
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಆರೋಪಿ ಆಗಿರುವ ದರ್ಶನ್, ತನ್ನ ಹಳೇ ಟೀಂ ಬಿಟ್ಟು ಹೊಸ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಕಂಡು ಕಂಡಲ್ಲಿ ಪೂಜೆ ಮಾಡುವಂತಾಗಿದೆ. ಮೈಸೂರಿನ ಚಾಮುಂಡಿ, ಚನ್ನೊಲಟ್ಟಣದ ಗೌಡಗೆರೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಕೆ ಮಾಡಿದ ಬಳಿಕ ಇದೀಗ ಕೇರಳದ ಕಡೆಗೆ ಹೊರಟಿದ್ದಾರೆ.

ನಟ ದರ್ಶನ್ ಶತ್ರು ಸಂಹಾರ ಪೂಜೆ ಮಾಡಿಸಿದ್ದಾರೆ ಎನ್ನಲಾಗಿದೆ. ಕೇರಳದ ಪ್ರಸಿದ್ದ ದೇವಸ್ಥಾನಲ್ಲಿ ಕೊಲೆ ಆರೋಪಿ ಆಗಿರುವ ನಟ ದರ್ಶನ್ ಕಾಣಿಸಿಕೊಂಡಿದ್ದು, ಶತ್ರು ಸಂಹಾರ ಪೂಜೆ ನೆರವೇರಿಸಿದ್ದಾರೆ ಅನ್ನೋ ಮಾಹಿತಿಗಳು ಸಿಕ್ಕಿವೆ. ಶತ್ರು ಸಂಹಾರ ಪೂಜಗೆ ಪ್ರಸಿದ್ದವಾದ ಕೇರಳದ ಭಗವತೀ ದೇವಸ್ಥಾನಕ್ಕೆ ನಟ ದರ್ಶನ್ ಕುಟುಂಬ ಭೇಟಿ ನೀಡಿದೆ.

ಕೇರಳದ ಕಣ್ಣೂರಿನ ಮಾಡಾಯಿ ಕಾವು ದೇವಸ್ಥಾನಕ್ಕೆ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಮಗ ಹಾಗೂ ನಟ ಧನ್ವೀರ್ ಜೊತೆ ಆಗಮಿಸಿದ್ದಾರೆ. ಮಾಡಾಯಿ ಕಾವು ಶ್ರೀ ಭಗವತೀ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿ ದೇವರ ದರ್ಶನ ಪಡೆದಿದ್ದಾರೆ. ಈ ಹಿಂದೆಯೂ ಹಲವು ರಾಜಕಾರಣಿಗಳು ಭಗವತೀ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡಿಸಿದ್ದರು.
ಕೇರಳದ ಕಣ್ಣೂರು ಜಿಲ್ಲೆಯ ಮಾಡಾಯಿ ಕಾವು ಭಗವತೀ ಕ್ಷೇತ್ರ ಐತಿಹಾಸಿಕ ಸ್ಥಳಗಳಲ್ಲಿ ಒಂದು. ಹಲವು ಪ್ರಾಚೀನ ಹಾಗೂ ಐತಿಹಾಸಿಕ ಪುಣ್ಯಕ್ಷೇತ್ರಗಳಲ್ಲಿ ಮಾಡಾಯಿ ಕಾವು ಭಗವತೀ ಕ್ಷೇತ್ರವೂ ಒಂದು. ದೇವಿಯ ಅವತಾರವಾದ ಭದ್ರಕಾಳಿ ಇಲ್ಲಿನ ಪ್ರಮುಖ ಆರಾಧ್ಯ ದೇವಿ. ಶತ್ರು ಸಂಹಾರ ಪೂಜೆಯು ಇಲ್ಲಿನ ವಿಶೇಷ ಪೂಜೆಗಳಲ್ಲಿ ಒಂದು. ಮೂಶಿಕ ರಾಜವಂಶದವರು ಸ್ಥಾಪಿಸಿರುವ ಕ್ಷೇತ್ರವಾಗಿದ್ದು, ಶತ್ರು ಸಂಹಾರ ಪೂಜೆ, ಮಾಡಾಯಿ ಕಾವು ಕ್ಷೇತ್ರದ ಪ್ರಸಿದ್ಧ ಪೂಜೆ.

ಶತ್ರು ನಾಶ, ಕಷ್ಟ ನಿವಾರಣೆಗೆ ಮಾಡುವ ಶತ್ರು ಸಂಹಾರ ಪೂಜೆ ಇದಾಗಿದ್ದು, ಬೆಳಗ್ಗೆ 8.30, ಸಂಜೆ 5.30ರ ವೇಳೆಗೆ ನಡೆಯುವ ಪೂಜೆ ಇದಾಗಿದೆ. ಈ ನಡುವೆ ಸಂಕಲ್ಪ ಮಾಡಿ ಪ್ರಸಾದ ತೆಗೆದುಕೊಳ್ಳಬಹುದು. ಅಸುರ ಕ್ರಿಯೆಯ ಮೂಲಕ ದೇವಿಗೆ ಎದುರು ಶತ್ರು ಸಂಹಾರ ಪೂಜೆ ನಡೆಯುತ್ತದಷೆ. ಕೇರಳ ಹಾಗೂ ಮಂಗಳೂರು ಭಾಗದ ಭಕ್ತರು ಅತೀ ಹೆಚ್ಚಾಗಿ ಭೇಟಿ ನೀಡುವ ಮಾಡಾಯಿ ಕಾವು ಕ್ಷೇತ್ರದಲ್ಲಿ ದರ್ಶನ್ ಕುಟುಂಬ ಪೂಜೆ ಸಲ್ಲಿಸಿದೆ.