ನಾಡಹಬ್ಬ ದಸರಾಗೆ ಇನ್ನೆರಡು ತಿಂಗಳುಗಳು ಬಾಕಿಯಿದ್ದು ಈಗಾಗಲೇ ಸರ್ಕಾರ ಹಬ್ಬವನ್ನ ಅದ್ಧೂರಿಯಾಗಿ ನಡೆಸಲು ಭರದ ಸಿದ್ದತೆ ನಡೆಸಿದೆ.
ಇನ್ನು ದಸರಾದ ಪ್ರಮುಖ ಆಕರ್ಷಣೆ ಎಂದೇ ಹೇಳಬಹುದಾದ ಗಜಪಡೆ ಭಾನುವಾರ ಮೈಸೂರು ಪ್ರವೇಶಿಸಿದ್ದು ವೀರಹೊಸಹಳ್ಳಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಆನೆಗಳನ್ನು ಬರಮಾಡಿಕೊಳ್ಳಲಾಗಿದೆ.

ಸಚಿವರಾದ ಎಸ್.ಟಿ.ಸೋಮಶೇಖರ್, ಉಮೇಶ್ ಕತ್ತಿ, ಮೈಸೂರು ಜಿಲ್ಲಾಡಳಿತ ಪೂಜೆ ಮಾಡಿ ಬರಮಾಡಿಕೊಳ್ಳುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದ್ದಾರೆ.
ಈ ವೇಳೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯನ್ನು ಸ್ವಾಗತಿಸಲು ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೆರಗು ಸಾಥ್ ನೀಡಿತ್ತು.
