
ಚಿಕ್ಕಬಳ್ಳಾಪುರದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ಪ್ರೇಮಿಗಳು Lovers ಸಾವನ್ನಪ್ಪಿರುವ ಘಟನೆ ನಡೆದಿದೆ. ಆಷಾಡಕ್ಕೆ ತವರು ಮನೆಗೆ ಬಂದು ಮಾಜಿ ಪ್ರಿಯಕರನೊಂದಿಗೆ Suicide ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೊಂಟಕ್ಕೆ ವೇಲ್ ಬಿಗಿದುಕೊಂಡು ಕೃಷಿ ಹೊಂಡಕ್ಕೆ Krushi Honda ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಪ್ರೇಮಿ. 19 ವರ್ಷದ ಅನುಷಾ ಮತ್ತು 21 ವರ್ಷದ ವೇಣು ಮೃತ ದುರ್ದೈವಿಗಳು. ಚಿಂತಾಮಣಿ Chinthamani ತಾಲೂಕಿನ ದೊಡ್ಡಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. 2 ವರ್ಷದಿಂದ ಪ್ರೀತಿಸುತ್ತಿದ್ದ ಅನುಷಾ ಮತ್ತು ವೇಣು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರಿಬ್ಬರ ಪ್ರೀತಿಯನ್ನು ಒಪ್ಪದ ಕುಟುಂಬಸ್ಥರು, ಬೇರೆ ಯುವಕನೊಂದಿಗೆ ಯುವತಿಗೆ ಮದುವೆ ಮಾಡಿದ್ದರು. ಚೌಡರೆಡ್ಡಿ ಎಂಬ ವ್ಯಕ್ತಿ ಜೊತೆಯಲ್ಲಿ ಮದುವೆ ನಡೆದಿತ್ತು. ಪ್ರೀತಿಗೆ ನಿರಾಕರಿಸಿ ಬೇರೆ ಯುವಕನ ಜೊತೆಗೆ ಮದುವೆ ಮಾಡಿದ್ದರಿಂದ ಮನನೊಂದಿದ್ದ ಯುವತಿ, ತವರಿಗೆ ಬಂದಾಗ ಪ್ರೇಮಿ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕುಟುಂಬಸ್ಥರು ಮೊದಲೇ ನಮ್ಮ ಪ್ರೀತಿಗೆ ಅಡ್ಡಿಯಾಗಿದ್ದಾರೆ. ನಾವಿಬ್ಬರೂ ಜೊತೆಗೆ ಬಾಳುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಮತ್ತೆ ನಾವಿಬ್ಬರು ಒಟ್ಟಿಗೆ ಬಾಳಲು ಬಿಡುವುದಿಲ್ಲ ಎಂದು ನಿರ್ಧಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದು, ಶನಿವಾರ ಮೃತದೇಹಗಳು ಪತ್ತೆಯಾಗಿವೆ. ಇಬ್ಬರು ಒಟ್ಟಿಗೆ ಬಟ್ಟೆ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.