• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, November 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸ್ವಾಭಿಮಾನಿಗಳನ್ನು ಕೆಣಕಿದ್ರಾ ಡಿಸಿಎಂ ಡಿ.ಕೆ ಶಿವಕುಮಾರ್‌..?

ಪ್ರತಿಧ್ವನಿ by ಪ್ರತಿಧ್ವನಿ
November 30, 2024
in Top Story, ಕರ್ನಾಟಕ, ರಾಜಕೀಯ
0
ಸ್ವಾಭಿಮಾನಿಗಳನ್ನು ಕೆಣಕಿದ್ರಾ ಡಿಸಿಎಂ ಡಿ.ಕೆ ಶಿವಕುಮಾರ್‌..?
Share on WhatsAppShare on FacebookShare on Telegram

ಚನ್ನಪಟ್ಟಣ ಚುನಾವಣಾ ಅಖಾಡದಲ್ಲಿ ಸ್ವತಃ ಮಾಜಿ ಪ್ರಧಾನಮಂತ್ರಿ ದೇವೇಗೌಡರು, ಸಿದ್ದರಾಮಯ್ಯನ ಸೊಕ್ಕು ಮುರಿಬೇಕು. ಅಹಂಕಾರ ಇಳಿಸಬೇಕು. ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆಕೊಟ್ಟಿದ್ದರು. ಆ ಬಳಿಕ ಸಿಎಂ ಸಿದ್ದರಾಮಯ್ಯ ಸ್ವಾಭಿಮಾನ ಕೆರಳಿದ್ದು, ಉಪಚುನಾವಣಾ ಕಣದಲ್ಲಿ ಮೂರಕ್ಕೆ ಮೂರು ಕ್ಷೇತ್ರಗಳಲ್ಲೂ ಗೆಲುವಿನ ನಗೆ ಬೀರಿದ ಬಳಿಕ ಅಹಿಂದ ಮತಗಳ ಧ್ರುವೀಕರಣ ಸ್ಪಷ್ಟವಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ, ಸ್ವಾಭಿಮಾನ ಸಮಾವೇಶದ ಮೂಲಕ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅದೂ ಕೂಡ ಮಾಜಿ ಪ್ರಧಾನಿ ದೇವೇಗೌಡರ ತವರಲ್ಲಿ ಅನ್ನೋದು ವಿಶೇಷ.

ADVERTISEMENT

ದಾವಣಗೆರೆಯಲ್ಲಿ ಈ ಹಿಂದೆ ಸಿದ್ದರಾಮೋತ್ಸವ ಹೆಸರಿನಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಶಕ್ತಿಪ್ರದರ್ಶನ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಸಮಾವೇಶ ಮಾಡಿ ಬೀಗಿದ್ರು. ಇದೀಗ ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶಕ್ಕೆ ಸಿದ್ದರಾಮಯ್ಯ ಆಪ್ತರು ಮುಂದಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅಭಿಮಾನಿಗಳ ಸ್ವಾಭಿಮಾನ ಸಮಾವೇಶಕ್ಕೆ ಸಲಕ ತಯಾರಿ ನಡೆದಿದ್ದು, ಈ ಸಮಾವೇಶದ ಉದ್ದೇಶ ಏನು..? ಕಾಂಗ್ರಸ್‌ ಪಕ್ಷದ ಚಿಹ್ನೆ ಅಡಿಯಲ್ಲಿ ಯಾಕೆ ಸಮಾವೇಶ ಮಾಡ್ತಿಲ್ಲ ಅನ್ನೋ ಬಗ್ಗೆ ಹೈಕಮಾಂಡ್‌ಗೆ ಅನಾಮಧೇಯ ಪತ್ರವೊಂದು ಹೋಗಿತ್ತು. ಆ ಪತ್ರವನ್ನು ಡಿಸಿಎಂ ಡಿ.ಕೆ ಶಿವಕುಮಾರ್‌‌ ಆಪ್ತರ ಮೂಲಕ ಬರೆಸಿದ್ದಾರೆ ಅನ್ನೋದು ಗುಮಾನಿ.

HC BALAKRISHNA  : ಡಿಕೆ ಸುರೇಶ್‌ ವಿರುದ್ಧ ಬ್ಯಾಟಿಂಗ್‌ ಮಾಡಿದ ಬಾಲಕೃಷ್ಣ #pratidhvani #politics #karnataka

ಯಾವುದೇ ಅಪಸ್ವರಗಳಿಗೆ ಹೈಕಮಾಂಡ್​ ನಾಯಕರು ಯಾವುದೇ ಬೆಲೆ ಕೊಟ್ಟಿಲ್ಲ. ಸಿಎಂ ಸಿದ್ದರಾಮಯ್ಯ ಕೂಡ ಈ ವಿಚಾರದ ಬಗ್ಗೆ ಹೈಕಮಾಂಡ್‌ ನಾಯಕರ ಜೊತೆಗೆ ಚರ್ಚೆ ನಡೆಸಿದ್ದು, ಸ್ವಾಭಿಮಾನಿ ಸಮಾವೇಶಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಮಾವೇಶಕ್ಕೆ ಒಪ್ಪಿಗೆ ಪಡೆದುಕೊಂಡಿದ್ದಾರೆ. ಹಾಸನದಲ್ಲಿ ಡಿಸೆಂಬರ್ 5ಕ್ಕೆ ಬೃಹತ್​ ಸಮಾವೇಶ ನಡೆಯಲಿದ್ದು, ‘ಸ್ವಾಭಿಮಾನಿ ಸಮಾವೇಶ’ ಹೆಸರಲ್ಲಿ ಸಿಎಂ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ವರಿಷ್ಠರ ಬೆಂಬಲ ಪಡೆದು ಬಂದಿರುವ ಸಿಎಂ ಸಿದ್ದರಾಮಯ್ಯಗೆ ಮತ್ತಷ್ಟು ಹುಮ್ಮಸ್ಸು ಬಂದಂತಾಗಿದೆ.

ಹಾಸನದಲ್ಲಿ ಡಿಸೆಂಬರ್ 5ರಂದು ನಡೆಯುತ್ತಿರುವ ಬೃಹತ್​ ಸಮಾವೇಶದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ನನಗೆ ಮಾಹಿತಿ ನೀಡಿದ್ದಾರೆ. ‘ಸ್ವಾಭಿಮಾನಿ ಸಮಾವೇಶ’ದ ಹೆಸರಲ್ಲಿ ಸಿಎಂ ಸಿದ್ದರಾಮಯ್ಯ ತಾಕತ್ತು ಪ್ರದರ್ಶನ ಆಗಲಿದೆ. ಸ್ವಾಭಿಮಾನಿ ಸಮಾವೇಶದ ವಿಚಾರದಲ್ಲಿ ನಾವೆಲ್ಲಾ ಜೊತೆಯಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.. ಆದರೆ ಹೈಕಮಾಂಡ್‌ಗೆ ಸ್ವಾಭಿಮಾನಿ ಸಮಾವೇಶದ ಬಗ್ಗೆ ಪತ್ರ ಬರೆದು ಗೊಂದಲ ಮೂಡಿಸುವ ಪ್ರಯತ್ನ ಮಾಡಿದ್ದು ಇದೇ ಡಿ.ಕೆ ಶುವಕುಮಾರ್‌ ಅನ್ನೋದು ಸಿದ್ದರಾಮಯ್ಯ ಆಪ್ತ ಬಳಗದ ಮಾತು. ಪತ್ರ ರವಾನೆ ಮಾಡಿದವರಿಗೆ ಧೈರ್ಯ ಇದ್ದರೆ ಹೆಸರನ್ನು ಯಾಕೆ ಅಳಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕಿತ್ತು. ಅಂದರೆ ನಮ್ಮ ಎದುರು ಧೈರ್ಯವಾಗಿ ಹೇಳುವುದಕ್ಕೂ ಆಗ್ತಿಲ್ಲ ಎಂದು ಬಿ. ಶಿವರಾಂ ವಾಗ್ದಾಳಿ ಮಾಡಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ದೇಶಕ್ಕೆಲ್ಲಾ ಒಂದೇ ರೂಲ್ಸ್‌.. ಅನ್ಯಾಯ ಅನ್ಯಾಯವೇ ಅಲ್ವಾ..?

