ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renuka swamy murder case) ಜೈಲುಪಾಲಾಗಿರುವ ನಟ ದರ್ಶನ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivaraj kumar) ಪ್ರತಿಕ್ರಿಯಿಸಿದ್ದಾರೆ.ಎಲ್ಲಾ ಹಣೆಬರಹ ಏನೂ ಮಾಡೋಕೆ ಆಗಲ್ಲ. ಇದೆಲ್ಲಾ ಒಂಥರಾ ಪಾರ್ಟ್ ಆಫ್ ದಿ ಲೈಫ್ ಎಂದಿದ್ದಾರೆ.

ಜೀವನದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ನಡೆಯುತ್ತೆ. ಪ್ರಕರಣ ನ್ಯಾಯಾಲಯದಲ್ಲಿದೆ. ಒಳ್ಳೆದಾಗುತ್ತೆ ಅನ್ನೋ ಭರವಸೆ ಇದೆ. ಎಲ್ಲಾ ಕುಟುಂಬಕ್ಕೂ ಒಳ್ಳೆದಾಗಬೇಕಿದೆ. ನಾವ್ ಏನ್ ಮಾಡ್ತೀವಿ ಅದು ಸರಿನಾ ಅಂತ ಯೋಚನೆ ಮಾಡಬೇಕು. ಈ ಘಟನೆಯಿಂದ ರೇಣುಕಾಸ್ವಾಮಿ ಫ್ಯಾಮಿಲಿಗೆ ಮತ್ತು ದರ್ಶನ್ (Darshan) ಅವರ ಫ್ಯಾಮಿಲಿಗೆ ನೋವಾಗಿರುತ್ತೆ ಎಂದು ಹೇಳಿದ್ರು.
ಅಂತಿಮವಾಗಿ ನ್ಯಾಯ ಏನಿದೆಯೋ ನೋಡೋಣ. ಈಗ ಪ್ರಕರಣ ಕಾನೂನಿನ ಕಟಕಟೆಯಲ್ಲಿ ಇರೋದ್ರಿಂದ ಈ ಬಗ್ಗೆ ಹೆಚ್ಚು ಮಾತಾಡಿ ಪ್ರಯೋಜನ ಇಲ್ಲ ಅಂತ ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ.