ಭೀಮ ಹೆಜ್ಜೆ 100 ರ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad joshi) ಅವರು ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನವರು ಕೇವಲ ಹಿಂದೂ ವಿರೋಧಿಗಳಲ್ಲ (Anti hindu), ದಲಿತ ವಿರೋಧಿಗಳು (Anti dalits) ಹೌದು ಎಂದು ಹೇಳಿದ್ದರು. ಈ ಹೇಳಿಕೆ ಈಗ ಕಾಂಗ್ರೆಸ್ ನಾಯಕರಿಗೆ ಅಸ್ತ್ರವಾಗಿ ಪರಿಣಮಿಸಿದೆ.

ಈ ಕುರಿತು ಸಚಿವ ಪ್ರಿಯಾಂಕ ಖರ್ಗೆ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದು, ಪ್ರಹ್ಲಾದ್ ಜೋಶಿ, RSS ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಅವರು ಹೀಗೆ ಬರೆದಿಕೊಂಡಿದ್ದಾರೆ.
ದಲಿತರು ಹಿಂದೂಗಳಲ್ಲ..! ಆರ್ಎಸ್ಎಸ್ ಹಾಗೂ ಬಿಜೆಪಿಯ ಒಳಮನಸಿನ ಸತ್ಯವನ್ನು ಮಾನ್ಯ ಪ್ರಹ್ಲಾದ್ ಜೋಶಿಯವರು ಸ್ಪಷ್ಟಪಡಿಸಿದ್ದಾರೆ.ಈ ಸ್ಪಷ್ಟನೆ ನೀಡಿದ್ದಕ್ಕೆ ಧನ್ಯವಾದಗಳು ಜೋಶಿಯವರೇ ಎಂದಿದ್ದಾರೆ.

ಹಿಂದೂಗಳೇ ಬೇರೆ, ದಲಿತರೇ ಬೇರೆ ಮತ್ತು ಸನಾತನದವರೇ ಬೇರೆ ಎನ್ನುವ ಆರ್ಎಸ್ಎಸ್ ಹಾಗೂ ಬಿಜೆಪಿಯ ವಿಭಜನಾತ್ಮಕ ಧೋರಣೆಯನ್ನು ಜೋಶಿಯವರು ಪ್ರಾಮಾಣಿಕವಾಗಿ ಸ್ಪಷ್ಟಪಡಿಸಿದ್ದಾರೆ.
ಸನಾತನದಲ್ಲಿ ಹಿಂದೂಗಳಿಲ್ಲ, ಹಿಂದೂಗಳಲ್ಲಿ ದಲಿತರಿಲ್ಲ ಎನ್ನುವುದು ಸಂಘ ಪರಿವಾರದೊಳಗಿನ ಸತ್ಯ. ಈ ಸತ್ಯವನ್ನು ಸಮಾಜ ಅರ್ಥ ಮಾಡಿಕೊಳ್ಳುವಂತೆ ತಿಳಿಸಿದ್ದಕ್ಕೆ ಅಭಿನಂದನೆಗಳು!

ಜೋಶಿಯವರೇ, ನಿಮ್ಮ ಈ ಪ್ರತ್ಯೇಕತಾ ಧೋರಣೆಗಾಗಿಯೇ, ಈ ತಾರತಮ್ಯಕ್ಕಾಗಿಯೇ ಬಾಬಾ ಸಾಹೇಬರು “ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯಲಾರೆ“ ಎಂದು ಬೌದ್ಧ ದಮ್ಮ ದೀಕ್ಷೆ ಪಡೆದಿದ್ದು.
ಬಿಜೆಪಿ ನಾಯಕರಿಗೆ ಬಾಬಾ ಸಾಹೇಬರ ಸಿದ್ಧಾಂತದ ಮೇಲೆ ನೈಜ ಗೌರವ ಇರುವುದೇ ಆದರೆ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ದಮ್ಮಚಕ್ರ ಪ್ರವರ್ತನ ದಿನವನ್ನು ಆಚರಿಸಿ, ತಾರತಮ್ಯದ ಬಗೆಗಿನ ಅಂಬೇಡ್ಕರ್ ಅವರ ಹೇಳಿಕೆಗಳನ್ನು ಓದಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.