ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ (Renuka Swamy)ಯ ಹತ್ಯೆ ತುಂಬಾ ಕ್ರೂರವಾಗಿ ನಡೆದಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ.
ರೇಣುಕಾಸ್ವಾಮಿಯನ್ನು (Kidnap) ಬೆಂಗಳೂರಿಗೆ ಕರೆ ತಂದು ದರ್ಶನ್ ಟೀಂ (Darshan Team) ಕ್ರೂರವಾಗಿ ಕೊಲೆ ಮಾಡಿರುವ ವಿಚಾರ ಬಹಿರಂಗವಾಗಿದೆ. ಮೆಡಿಕಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿಯನ್ನು ಶನಿವಾರ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆ ತಂದು 24 ಗಂಟೆ ನಿರಂತರ ಚಿತ್ರ ಹಿಂಸೆ ನೀಡಲಾಗಿತ್ತು ಎನ್ನಲಾಗಿದೆ.
ಸ್ನೇಹಿತ ಹಾಗೂ ಉದ್ಯಮಿ ವಿನಯ್ಗೆ ಸೇರಿದ ಆರ್.ಆರ್ ನಗರದದ ಪಟ್ಟಣಗೆರೆ ಗೋಡೌನ್ ಗೆ ರೇಣುಕಾಸ್ವಾಮಿಯನ್ನು ಕರೆತಂದು ಕ್ರೂರವಾಗಿ ಚಿತ್ರಹಿಂಸೆ ನೀಡಲಾಗಿತ್ತು ಎಂಬ ವಿಷಯ ಬಹಿರಂಗವಾಗಿದೆ.
ಪಾಪಿಗಳು ರೇಣುಕಾಸ್ವಾಮಿಯ ಮೂಗು, ಬಾಯಿ, ದವಡೆ ಕತ್ತರಿಸಿ ವಿಕೃತಿ ಮೆರೆದಿದ್ದರು ಎನ್ನಲಾಗಿದೆ. ಆನಂತರ ಕೊಲೆ ಮಾಡಿ ಸುಮ್ಮನಹಳ್ಳಿ ಬಳಿಯ ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಮುಂಭಾಗದಲ್ಲಿರುವ ರಾಜಕಾಲುವೆಗೆ ಎಸೆದಿದ್ದರು. ಪವಿತ್ರಾ ಗೌಡಗೆ (Pavithra Gowda) ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ರೇಣುಕಾಸ್ವಾಮಿ ಜೊತೆ ಸಂಪರ್ಕ ಸಾಧಿಸಲು ಹುಡುಗಿ ಹೆಸರಿನಲ್ಲಿ ಫೇಕ್ ಖಾತೆ ತೆರೆದು, ಹೊರಗೆ ಕರೆಯಿಸಿದ್ದರು ಎಂಬುವುದು ಬಹಿರಂಗವಾಗಿದೆ.
ಹಲ್ಲೆ ನಡೆದ ಸ್ಥಳದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಸ್ಥಳದಲ್ಲಿ ಇದ್ದರು ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾಗೌಡ ಬಂಧನವಾಗಿದ್ದಾರೆ.