ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಬಳಿಕ ದಾವಣಗೆರೆ ನಗರ ಸಹಜ ಸ್ಥಿತಿಯತ್ತ ಬರುತ್ತಿದೆ. ಅಂಗಡಿ ಮುಗ್ಗಟ್ಟು ಆರಂಭ ಆಗಿದ್ದು, ಜನ ಜೀವನ ಎಂದಿನಂತೆ ಶುರು ಆಗಿದೆ. ಅರಳಿಮರ ಸರ್ಕಲ್, ನೂರಾಣಿ ಶಾದಿ ಮಹಲ್ ರಸ್ತೆ ಸೇರಿದಂತೆ ಬಹುತೇಕ ಕಡೆ ಸಹಜ ಸ್ಥಿತಿ ಬಂದಿದೆ. ಆದರೂ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇವತ್ತು ಶುಕ್ರವಾರ ಆದ ಹಿನ್ನೆಲೆ, ಮಸೀದಿಗಳ ಸುತ್ತಲು ಭದ್ರತೆ ಕೈಗೊಳ್ಳಲಾಗಿದೆ.
ದಾವಣಗೆರೆಯ ಆನೆಕೊಂಡ ಬಡಾವಣೆಯಲ್ಲಿ ಪುಂಡರು ದಾಂಧಲೆ ಮಾಡಿದ ಪ್ರಕರಣದಲ್ಲಿ 50-60 ಜನರ ಗುಂಪಿನಲ್ಲಿ ಆಗಮಿಸಿ ಆನೆಕೊಂಡ ಬಡಾವಣೆಯಲ್ಲಿ ದಾಂಧಲೆ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ಕೈಯಲ್ಲಿ ಮಚ್ಚು ದೊಣ್ಣೆ ಸಹಿತ ಮಾರಾಕಾಸ್ತ್ರಗಳನ್ನು ಹಿಡಿದು ಓಡಾಡಿದೆ ಗುಂಪು. ಆನಕೊಂಡ ಬಡಾವಣೆಯಲ್ಲಿ ಆತಂಕ ಸೃಷ್ಟಿಸಿದ್ದಾರೆ ಪುಂಡರು. ಮನೆ ಹೊರಗೆ ನಿಲ್ಲಿಸಿದ್ದ ಬೈಕ್, ಕಾರು ಜಖಂ ಗೊಳಿಸಿದ್ದಾರೆ. ಅರಳೀಮರ ಸರ್ಕಲ್ ನಲ್ಲಿ ಆದ ಘಟನೆಗೆ ಆನೆಕೊಂಡದಲ್ಲಿ ಸಾರ್ವಜನಿಕರ ವಸತಿ ಪ್ರದೇಶದಲ್ಲಿ ನುಗ್ಗಿ ದಾಂಧಲೆ ಮಾಡಿದ್ದಾರೆ. ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದ ಪೊಲೀಸರು.ಆರೋಪಿಗಳನ್ನು ಬಂಧಿಸಿದ್ದಾರೆ.
ದಾವಣಗೆರೆ ಐಜಿಪಿ ರಮೇಶ್ ಬಿ ಮಾತನಾಡಿ ಸಿಚುವೇಷನ್ ಕಂಟ್ರೋಲ್ನಲ್ಲಿದೆ. 144 ಸೆಕ್ಷನ್ ಹಾಕುವ ಪರಿಸ್ಥಿತಿ ಇಲ್ಲ. ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ ಎಂದಿದ್ದಾರೆ. ಈ ಗಲಭೆಗೆ ಕಾರಣರಾದ ಎರಡು ಕೋಮಿನ ಮುಖಂಡರ ಮೇಲೆ ಪ್ರಕರಣ ದಾಖಲಾಗಿದೆ. ಇದುವರೆಗೆ ನಾಲ್ಕು FIR ದಾಖಲು ಮಾಡಿದ್ದು, ಇದುವರೆಗೆ 30 ಜನರನ್ನು ಅರೆಸ್ಟ್ ಮಾಡಲಾಗಿದೆ. ಕಲ್ಲು ತೂರಾಟ ಮಾಡಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ. ಸಿಸಿಟಿವಿ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದಿದ್ದಾರೆ.
ದಾವಣಗೆರೆ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣದ ಬಗ್ಗೆ ಪರಿಶೀಲನೆಗೆ ಆಜಾದ್ ನಗರ ಪೊಲೀಸ್ ಠಾಣೆಗೆ ಲಾ ಅಂಡ್ ಆರ್ಡರ್ ADGP ಹಿತೇಂದ್ರ ಭೇಟಿ ನೀಡಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದು, ಭದ್ರತೆ ಹಾಗು ಘಟನೆ ಕಾರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಐಜಿಪಿ ರಮೇಶ್ ಬಿ, ದಾವಣಗೆರೆ ಎಸ್ಪಿ ಉಮಾ ಪ್ರಶಾಂತ, ಹಾವೇರಿ ಎಸ್ಪಿ ಅಂಶುಕುಮಾರ್ ಜೊತೆ ಚರ್ಚೆ ನಡೆಸಿದ್ದಾರೆ.