ಇಂದು ದರ್ಶನ್ ಗೆ ಮನೆಯೂಟಕ್ಕೆ ಅನುಮತಿ ಸಿಗುತ್ತಾ ಅಥವಾ ಜೈಲೂಟವೇ ಗಟ್ಟಿಯಾಗುತ್ತಾ ಎಂಬುದು ನಿರ್ಧಾರವಾಗಲಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿಂದು ನಟ ದರ್ಶನ್ ಮನೆ ಊಟದ ಅರ್ಜಿ ವಿಚಾರಣೆ ನಡೆಯಲಿದೆ.

ಈ ಅರ್ಜಿ ವಿಚಾರವಾಗಿ ಇವತ್ತು ಎಸ್ ಪಿಪಿ ನ್ಯಾಯಾಧೀಶರ ಮುಂದೆ ಆಕ್ಷೇಪಣೆ ಸಲ್ಲಿಕೆ ಮಾಡಲಿದ್ದಾರೆ.24 ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ಮತ್ತೊಂದು ಕಡೆ ಜೈಲಾಧಿಕಾರಿಗಳಿಂದಲೂ ಇವತ್ತು ಕೋರ್ಟ್ ಗೆ ದರ್ಶನ್ ಹೆಲ್ತ್ ರಿಪೋರ್ಟ್ ಸಲ್ಲಿಕೆಯಾಗಲಿದೆ.ಇವತ್ತು ಹೆಲ್ತ್ ರಿಪೋರ್ಟ್ ಸಲ್ಲಿಕೆ ಮಾಡಲು ಕೋರ್ಟ್ ಈ ಹಿಂದೆ ಸೂಚನೆ ಕೊಟ್ಟಿತ್ತು.
ಹೀಗಾಗಿ ಇಂದು ಜೈಲಾಧಿಕಾರಿಗಳು ಕೊಡುವ ರಿಪೋರ್ಟ್ ನ್ನ ಕೋರ್ಟ್ ಗಂಭೀರವಾಗಿ ಪರಿಗಣಿಸೋ ಸಾಧ್ಯತೆಯಿದ್ದು ,ಜುಲೈ 27 ರೊಳಗೆ ಅರ್ಜಿ ಬಗ್ಗೆ ತೀರ್ಮಾನಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹೈಕೋರ್ಟ್ ಸೂಚನೆ ನೀಡಿದೆ.