ರಾಜ್ಯದಲ್ಲಿ ನಡೀತಿರೋ ಬೆಳವಣಿಗೆಗಳ ಬಗ್ಗೆ ನಟಿ ರಮ್ಯಾ (Actress ramya) ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಜ್ವಲ್ (Prajwal revanna), ಸೂರಜ್ ರೇವಣ್ಣ (Suraj revanna), ನಟ ದರ್ಶನ್ (Actor darshan) ಕೇಸ್ ಪ್ರಸ್ತಾಪಿಸಿ ಟ್ವಿಟ್ ಮಾಡಿದ್ದಾರೆ.

ಅಧಿಕಾರ ಉಳ್ಳವರು, ಬಲವುಳ್ಳವರು, ಹಣ ಇದ್ದವರಿಂದ ರಾಜ್ಯದಲ್ಲಿ ನಿರಂತರ ಕಾನೂನು ಉಲ್ಲಂಘನೆಯಾಗುತ್ತಿದೆ. ಆದ್ರೆ ಬಡವರು, ಮಕ್ಕಳು, ಮಹಿಳೆಯರ ಮೇಲೆ ಕ್ರೌರ್ಯ ನಡೀತಿದೆ. ಎಲ್ಲವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದರಷ್ಟೇ ನ್ಯಾಯ ಸಿಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಎಲ್ಲಾ ಪ್ರಕರಣಗಳಲ್ಲಿ ನ್ಯಾಯ ಸಿಗದೇ ಇದ್ರೆ ಜನರಿಗೆ ಯಾವ ಸಂದೇಶ ನೀಡಿದಂತಾಗುತ್ತೆ? ಅಂತ ಪ್ರಕರಣಗಳನ್ನ ಉಲ್ಲೇಖಿಸಿ ಟೀಟ್ ಮಾಡಿ ಪ್ರಶ್ನಿಸಿದ್ದಾರೆ.