ಬಳ್ಳಾರಿ: ನಟ ದರ್ಶನ್ಗೆ ತೀವ್ರ ಬೆನ್ನು ಹೆಚ್ಚಾದ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ದರ್ಶನ್ಗಾಗಿ ಮೆಡಿಕಲ್ ಬೆಡ್, ದಿಂಬು ತಂದು ಕೊಡಲಾಗಿದೆ. ಬಿಮ್ಸ್ ವೈದ್ಯರ ಶಿಫಾರಸ್ಸಿನ ಮೇರೆಗೆ ನಟ ದರ್ಶನ್ಗೆ ಬೆಡ್ ಹಾಗೂ ದಿಂಬಿನ ವ್ಯವಸ್ಥೆ ಮಾಡಲಾಗಿದೆ.
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಮೆಡಿಕಲ್ ಬೆಡ್ ಮತ್ತು ದಿಂಬು ತರಿಸಿ ಕೊಡಲಾಗಿದೆ. ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನಲೆ ಜಿಲ್ಲಾ ಆಸ್ಪತ್ರೆಯಿಂದ ಬೆಡ್ ಮತ್ತು ದಿಂಬು ರವಾನಿಸಲಾಗಿದೆ.
ಮೆಡಿಕಲ್ ವರದಿ ಬಂದ ನಂತರ ಹಿರಿಯ ಅಧಿಕಾರಿಗಳಿಗೆ ವರದಿ ಕಳಿಸಿದ್ದ ಜೈಲು ಅಧೀಕ್ಷಕಿ ಲತಾ, ಮೇಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಇಂದು ಬೆಡ್ ಮತ್ತು ದಿಂಬಿನ ವ್ಯವಸ್ಥೆ ಮಾಡಿದ್ದಾರೆ.
ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ಗೆ ಮೆಡಿಕಲ್ ಬೆಡ್ ಮತ್ತು ದಿಂಬು ಒದಗಿಸುವಂತೆ ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ವರದಿಯಲ್ಲಿ ಉಲ್ಲೇಖ ಮಾಡಿದ್ದರು. ಹೀಗಾಗಿ ಆ್ಯಂಬುಲೆನ್ಸ್ನಲ್ಲಿ ಬೆಡ್ ಮತ್ತು ದಿಂಬು ತಂದು ಕೊಟ್ಟಿದ್ದಾರೆ ಸಿಬ್ಬಂದಿ.