• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, May 25, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೆಎಸ್‌ಎಂಸಿಎ ಅಧ್ಯಕ್ಷ ಸತೀಶ್ ಸೇಲ್‌ರಿಂದ ಹಗಲು ದರೋಡೆ..!!

ಪ್ರತಿಧ್ವನಿ by ಪ್ರತಿಧ್ವನಿ
August 5, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ
0
ಕೆಎಸ್‌ಎಂಸಿಎ ಅಧ್ಯಕ್ಷ ಸತೀಶ್ ಸೇಲ್‌ರಿಂದ ಹಗಲು ದರೋಡೆ..!!
Share on WhatsAppShare on FacebookShare on Telegram

ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡುತ್ತಲೇ ಅಧಿಕಾರದ ಗದ್ದುಗೆ ಏರಿದ ರಾಜ್ಯ ಸರ್ಕಾರದಲ್ಲಿ ಇದೀಗ ಹಗಲು ದರೋಡೆಯೇ ನಡೆಯುತ್ತಿದೆ. ಕೆಎಸ್‌ಎಂಸಿಎ ಆಧ್ಯ್ಯಕ್ಷ ಹಾಗೂ ಶಾಸಕ ಸತೀಶ್ ಸೇಲ್ ಹಪಾಹಪಿತನ ಇಲ್ಲಿನ ವ್ಯಾಪಾರ ಸಹವರ್ತಿಗಳ ನಿದ್ದೆಗೆಡಿಸಿದೆ.

ADVERTISEMENT
  ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ಮೇಲೆ ಪೇಸಿಎಂ ಸರ್ಕಾರ ಎಂದು ಆರೋಪಿಸಿ  ದೊಡ್ಡ ಅಭಿಯಾನವನ್ನೇ ರಾಜ್ಯ ಕಾಂಗ್ರೆಸ್ ಕೈಗೊಂಡಿತ್ತು. ಇದರಲ್ಲಿ ಭಾಗಶಃ ಯಶಸ್ವಿಯನ್ನು ಕಂಡು ಅಧಿಕಾರದ ಗದ್ದುಗೆಯನ್ನೂ ಏರಿತು. ಪ್ರಸ್ತುತ ಇದೇ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರ ಶೂನ್ಯವಾಗಿದೆ. ಇಡೀ ಸರ್ಕಾರದ ಆಡಳಿತ ಯಂತ್ರ ಭ್ರಷ್ಟಾಚಾರದ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದೆ. ಇದಕ್ಕೆ ರಾಜ್ಯ ಸರ್ಕಾರದ ಅದೀನದಲ್ಲಿ ಬರುವ ಉದ್ಯಮವಾದ ಕೆಎಸ್‌ಎಂಸಿಎ ಕೂಡ ಹೊರತಾಗಿಲ್ಲ.

  ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಭ್ರಷ್ಟಾಚಾರದ ವಿಷಯ ತಾಂಡವವಾಡುತ್ತಿರುವಾಗಲೇ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟೆಸಿಂಗ್ ಲಿಮಿಟೆಡ್ ಸಂಸ್ಥೆಯಲ್ಲಿ (ಕೆಎಸ್‌ಎಂಸಿಎ) ನಡೆಯುತ್ತಿರುವ ಹಗಲು ದರೋಡೆ ಬೆಳಕಿಗೆ ಬರುತ್ತಿದೆ. ಈ ಸಂಸ್ಥೆಯ ಅಧ್ಯಕ್ಷ ಸತೀಶ್ ಸೇಲ್ ನೇರವಾಗಿ ಅಖಾಡಕ್ಕೆ ಇಳಿದು ಹಗಲು ದಡೋಡೆಯ ನಾಯಕನಾಗಿ ಲೂಟಿಗಿಳಿದಿದ್ದಾರೆ. ವ್ಯಾಪಾರ ಸಹವರ್ತಿಗಳಿಂದ ಬೇಕಾಬಿಟ್ಟಿಯಾಗಿ ಹಣ ಲೂಟಿ ಮಾಡುತ್ತಿದ್ದು, ಅವರ ನಿದ್ದೆಗೆಡಿಸುತ್ತಿದ್ದಾರೆ. ಇದರಿಂದಾಗಿ ವ್ಯಾಪಾರ ಸಹವರ್ತಿಗಳಲ್ಲಿ ಕೆಲವರು ನಮಗೂ ಆತ್ಮಹತ್ಯೆ ಮಾಡಿಕೊಳ್ಳುವುದೇ ದಾರಿಯೇನೋ ಎಂಬ ಮನಸ್ಥಿಗೆ ತಲುಪಿದ್ದಾರೆ.


  ಕೆಎಸ್‌ಎಂಸಿಎ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಡಿಯಲ್ಲಿ ಬರುವ ಒಂದು ಉದ್ಯಮವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರÀಕ್ಕೆ ಸಂಬಂಧಿಸಿದ ಇವೆಂಟ್‌ಗಳು, ಪ್ರಿಂಟಿಂಗ್ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದ ಜಾಹೀರಾತು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಪ್ರತಿಯೊಂದು ವಿಭಾಗದಲ್ಲಿಯೂ ಕಾರ್ಯನಿರ್ವಹಿಸಲು  ವ್ಯಾಪಾರ ಸಹವರ್ತಿಗಳನ್ನು ನೇಮಿಸಿಕೊಳ್ಳಲಾಗಿದೆ. ಅಂದ ಹಾಗೆ ಕೆಎಸ್‌ಎಂಸಿಎ ಇವರಿಗೇನು ನೇರವಾಗಿ ಕೆಲಸ ಕೊಡುವುದಿಲ್ಲ. ವ್ಯಾಪಾರ ಸಹವರ್ತಿಗಳೇ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸಗಳನ್ನು ಹುಡುಕಿ ಅಲ್ಲಿನ ವಿವಿಧ ಸವಾಲುಗಳನ್ನು ಹಿಮ್ಮೆಟ್ಟಿಸಿ ಕೆಲಸವನ್ನು ತರಬೇಕಾಗುತ್ತದೆ. ಹಾಗೂ ಕೆಎಸ್‌ಎಂಸಿಎ ಮೂಲಕ ಕೆಲಸ ಮಾಡಬೇಕಾಗುತ್ತದೆ. ಅಲ್ಲಿಗೆ ಕೆಲಸವನ್ನು ತರುವ ಹಾಗೂ ಆ ಕೆಲಸವನ್ನು ಕಾರ್ಯಗತಗೊಳಿಸುವ ಮತ್ತು ಅದಕ್ಕೆ ಸಂಬಂಧಿಸಿದ ಬಿಲ್ಲುಗಳ ಮೊತ್ತವನ್ನು ಸಹ ಸಂಬಂಧಿಸಿದ ಇಲಾಕೆಯಿಂದ ತರುವ ಗುರುತರ ಜವಾಬ್ದಾರಿ ಕೂಡ ವ್ಯಾಪಾರ ಸಹವರ್ತಿಗಳದ್ದೆ. ಪ್ರತ್ರ ವ್ಯವಹಾರ ಮಾತ್ರ ಕೆಎಸ್‌ಎಂಸಿಎ ಮಾಡುತ್ತದೆಯಾದರೂ ಅದರ ಕಂಟೆಂಟ್  ಕೂಡ ವ್ಯಾಪಾರ ಸಹವರ್ತಿಗಳೇ ಕೊಡಬೇಕು. ಲೆಟರ್‌ಹೆಡ್‌ಗೆ ಸಹಿ ಮಾಡುವುದು ಒಂದನ್ನು ಬಿಟ್ಟರೆ ಇನ್ನಾವುದೇ ಘನಕಾರ್ಯ ಕೆಎಸ್‌ಎಂಸಿಎ ಮಾಡಿದ ಉದಾಹರಣೆ ಇಲ್ಲ.


