ಹಲವು ತಿಂಗಳ ಬಳಿಕ ಮೊದಲ ಬಾರಿಗೆ ನಟ ದರ್ಶನ್ (Actor darshan) ಮತ್ತು ನಟಿ ಪವಿತ್ರ ಗೌಡ ಮುಖಾಮುಖಿಯಾಗಿದ್ದಾರೆ. ಹೌದು, ರೇಣುಕಾ ಸ್ವಾಮಿ ಕೊಲೆ ಪ್ರಕಣಾರಣದ A1 ಆರೋಪಿ ಪವಿತ್ರ ಗೌಡ ಮತ್ತು A2 ನಟ ದರ್ಶನ್ ಪರಸ್ಪರ ಮುಖಾಮುಖಿಯಾಗಿದ್ದಾರೆ. ಇದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಹೆ ಹಾಜರಾಗಲು 57 ನೇ CCH ನ್ಯಾಯಾಲಯಕ್ಕೆ ಬಂದ ವೇಳೆ ಕೋರಿ ಆವರಣದಲ್ಲಿ ಇಬ್ಬರೂ ಭೇಟಿಯಾಗಿದ್ದಾರೆ.
ಆದ್ರೆ ಈ ವೇಳೆ ದರ್ಶನ್ ಮತ್ತು ಪವಿತ್ರ ಗೌಡ ಹೆಚ್ಚಿಗೆ ಏನನ್ನೂ ಮಾತನಾಡಿಲ್ಲ ಎನ್ನಲಾಗಿದೆ. ಕೆಲವೇ ಕೆಲವು ಕ್ಷಣಗಳು ಮಾತ್ರ ಇಬ್ಬರೂ ಸಂಧಿಸಿದ್ದು, ಈ ವೇಳೆ ದರ್ಶನ್, ಪವಿತ್ರ ಗೌಡ ಅವರ ಭುಜದ ಮೇಲೆ ಕೈ ಇಟ್ಟು ಸಂತೈಸಿದ್ದಾರೆ ಎನ್ನಲಾಗಿದೆ. ಇದನ್ನು ಹೊರತು ಪಡಿಸಿ ದರ್ಶನ್ ಮತ್ತು ಪವಿತ್ರ ಮೌನವಾಗಿಯೇ ಅಲ್ಲಿಂದ ತೆರಳಿದ್ದಾರೆ.
ಈ ಹಿಂದೆ ಪವಿತ್ರ ಗೌಡ ಜಾಮೀನಿನ ಮೇಲೆ ಹೊರಬಂದ ವೇಳೆ, ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ, ಅರ್ಚನೆ ಮಾಡಿಸುವಾಗ ದರ್ಶನ್ ಅವರ ಹೆಸರಲ್ಲಿ ಕೂಡ ಅರ್ಚನೆ ಮಾಡಿಸಿದ್ದರು.
ಇನ್ನು ಜೈಲಿನಲ್ಲಿ ಬಂಧಿಯಾಗಿದ್ದ ವೇಳೆ, ದರ್ಶನ್ ಬಳ್ಳಾರಿ ಜೈಲು ಹಾಗೂ ಪವಿತ್ರ ಗೌಡ ಪರಪ್ಪನ ಅಗ್ರಹಾರದಲ್ಲಿ ಇದ್ದ ಕಾರಣ ಭೇಟಿ ಸಾಧ್ಯವಾಗಿರಲಿಲ್ಲ . ಆ ನಂತರ ರಿಲೀಸ್ ಆದ್ಮೇಲೂ ಕೂಡ ಈ ಇಬ್ಬರು ಪರಸ್ಪರ ಭೇಟಿಯಾಗಿರಲಿಲ್ಲ. ಆದ್ರೆ ಇಂದು ಕೋರ್ಟ್ ಗೆ ಹಾಜರಾದ ವೇಳೆ ಇಬ್ಬರೂ ಭೇಟಿಯಾಗಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy murder case) ಸಂಬಂಧಪಟ್ಟಂತೆ ನಟ ದರ್ಶನ್ (Actor darshan), ಪವಿತ್ರ ಗೌಡ (Pavitra gowda) ಸೇರಿದಂತೆ ಪ್ರಕರಣದ ಎಲ್ಲಾ 17 ಆರೋಪಿಗಳು ಇಂದು 57ನೇ ಸಿಸಿಎಚ್ ನ್ಯಾಯಾಲಯದ (57th CCH court) ಮುಂದೆ ವಿಚಾರಣೆಗೆ ಹಾಜರಾಗಿದ್ದು, ಕೋರ್ಟ್ ವಿಚಾರಣೆಯನ್ನ ಫೆಬ್ರವರಿ 25 ಕ್ಕೆ ಮುಂದೂಡಿಕೆ ಮಾಡಿದೆ.