ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನಡುವೆ ಇಂದಿಗೂ ಕೂಡ ವೈಮನ್ನಸ್ಸು ಇದೆ ಅಂತ ಆಗಾಗ ಮಾತುಗಳು ಕೇಳಿ ಬರುತ್ತಿವೆ. ಮೊನ್ನೆ ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಅವರ ಬಣದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಎಂ.ಬಿ ಪಾಟೀಲ್ ಮುಂದಿನ 5 ವರ್ಷಗಳ ಕಾಲ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಅಂತ ಅಚ್ಚರಿಯ ಹೇಳಿಕೆ ನೀಡಿದ್ರು.

ಇದು ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನ ಮೂಡಿಸಿತ್ತು. ಇದಾದ ಬಳಿಕ ಡಿ.ಕೆ ಸುರೇಶ್ ಕೂಡ ಈ ಬಗ್ಗೆ ಗರಂ ಆಗಿದ್ರು. ನಂತರ ರಣದೀಪ್ ಸಿಂಗ್ ಸುರ್ಜೇವಾಲ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ಬಣಕ್ಕೆ ವಾರ್ನ್ ಕೂಡ ಮಾಡಿದ್ರು. ಆದ್ರೂ ಕೂಡ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನಡುವೆ ಮುಸುಕಿನ ಗುದ್ದಾಟವಿದೆ ಎಂಬ ಮಾತುಗಳು ಕೇಳಿ ಬಂದಿತ್ತು
ಇದಕ್ಕೆ ಪ್ರಮುಖ ಕಾರಣ ಅಂದ್ರೆ, ಖಾತೆಗಳ ಹಂಚಿಕೆ ವಿಚಾರ ಈಗಾಗ್ಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಣದಿಂದ ಸಾಕಷ್ಟು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳು ಇದ್ದಾರೆ. ಇಂದು ಈ ಪಟ್ಟಿ ಫೈನಲ್ ಆಗುವ ಸಾಧ್ಯತೆ ಇದ್ದು ಈ ಇಬ್ಬರು ನಾಯಕರು ಹೈಕಮಾಂಡ್ ಮುಂದೆ ತಮ್ಮ ಬಣದವರಿಗೆ ಸಚಿವ ಸ್ಥಾನ ನೀಡುವಂತೆ ಲಾಭಿ ಮಾಡುವ ಸಾಧ್ಯತೆ ಇದೆ.

ಇದೇ ಕಾರಣಕ್ಕೆ ಇಂದು ದೆಹಲಿಗೆ ಹೊರಟಿರುವ ಈ ಪ್ರಮುಖ ನಾಯಕರು, ಹೈಕಮಾಂಡ್ ಮುಂದೆ ಸಾಂಭವ್ಯ ಪಟ್ಟಿಯನ್ನ ಇಡಲಿದ್ದಾರೆ. ಇನ್ನು ದೆಹಲಿಗೆ ಸಿಎಂ ಸಿದ್ದರಾಮಯ್ಯರಿಗಿಂತ ಮುಂಚಿತವಾಗಿ ಅಂದ್ರೆ ಮಧ್ಯಾಹ್ನ 2.30ಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ತೆರಳಲಿದ್ದು, ಡಿಕೆಶಿಯ ಈ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಸಿಎಂ ಸಿದ್ದರಾಮಯ್ಯಕ್ಕೆ ದೆಹಲಿಗೆ ತೆರಳಲಿದ್ದು, ಸಿಎಂಗಿಂತ ಮುಂಚೆ ಡಿಸಿಎಂ ದೆಹಲಿಗೆ ತೆರಳುತ್ತಿರೋದ್ರ ಹಿಂದಿನ ಕಾರಣ ಏನು ಅನ್ನೋದು ಇನ್ನು ತಿಳಿದು ಬಂದಿಲ್ಲ. ಆದ್ರೆ ಮೂಲಗಳ ಪ್ರಕಾರ ಡಿಸಿಎಂ ಮೊದಲು ಸಾಂಭವ್ಯ ಸಚಿವರ ಪಟ್ಟಿಯನ್ನ ಹೊತ್ತು ದೆಹಲಿಗೆ ತೆರಳಲಿದ್ದಾರೆ ಅನ್ನೋದು ಮಾತ್ರ ತಿಳಿದು ಬಂದಿದೆ.