 ಭ್ರಷ್ಟಾಚಾರದ ಮೂಲ:-
        ಭ್ರಷ್ಟಾಚಾರದ ಮೂಲ ಇರುವುದೇ ಇಲ್ಲಿ. ವ್ಯಾಪಾರ ಸಹವರ್ತಿಗಳು ಕಷ್ಟ ಪಟ್ಟು ಕೆಲಸ ನಿರ್ವಹಿಸಿ ಬಿಲ್ಲುಗಳ ಮೊತ್ತವನ್ನು ಇಲಾಖೆಗಳ ಮೂಲಕ ಕೆಎಸ್‌ಎಂಸಿಎಗೆ ಸಂದಾಯ ಮಾಡಿಸುತ್ತಾರೆ. ಅಸಲಿ ಆಟ ಶುರುವಾಗುವುದೇ ಇಲ್ಲಿ. ಅಧಿಕೃತವಾಗಿ ಶೇಕಡ ೫ ರಷ್ಟು ಸೇವಾಶುಲ್ಕ ಪಡೆಯುವ ಕೆಎಸ್‌ಎಂಸಿಎ ಅನಧಿಕೃತವಾಗಿ ಶೇಕಡಾ ೧೦ ರಷ್ಟು ಲಂಚವನ್ನು ಕೊಡುವಂತೆ ಇಲ್ಲಿನ ಭ್ರಷ್ಟ ಅಧ್ಯಕ್ಷ ಸತೀಶ್ ಸೇಲ್ ಪೀಡಿಸುತ್ತಾ ವಸೂಲಿ ದಂದೆಗೆ ಇಳಿದಿದ್ದಾರೆ. ಕೊಡಲು ಒಪ್ಪದಿದ್ದರೆ ವ್ಯಾಪಾರ ಸಹವರ್ತಿಗಳಿಗೆ ಯಾವುದೇ ರೀತಿಯ ಸಹಕಾರ ನೀಡುವುದಿಲ್ಲ. ಮೀಡಿಯ ಅಂಡ್ ಇವೆಂಟ್ಸ್ ನಲ್ಲಿ ಭರತ್ ಹಾಗೂ ಪ್ರಿಂಟಿಂಗ್ ಸೆಕ್ಷನ್ ನಲ್ಲಿ ವಿಜಯ್ ಎಂಬ ಇಬ್ಬರು ಹಂಗಾಮಿ ನೌಕರರಿದ್ದರೆ. ಇವರುಗಳನ್ನು ಈ ಅಧ್ಯಕ್ಷ ಮುಖ್ಯ ಧಾಳಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಇವರುಗಳ ಮೂಲಕ ವ್ಯಾಪಾರ ಸಹವರ್ತಿಗಳಿಗೆ ಹಣಕ್ಕಾಗಿ ಬೇಡಿಕೆ ಇಡುವುದು ಹಾಗೂ ಹಣ ವಸೂಲಿಗೆ ಮತ್ತೊಬ್ಬ ಮಧ್ಯವರ್ತಿಯನ್ನು ನೇಮಿಸಿಕೊಂಡಿದ್ದರೆ. ನಿಗದಿತ ಲಂಚದ ಹಣವನ್ನು ಇವನಿಗೆ ತಲುಪಿಸಬೇಕು. ಇಲ್ಲದಿದ್ದರೆ ಕಿರುಕಳ ತಪ್ಪಿದ್ದಲ್ಲ. 

     

ತಮಾಷೆಯೆಂದರೆ ಇಲ್ಲಿನ ವ್ಯವಸ್ಥಾಪಕ ನಿರ್ದೇಶಕರಂತೂ ಮೂಖ ಪ್ರೇಕ್ಷಕರಾಗಿ ಉಳಿದಿದ್ದಾರೆ. ಕಪ್ಪ ಕಾಣಿಕೆಯ ಒಂದಷ್ಟು ಪಾಲು ಇವರಿಗೂ ಸೇರುತ್ತಿರಬಹುದೇನೊ. ಆದರೆ ಆ ವಿಷಯದಲ್ಲಿ ಇವರು ಚಕಾರವೆತ್ತುವುದಿಲ್ಲ. ಲಂಚದ ವಿಷಯ ಅಧ್ಯಕ್ಷರ ಬಳಿಯೇ ಮಾತನಾಡಿ ಎಂದು ತಪಸ್ಸಿಗೆ ಜಾರಿ ಹೋಗುತ್ತಾರೆ. ಬೇರೆ ಇಲಾಖೆಗಳಲ್ಲಿ ರಾಜಕಾರಣಿಗಳು ಅಧಿಕಾರಿಗಳ ಮೂಲಕ ಭ್ರಷ್ಟಾಚಾರವೆಸಗಿದರೆ, ಇಲ್ಲಿ ಅಧಿಕಾರಿಗಳನ್ನು ಹಿಂದಕ್ಕೆ ಕೂರಿಸಿ ಅಧ್ಯಕ್ಷನೇ ಫೀಲ್ಡಿಗಿಳಿದಿದ್ದಾನೆ. ರಾಜ್ಯ ಸರ್ಕಾರಕ್ಕೆ ಮೊತ್ತೊಂದು ಕಪ್ಪು ಮಸಿ ಈ ಅಧ್ಯಕ್ಷ ಸತೀಶ್ ಸೇಲ್. ಈತನನ್ನು ಕಿತ್ತೊಗೆದು ಈ ಉದ್ಯಮವನ್ನು ಅಭಿವೃದ್ದಿಪಡಿಸದಿದ್ದರೆ, ಇದು ಕೂಡ ರಾಜ್ಯ ಸರ್ಕಾರದ ಪಾಲಿಗೆ ಮತ್ತೊಂದು ಕಪ್ಪು ಮಸಿಯಾಗುವುದರಲ್ಲಿ ತಪ್ಪಿಲ್ಲ.

—–ನೊಂದ ವ್ಯಾಪಾರ ಸಹವರ್ತಿಗಳ ಪರವಾಗಿ

Tags: Congress GovtCongress PartyDKShivakumarKarwarKarwar MLASatheesh SelSiddaramaiahhಸಿದ್ದರಾಮಯ್ಯ
Previous Post

ಕೇರಳದ ವಯನಾಡಿಗೆ ಭೇಟಿ ಕೊಟ್ಟ ರಾಹುಲ್ ಗಾಂಧಿ ! ಸಹೋದರನಿಗೆ ಪ್ರಿಯಾಂಕ ಗಾಂಧಿ ಸಾಥ್ !

Next Post

ಡಾರ್ಲಿಂಗ್ ಕೃಷ್ಣ ಸಿನಿಮಾ ರಂಗಕ್ಕೆ ಬರಲು ಕಾರಣವೇನು..?

Related Posts

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!
Top Story

ಕಾಂಗ್ರೆಸ್‌ ವೈಫಲ್ಯಗಳಿಂದ ಗೆಲ್ತೀವಿ ಎಂಬ ಭ್ರಮೆಯಿಂದ ಹೊರಬನ್ನಿ : ಬಿಜೆಪಿ ನಾಯಕರಿಗೆ ನಿತಿನ್‌ ನಬಿನ್‌ ಸಂಘಟನೆಯ ಪಾಠ..!

by ಪ್ರತಿಧ್ವನಿ
May 24, 2026
0

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್‌ ನಬಿನ್‌ ಕರ್ನಾಟಕ ರಾಜ್ಯ ಪ್ರವಾಸದಲ್ಲಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಲೆಯ ಎದುರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಸಂಘಟನೆಯ ದೃಷ್ಟಿಯಿಂದಲೂ...

Read moreDetails
BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

BREAKING NEWS : ಭಟ್ಕಳದಲ್ಲಿ ಭೀಕರ ದುರಂತ! : ಕಪ್ಪೆ ಚಿಪ್ಪು ತೆಗೆಯಲು ಹೋದವರು ಜಲಸಮಾಧಿ

May 24, 2026
ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

ವಿಶೇಷಚೇತನರ ಸಬಲೀಕರಣಕ್ಕೆ ಕೈ ಜೋಡಿಸೋಣ : ಸಂತೋಷ್‌ ಲಾಡ್‌ ಕರೆ..

May 24, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

May 23, 2026
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
Next Post

ಡಾರ್ಲಿಂಗ್ ಕೃಷ್ಣ ಸಿನಿಮಾ ರಂಗಕ್ಕೆ ಬರಲು ಕಾರಣವೇನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada