
ರೇಣುಕಾಸ್ವಾಮಿ ಕೊಲೆ ಕೇಸ್ನ ಆರೋಪಿ ಆಗಿರುವ ದರ್ಶನ್ ಅಂಡ್ ಟೀಂ, ಈಗಾಗಲೇ ಪೊಲೀಸ್ ಕಸ್ಟಡಿ ಮುಗಿಸಿ ನ್ಯಾಯಾಂಗ ಬಂಧನದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್ ನೋಡಲು ಅಭಿಮಾನಿಗಳ ದಂಡೇ ಜೈಲಿನ ಕಡೆಗೆ ಹರಿದು ಬರ್ತಿದೆ. ದರ್ಶನ್ ಭೇಟಿಯಾಗಲು ರಾಯಚೂರಿನ ಲಿಂಗಸಗೂರಿನಿಂದ ಪರಪ್ಪನ ಅಗ್ರಹಾರ ಜೈಲಿನ ಬಳಿ ಅಭಿಮಾನಿಗಳು ಬಂದಿದರು. ಆದ ನಿನ್ನೆ ದರ್ಶನ್ ಭೇಟಿಯಾಗಲು ಅಭಿಮಾನಿಗಳಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ಅಭಿಮಾನಿಗಳು ಕಣ್ಣೀರು ಹಾಕುತ್ತಾ ಹೋಗುವಂತಾಯ್ತು.

ದರ್ಶನ್ ಌಂಡ್ ಗ್ಯಾಂಗ್ ಒಟ್ಟಿಗೆ ಇರುವುದು ಸರಿಯಲ್ಲ ಅನ್ನೋದು ಎಸ್‌ಪಿಪಿ ಮನವಿಯಾಗಿತ್ತು. ಮೊನ್ನೆ ಶನಿವಾರ ನ್ಯಾಯಾಂಗ ಬಂಧನಕ್ಕೆ ಕಳುಹಿಸುವಾಗಲೇ ಈ ಬಗ್ಗೆ ಆಕ್ಷೇಪ ಎತ್ತಿದ್ದರು. ಕೊಲೆ ಆರೋಪಿಗಳನ್ನು ಬೇರೆ ಜೈಲ್‌ಗೆ ಸ್ಥಳಾಂತರ ಮಾಡಬೇಕು ಎಂದು ಕೋರ್ಟ್ ಗಮನ ಸೆಳೆದಿದ್ದರು. ಆದರೆ ಅಂದು ಸಮಯ ಮೀರಿದ್ದರಿಂದ ಸೋಮವಾರ ಈ ಬಗ್ಗೆ ವಿಚಾರಣೆ ಮಾಡೋಣ ಎಂದು ಕೋರ್ಟ್ ಹೇಳಿತ್ತು. ಇದೀಗ ಯಾವೆಲ್ಲಾ ಆರೋಪಿಗಳನ್ನ ಬೇರೆ, ಬೇರೆ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ ಅನ್ನೋ ಕುತೂಹಲ ಹೆಚ್ಚಾಗಿದೆ.
ಡಿ ಗ್ಯಾಂಗ್‌ನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ಇಂದು ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ. ಎಸ್‌ಪಿಪಿ ಪ್ರಸನ್ನ ಕುಮಾರ್, ದರ್ಶನ್ ಮತ್ತು ಇತರ ಆರೋಪಿಗಳನ್ನು ಬೇರೆ, ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಿದ್ದರು. ದರ್ಶನ್ ಹಾಗೂ ಇತರರು ಪ್ರಭಾವಿ ವ್ಯಕ್ತಿಗಳಾಗಿದ್ದಾರೆ. ಬೇರೆ ಆರೋಪಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಅಂತಾ ಕೋರ್ಟ್‌ಗೆ ಹೇಳಿದ್ದರು. ಹೀಗಾಗಿ ಇವತ್ತು ಕೋರ್ಟ್ನಲ್ಲಿ ಈ ಬಗ್ಗೆ ವಿಚಾರಣೆ ನಡೆಯಲಿದೆ. ಒಂದು ವೇಳೆ ದರ್ಶನ್ ಅಂಡ್ ಗ್ಯಾಂಗ್‌ನ ತುಮಕೂರು ಹಾಗು ರಾಮನಗರ ಜೈಲುಗಳಿಗೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಈ ನಡುವೆ ಇವತ್ತು ಕೋರ್ಟ್ನಲ್ಲಿ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಅದರಲ್ಲೂ ಕ್ರಿಮಿನಲ್ ಕೇಸ್‌ಗಳಲ್ಲಿ ಖ್ಯಾತಿ ಪಡೆದಿರುವ ಖ್ಯಾತ ವಕೀಲ ಸಿ.ವಿ ನಾಗೇಶ್ ಅವರನ್ನು ದರ್ಶನ್ ಪರ ನೇಮಿಸಿಕೊಂಡಿದ್ದು, ಇಂದು ಜಾಮೀನು ಅರ್ಜಿ ಮೂಲಕ ಸಿವಿ ನಾಗೇಶ್ ವಕಾಲತ್ತು ಹಾಕಲಿದ್ದಾರೆ ಎನ್ನಲಾಗಿದೆ. ಆದರೆ ಚಾರ್ಜ್ ಶೀಟ್ ಸಲ್ಲಿಕೆಯಾಗದ ಹೊರತು ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸರ್ಕಾರಿ ಪರ ವಿಶೇಷ ಅಭಿಯೋಜಕರು ವಾದ ಮಂಡಿಸುವ ಸಾಧ್ಯತೆಯಿದೆ. ಎಲ್ಲಕ್ಕಿಂತಾ ಮಿಗಿಲಾಗಿ ಸಿ.ವಿ ನಾಗೇಶ್ ಯಾವ ಅಂಶಗಳ ಆಧಾರದ ಮೇಲೆ ಜಾಮೀನು ಅರ್ಜಿ ಸಲ್ಲಿಕೆ ಮಾಡಲಿದ್ದಾರೆ..? ಯಾವೆಲ್ಲಾ ಅಂಶಗಳನ್ನು ಮುಂದಿಟ್ಟು ಕೋರ್ಟ್ ಗಮನ ಸೆಳೆಯಲಿದ್ದಾರೆ ಎನ್ನೋ ಕುತೂಹಲ ದರ್ಶನ್ ಅಭಿಮಾನಿಗಳನ್ನು ಕಾಡ್ತಿದೆ.
ಕೃಷ್ಣಮಣಿ