ರಾಜಸ್ಥಾನದಲ್ಲಿ ಸುಮಾರು ಎರಡು ವಾರಗಳ ಹಿಂದೆ ಒಬಿಸಿ ಸಮುದಾಯಕ್ಕೆ ಸೇರಿದ ಪುರುಷರ ಗುಂಪೊಂದು 21 ವರ್ಷದ ದಲಿತ ಯುವಕನ ಮೇಲೆ ನಡೆಸಿದ ದಾಳಿಯಿಂದಾಗಿ ಮೃತಪಟ್ಟಿದ್ದಾರೆ. ಹತ್ಯೆಗೀಡಾಗಿರುವ ಯುವಕ ಭೀಮ್ ಸೈನ್ಯದ ಸದಸ್ಯರಾಗಿದ್ದ ವಿನೋದ್ ಬಾಮ್ನಿಯಾ ಎನ್ನಲಾಗಿದೆ.
ಭೀಮ್ ಆರ್ಜಿ ಸದಸ್ಯ ವಿನೋದ್ ತಮ್ಮ ಮನೆಯ ಬಿಆರ್ ಅಂಬೇಡ್ಕರ್ ಅವರ ಪೋಸ್ಟರ್ಗಳನ್ನು ತಮ್ಮ ಮನೆಯ ಹೊರಗೆ ಅಂಟಿಸಿದ್ದಾರೆ ಎಂದು ಕಾರಣಕ್ಕೆ ಜಗಳಾಗಿದೆ. ಈ ವಿಷಯವಾಗಿ ಜೂನ್ 5 ರಂದು ರಾಜಸ್ಥಾನದ ಹನುಮನ್ಗಡ ಜಿಲ್ಲೆಯ ಕಿಕ್ರಲಿಯಾ ಗ್ರಾಮದಲ್ಲಿರುವ ಅವರ ಮನೆಯ ಬಳಿಯೇ ಒಬಿಸಿ ಗುಂಪೊಂದು ವಿನೋದ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ವಿನೋದ್ ಅವರನ್ನು ಶ್ರೀಗಂಗಾನಗರ್ ಆಸ್ಪತ್ರೆಗೆ ದಾಖಲಿಸಿದ್ದು, ಎರಡು ದಿನಗಳ ಹಿಂದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಂಬೇಡ್ಕರ್ ಅವರ ಪೋಸ್ಟರ್ ವಿಷಯವಾಗಿ ನಡೆದ ಈ ಘಟನೆಯ ಬಗ್ಗೆ ಬಾಮ್ನಿಯ ಅವರ ಕುಟುಂಬ ಹೇಳಿದ ಕನಿಷ್ಠ ಇಬ್ಬರು ವ್ಯಕ್ತಿಗಳಾದ ಅನಿಲ್ ಸಿಹಾಗ್ ಮತ್ತು ರಾಕೇಶ್ ಸಿಹಾಗ್ ಅವರನ್ನು ಜೂನ್ 5 ರ ದಾಳಿ ಮತ್ತು ಎರಡು ದಿನಗಳ ನಂತರ ಸಾವಿಗೀಡಾದ ವಿನೋದ್ ಹತ್ಯೆ ಪ್ರಕರಣದ ಎಫ್ಐಆರ್ನಲ್ಲಿ ಹೆಸರಿಸಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಬಂಧನಕ್ಕೊಳಗಾದ ನಾಲ್ವರಲ್ಲಿ ಇವರಿಬ್ಬರು ಕೂಡ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಸುದ್ದಿ ಮಾಡಿದೆ.
ಹಲ್ಲೆ ವೇಳೆ ಆರೋಪಿಗಳು ಜಾತಿ ನಿಂದನೆ ಮಾಡಿದ್ದಾರೆ ಎಂದು FIRನಲ್ಲಿ ಹೇಳಿದೆ. “ಆಜ್ ತುಮ್ಹೇ ತುಮ್ಹರಾ ಅಂಬೇಡ್ಕರ್ ವಾದ್ ಯಾದ್ ದಿಲ್ವಾಯಂಗೆ (ನಿನಗೆ ಇಂದು ನಿನ್ನ ಅಂಬೇಡ್ಕರ್ ವಾದವನ್ನು ನೆನಪಿಸುತ್ತೇವೆ)” ಎಂದು ಕೂಗಿ ಹಲ್ಲೆಮಾಡಿದ ಗುಂಪು ವಿನೋದ್ ಮೇಲೆ ಎರಗಿತ್ತು ಎಂದು FIR ನಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ. ಭೀಮ್ ಆರ್ಮಿ ಈ ಪ್ರಕರಣದಲ್ಲಿ “ಪೊಲೀಸ್ ನಿಷ್ಕ್ರಿಯತೆ” ಯ ವಿರುದ್ಧ ಪ್ರತಿಭಟನೆ ನಡೆಸಿದೆ.
ಪೊಲೀಸರ ಪ್ರಕಾರ ವಿನೋದ್ ಬಾಮ್ನಿಯ ಈ ವರ್ಷದ ಆರಂಭದಲ್ಲಿ ಎರಡು ಬಾರಿ ವಿವಿಧ ವಿಷಯಗಳ ಬಗ್ಗೆ ದೂರುಗಳನ್ನು ದಾಖಲಿಸಿದ್ದಾರೆ. ಒಂದು ಹನುಮಾನ್ ಚಾಲೀಸಾ ಅವರ ಪ್ರತಿಗಳನ್ನು ಶಾಲೆಯಲ್ಲಿ ವಿತರಿಸುವುದನ್ನು ಆಕ್ಷೇಪಿಸಿದ ನಂತರ ಏಪ್ರಿಲ್ ನಲ್ಲಿ ಬೆದರಿಕೆ ಕರೆಗಳು ಬರುತ್ತಿವೆ ಎಂಬುದಾಗಿತ್ತು. ಮತ್ತೊಂದು ರಸ್ತೆ ತಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ತನ್ನ ಮತ್ತು ತನ್ನ ಕುಟುಂಬದ ಮೇಲೆ ಗ್ರಾಮದ ಹಲವಾರು ಮಂದಿ ಹಲ್ಲೆ ನಡೆಸಿದ್ದಾರೆ ಎಂದು ವಿನೋದ್ ಆರೋಪಿಸಿದ್ದರು.
ವಿನೋದ್ ಕೊಲೆ ಪ್ರಕರಣದ ದೂರುದಾರ ಮತ್ತು ಹಲ್ಲೆಯ ಪ್ರತ್ಯಕ್ಷದರ್ಶಿಯಾದ ಅವನ ಸೋದರಸಂಬಂಧಿ ಮುಖೇಶ್, ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ಜೂನ್ 5 ರಂದು ನಡೆದ ದಾಳಿಯು ಪೋಸ್ಟರ್ ಘಟನೆಗೆ ಸಂಬಂಧಿಸಿರುವ “ಸೇಡಿನ ಕೃತ್ಯ” ಎಂದು ಹೇಳುವ ಮೂಲಕ ಘಟನೆ ಸಂಪೂರ್ಣ ವಿಷವನ್ನು ಬಿಚ್ಚಿಟ್ಟಿದ್ದಾರೆ.
ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಯ ನಂತರ ನಮ್ಮ ಮನೆಯ ಹೊರಗೆ ಹಾಕಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬ್ಯಾನರ್ಗಳನ್ನು ನಮ್ಮ ಹಳ್ಳಿಯಲ್ಲಿ ವಾಸಿಸುವ ಅನಿಲ್ ಸಿಹಾಗ್ ಮತ್ತು ರಾಕೇಶ್ ಸಿಹಾಗ್ ಸೇರಿದಂತೆ ಕೆಲವು ಪುರುಷರು ಅದನ್ನು ಹರಿದು ಹಾಕಿದ್ದರು. ಈ ಕೃತ್ಯವನ್ನು ಮಾಡಿದವರನ್ನು ನಾವು ಗುರುತಿಸಿ ಅವರ ಕುಟುಂಬಗಳಿಗೆ ದೂರು ನೀಡಿದೆವು. ಈ ವಿಷಯವಾಗಿ ಪಂಚಾಯಿತಿಯ ಮಧ್ಯಸ್ಥಿಕೆಯೊಂದಿಗೆ ಬಗೆಹರಿಸಿಕೊಂಡಿದ್ದೇವು. ಅವರ ಕುಟುಂಬ ಸದಸ್ಯರು ಅವರ ಪರವಾಗಿ ಕ್ಷಮೆಯಾಚಿಸಿದರು, ”ಎಂದು ಹತ್ಯೆಯಾದ ವಿನೋದ್ ಅವರ ಸಂಭಂದಿ ಮುಖೇಶ್ ಹೇಳಿದರು.
ಆದರೆ ಈ ಅಪರಾಧಿಗಳು ಸೇಡು ತೀರಿಸಿಕೊಳ್ಳಲು ಬಯಸಿದ್ದರು. ಜೂನ್ 5 ರಂದು ವಿನೋದ್ ಮತ್ತು ನಾನು ಹಳ್ಳಿಯಲ್ಲಿರುವ ನಮ್ಮ ಹೊಲಕ್ಕೆ ಹೋಗುವಾಗ ರಾಕೇಶ್, ಅನಿಲ್ ಮತ್ತು ಇನ್ನೂ ಕೆಲವರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಸಣ್ಣಪುಟ್ಟ ಗಾಯಗಳೊಂದಿಗೆ ನಾನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೆ. ