ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case) ಕಳೆದ 4 ತಿಂಗಳಿಂದ ಜೈಲು ಹಕ್ಕಿಯಾಗಿದ್ದ ನಟ ದರ್ಶನ್ (Actir Darshan) ಕೊನೆಗೂ ಇಂದು ಬಿಡುಗಡೆಯ ಭಾಗ್ಯ ಕಂಡಿದ್ದಾರೆ. ಕೇವಲ 6 ವಾರಗಳಿಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಹಿನ್ನಲೆ ದರ್ಶನ್ ರಿಲೀಸ್ ಆಗಿದ್ದಾರೆ.
ಇಂದು ಬೆಳಿಗ್ಗೆಯೇ ನ್ಯಾಯಲಯ ತೀರ್ಪು ಪ್ರಕಟಿಸಿದ ಕಾರಣ, ಇಂದೇ ದರ್ಶನ್ ರನ್ನ ಜೈಲಿಂದ ರಿಲೀಸ್ ಮಾಡಿಸಲು ಸಹಕಾರಿಯಾಗಿದೆ. ಅನಾರೋಗ್ಯದ ಕಾರಣ ದರ್ಶನ್ ಗೆ ಈ ಕೊಲೆ ಕೇಸ್ ನಲ್ಲಿ ಮಧ್ಯಂತರ ಜಾಮೀನು ಸಿಕ್ಕಿದೆ.
ಇಂದು ಸಂಜೆ 5:30 ರ ಸುಮಾರಿಗೆ ಬಳ್ಳಾರಿ ಜೈಲಾಧಿಕಾರಿಗಳಿಗೆ (Bellary jail) ಸೆಷನ್ಸ್ ಕೋರ್ಟ್ ನ ರಿಲೀಸ್ ಆರ್ಡರ್ ಕೈಸೇರಿದ್ದು, ಜೈಲಿನ ಕೆಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ದರ್ಶನ್ ರನ್ನ ರಿಲೀಸ್ ಮಾಡಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆ ಬಳ್ಳಾರಿಯಿಂದ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ.