೆಲ್‌ ಹಾಕುವ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್‌ ಪ್ರತ್ಯಾಸ್ತ್ರ ಬಿಟ್ಟಿದ್ದರು. ಇದೀಗ ಸಿಎಂ ಸ್ಥಾನ ಕೇಳಿದ ಡಿ.ಕೆ ಶಿವಕುಮಾರ್‌ ಹೇಳಿದ್ದೆಲ್ಲವನ್ನೂ ನಾವು ಕೇಳಬೇಕಾ..? ಎಂದು ರಾಜಣ್ಣ ಪ್ರಶ್ನೆ ಮಾಡುವ ಮೂಲಕ ರಾಜ್ಯದಲ್ಲಿ ಡಿ.ಕೆ ಶಿವಕುಮಾರ್‌ ಶಕ್ತಿ ಹೀನರು ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಇನ್ನು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಡಿ.ಕೆ ಶಿವಕುಮಾರ್‌ ವಿರೋಧಿ ಕುಮಾರಸ್ವಾಮಿ ಜೊತೆಗೂ ಸ್ನೇಹಲಾಘವ ಕೊಟ್ಟಿದ್ದಾರೆ. ಇದು ಮತ್ತಷ್ಟು ಇರುಸು ಮುಸುರು ತರುವಂತೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರು ನಾಯಕರ ಜಗಳ್‌ ಬಂಧಿ ಬೀದಿಗೆ ಬಂದರೆ ಕಾಂಗ್ರೆಸ್‌ ಸರ್ಕಾರಕ್ಕೆ ಕಂಟಕ ಎದುರಾಗುವ ಸಾಧ್ಯತೆಯಿದೆ ಎನ್ನುವುದು ಕೇಸರಿ ನಾಯಕರ ಮಾತು.

ಕೃಷ್ಣಮಣಿ

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಅಣ್ತಮ್ಮಾಸ್‌ ಅಕ್ಕ ಪಕ್ಕದಲ್ಲಿದ್ರು ಮಾತಿಲ್ಲ.. ಕತೆಯಿಲ್ಲ.. ಯಾರಿಗೆ ನಷ್ಟ..?

Next Post

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

ಗುಡ್‌ ನ್ಯೂಸ್‌ ಕೊಟ್ಟ ದೀಪಿಕಾ ಪಡುಕೋಣೆ : ಬಾಲಿವುಡ್‌ ಬೆಡಗಿಯ ಸಿಹಿ ಸುದ್ದಿ ಏನು..?

April 19, 2026
Next Post
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada