ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana agrahara) ರೌಡಿ ಶೀಟರ್ ಜೊತೆಗೆ ದರ್ಶನ್ ವಿಡಿಯೋ ಕಾಲ್ ನಲ್ಲಿ ಮಾತನಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ಗೆ (Actor darshan) ರಿಲಿಫ್ ಸಿಗೋ ಸಾಧ್ಯತೆಗಳಿವೆ.
ಬಾಣಸವಾಡಿಯ ಟೂರ್ಸ್ ಅಂಡ್ ಟ್ರಾವೆಲ್ಸ್ (Tours & travels) ಮಾಲೀಕ ಮಣೆವಣ್ಣನ್,ಮೆಜೆಸ್ಟಿಕ್ನ ಸೆಕೆಂಡ್ ಹ್ಯಾಂಡ್ ಮಾರ್ಕೇಟ್ನಲ್ಲಿ ಮೊಬೈಲ್ ಮತ್ತು ಚಾಲಕ ಯಾದವ್ ಹೆಸ್ರಲ್ಲಿ ಸಿಮ್ ಖರೀದಿಸಿದ್ದ. ಆ ಬಳಿಕ ಅದನ್ನ ಬಟ್ಟೆಯಲ್ಲಿ ಅಡಗಿಸಿ ರೌಡಿ ಶೀಟರ್ (Rowdy sheeter) ಧರ್ಮನಿಗೆ ತಲುಪಿಸಿದ್ದಾನೆ ಎಂದು ಗೊತ್ತಾಗಿದೆ.
ಇದರ ಜೊತೆಗೆ ಮೊಬೈಲ್ ಖರೀದಿಗೂ ಮುನ್ನ ಶಾಪ್ ಓನರ್ 2 ಮೊಬೈಲ್ ಫೋಟೋ ಕಳುಹಿಸಿ ಒಂದು ಮೊಬೈಲ್ ಸೆಲೆಕ್ಟ್ ಮಾಡುವಂತೆ ಹೇಳಿದ್ದ ಅಂತ ಗೊತ್ತಾಗಿದ್ದು, ಟ್ರಾವೆಲ್ಸ್ ಮಾಲೀಕನನ್ನ ಬಂಧಿಸಿ ಠಾಣಾ ಜಾಮೀನಿನ ಮೇಲೆ ರಿಲೀಸ್ ಮಾಡಿದ್ದಾರೆ. ಇನ್ನು ಮೊಬೈಲ್ ಶಾಪ್ ಮಾಲೀಕನನ್ನ ಬಂಧಿಸೋ ಸಾಧ್ಯತೆಗಳಿವೆ.