ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy murder case) ಸಂಬಂಧಪಟ್ಟಂತೆ ನಟ ದರ್ಶನ್ (Actor darshan), ಪವಿತ್ರ ಗೌಡ (Pavitra gowda) ಸೇರಿದಂತೆ ಪ್ರಕರಣದ ಎಲ್ಲಾ 17 ಆರೋಪಿಗಳು ಇಂದು 57ನೇ ಸಿಸಿಎಚ್ ನ್ಯಾಯಾಲಯದ (57th CCH court) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಸದ್ಯ ಈ ಕೊಲೆ ಪ್ರಕರಣದಲ್ಲಿ ಎಲ್ಲಾ 17 ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದು ಇಂದು ಸಿಟಿ ಸಿವಿಲ್ ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ಎಲ್ಲಾ ಆರೋಪಿಗಳಿಗೆ ಕೋರ್ಟ್ ಜಾಮೀನು ಮಂಜೂರು ಮಾಡುವ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿತ್ತು.
ಹೀಗಾಗಿ ಇಷ್ಟು ದಿನ ಮೈಸೂರಿನಲ್ಲಿ ವಾಸ್ತವ್ಯ ಹೊಡಿತ ನಟ ದರ್ಶನ್ ಇಂದು ಕೋರ್ಟ್ ಮುಂದೆ ಹಾಜರಾಗಬೇಕಿದ್ದ ಕಾರಣ ಬೆಂಗಳೂರಿಗೆ ಆಗಮಿಸಿದ್ದರು. ಇಂದು ಎಲ್ಲಾ ಆರೋಪಿಗಳ ಹಾಜರಾತಿ ಪಡೆದುಕೊಂಡ ನ್ಯಾಯಾಲಯ, ಶೂರಿಟಿ ಇಲ್ಲದ ಆರೋಪಿಗಳಿಗೆ ಶೂರಿಟಿ ಕುರಿತು ತಾಕೀತು ಮಾಡಿ ಮತ್ತೆ ವಿಚಾರಣೆಯನ್ನು ಫೆಬ್ರವರಿ 25 ಕ್ಕೆ ಮುಂದೂಡಿಕೆ ಮಾಡಿದೆ.