Next Post

ಡಿಸೆಂಬರ್‌ 26 ರಿಂದ ಬೆಳಗಾವಿಯಿಂದ ಇವಿಎಂ ವಿರುದ್ದ ಆಂದೋಲನ ಆರಂಬಿಸಲಿರುವ ಕಾಂಗ್ರೆಸ್‌ ಪಕ್ಷ

Related Posts

RashiPhala
Top Story

ಇಂದಿನ ರಾಶಿಭವಿಷ್ಯ: ನವೆಂಬರ್ 15ರಂದು ಈ ರಾಶಿಯವರಿಗೆ ಹೊಸ ಅವಕಾಶಗಳ ಸುರಿಮಳೆ! ಪ್ರೀತಿ, ಉದ್ಯೋಗದಲ್ಲಿ ಮಹತ್ವದ ಬದಲಾವಣೆ

by Shivakumar
November 15, 2026
0

ನವೆಂಬರ್ 15ರ ಭಾನುವಾರದ ರಾಶಿಭವಿಷ್ಯ: ಇಂದು ಗ್ರಹಗಳ ಚಲನೆಯ ಪ್ರಭಾವದಿಂದ ಹನ್ನೆರಡು ರಾಶಿಗಳ ಜೀವನದಲ್ಲಿ ವಿಭಿನ್ನ ಬೆಳವಣಿಗೆಗಳು ಕಂಡುಬರುವ ಸಾಧ್ಯತೆಯಿದೆ. ಕೆಲವರಿಗೆ ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳು...

Read moreDetails
ಮಕ್ಕಳ ದಿನಾಚರಣೆ: ಸರ್ವಜ್ಞನಗರದಲ್ಲಿ ನವೀಕೃತ 3 ಅಂಗನವಾಡಿ ಉದ್ಘಾಟಿಸಿದ ಸುಜಾ ಜಾರ್ಜ್

ಮಕ್ಕಳ ದಿನಾಚರಣೆ: ಸರ್ವಜ್ಞನಗರದಲ್ಲಿ ನವೀಕೃತ 3 ಅಂಗನವಾಡಿ ಉದ್ಘಾಟಿಸಿದ ಸುಜಾ ಜಾರ್ಜ್

November 14, 2026
ಮಹಿಳೆಯೂ ಅಲ್ಲ, ಪುರುಷರೂ ಅಲ್ಲ; ತಮ್ಮ ಲಿಂಗ ಗುರುತಿನ ಬಗ್ಗೆ ಬಹಿರಂಗವಾಗಿ ಮಾತನಾಡಿದ ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಹೇಳಿದ್ದೇನು ?

ಮಹಿಳೆಯೂ ಅಲ್ಲ, ಪುರುಷರೂ ಅಲ್ಲ; ತಮ್ಮ ಲಿಂಗ ಗುರುತಿನ ಬಗ್ಗೆ ಬಹಿರಂಗವಾಗಿ ಮಾತನಾಡಿದ ವಿದ್ಯಾರ್ಥಿ ನಾಯಕಿ ನೇಹಾ ಬೋರಾ ಹೇಳಿದ್ದೇನು ?

November 14, 2026
ಚಪ್ಪಾಳೆ ತಟ್ಟಿದರೆ ಸೇವಕರು ಓಡಿಬರುತ್ತಾರೆಯೇ? ಅರಮನೆಯ ಜೀವನದ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳೇನು?

ಚಪ್ಪಾಳೆ ತಟ್ಟಿದರೆ ಸೇವಕರು ಓಡಿಬರುತ್ತಾರೆಯೇ? ಅರಮನೆಯ ಜೀವನದ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳೇನು?

November 14, 2026
ದರ್ಶನ್–ಪವಿತ್ರಾ ಗೌಡ ಮಾತುಕತೆ ಸೋರಿಕೆ ವಿವಾದ; ಮೌನ ಮುರಿದರೇ ವಿಜಯಲಕ್ಷ್ಮಿ? ಇನ್‌ಸ್ಟಾ ಸ್ಟೋರಿ ವೈರಲ್!

ದರ್ಶನ್–ಪವಿತ್ರಾ ಗೌಡ ಮಾತುಕತೆ ಸೋರಿಕೆ ವಿವಾದ; ಮೌನ ಮುರಿದರೇ ವಿಜಯಲಕ್ಷ್ಮಿ? ಇನ್‌ಸ್ಟಾ ಸ್ಟೋರಿ ವೈರಲ್!

November 14, 2026
Next Post
ಡಿಸೆಂಬರ್‌ 26 ರಿಂದ    ಬೆಳಗಾವಿಯಿಂದ ಇವಿಎಂ ವಿರುದ್ದ ಆಂದೋಲನ ಆರಂಬಿಸಲಿರುವ ಕಾಂಗ್ರೆಸ್‌ ಪಕ್ಷ

ಡಿಸೆಂಬರ್‌ 26 ರಿಂದ ಬೆಳಗಾವಿಯಿಂದ ಇವಿಎಂ ವಿರುದ್ದ ಆಂದೋಲನ ಆರಂಬಿಸಲಿರುವ ಕಾಂಗ್ರೆಸ್‌ ಪಕ್ಷ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada