
ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ತಮ್ಮ ಮೊದಲನೆಯ ಮಗುವನ್ನು ಬರಮಾಡಿಕೊಂಡಿದ್ದಾರೆ. ಫೆಬ್ರವರಿ 14, 2021 ರಲ್ಲಿ ಮದುವೆಯಾಗಿದ್ದ ಈ ಜೋಡಿ, ಮದುವೆಯಾಗಿ ಮೂರು ವರ್ಷಗಳ ನಂತರ ತಮ್ಮ ಮೊದಲನೆಯ ಮಗುವಿಗೆ ಜನ್ಮ ನೀಡಿದ್ದಾರೆ.
ಈ ಖುಷಿಯ ವಿಚಾರವನ್ನು ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

“It’s baby girl ಇದು ಹೆಣ್ಣು ಮಗು . ಅಮ್ಮ ಮತ್ತು ಮಗಳು ಇಬ್ಬರೂ ಕ್ಷೇಮ. ಪ್ರೀತಿಯ ಮಿಲನಾ ನಾಗರಾಜ್, ತಾಯ್ತನದ ಈ ಪ್ರಯಾಣದಲ್ಲಿ ನೀನು ಅನುಭವಿಸಿದ ಒಂದು ರೀತಿಯ ನೋವು, ನಿನ್ನ ತ್ಯಾಗ, ಧೈರ್ಯದ ಕುರಿತು ಯೋಚಿಸಿದಾಗ ನನಗೆ ಗೌರವ ಮೂಡುತ್ತದೆ. ಇಂತಹ ಅದ್ಭುತ ಪ್ರಯಾಣಕ್ಕೆ ಸಾಕ್ಷಿಯಾದ ಎಲ್ಲಾ ತಾಯಂದಿರಿಗೂ ಪ್ರಣಾಮಗಳು. ನಾನು ಹೆಮ್ಮೆಯ ಮತ್ತು ಅದೃಷ್ಟದ ತಂದೆ. ಏಕೆಂದರೆ ನನಗೆ ಮಗಳು ಜನಿಸಿದ್ದಾಳೆ” ಎಂದು ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