ನಟ ದರ್ಶನ್ ಜೊತೆಗೆ ರೌಡಿಶೀಟರ್ ಜನಾರ್ಧನ್ ಅಲಿಯಾಸ್ ಜಾನಿ ಮಗ ರೌಡಿ ಸತ್ಯ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದು ಬಟಾಬಯಲಾಗಿತ್ತು. ನಟ ದರ್ಶನ್ ಜೊತೆಗೆ ಮಾತನಾಡಿರುವ ವಿಚಾರವಾಗಿ ಪೊಲೀಸರು ತನಿಖೆ ಮಾಡ್ತಿದ್ದು, ವಿಡಿಯೋ ವೈರಲ್ ಆಗ್ತಿದ್ದಂತೆ ಸತ್ಯನನ್ನು ಅರೆಸ್ಟ್ ಮಾಡಲಾಗಿದೆ.
ವಿಡಿಯೋ ವೈರಲ್ ಆಗ್ತಿದ್ದಂತೆ ತಲೆಮರೆಸಿಕೊಂಡಿದ್ದ ರೌಡಿ ಸತ್ಯನನ್ನು ಬ್ಯಾಡರಹಳ್ಳಿ ಪೊಲೀಸರು ಮಂಡ್ಯದಲ್ಲಿ ಬಂಧಿಸಿದ್ದಾರೆ. ಮಂಡ್ಯದಲ್ಲಿ ತಲೆ ಮರೆಸಿಕೊಂಡಿದ್ದ ರೌಡಿ ಸತ್ಯನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಡಿಯೋ ಕಾಲ್ ಮಾಡಿದ್ದರ ಬಗ್ಗೆ ವಿಚಾರಣೆ ನಡೆಸ್ತಿದ್ದಾರೆ. ಈ ನಡುವೆ ಜೈಲಿನ ಮತ್ತೊಂದು ವಿಡಿಯೋ ರಿಲೀಸ್ ಆಗಿದೆ.
ಜೈಲಿನಲ್ಲಿ ನಟ ದರ್ಶನ್ ಫೋಟೋ ವೈರಲ್ ಆಗ್ತಿದ್ದಂತೆ ಈಗ ಪರಪ್ಪನ ಅಗ್ರಹಾರದ ಒಂದೊಂದೇ ಕರ್ಮಕಾಂಡಗಳು ಬಯಲಾಗ್ತಿದೆ. ರೌಡಿಶೀಟರ್ ಆಗಿರುವ ಕುಳ್ಳ ಸೀನಾ ಜೈಲಿನಲ್ಲೇ ಭರ್ಜರಿಯಾಗಿ ಬರ್ತ್ಡೇ ಮಾಡಿಕೊಂಡಿದ್ದಾನೆ. ಬರ್ತ್ ಡೇ ಫೋಟೋಗಳು ಇದೀಗ ವೈರಲ್ ಆಗಿದೆ. ಗನ್ ಮಾದರಿಯ ಕೇಕ್ ತರಿಸಿ ಜೈಲಿನಲ್ಲೇ ಬರ್ತ್ಡೇ ಆಚರಿಸಿಕೊಂಡಿದ್ದಾನೆ. ಹೊಸ ಫೋಟೋಗಳು ವೈರಲ್ ಆಗಿದ್ದು ಜೈಲು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.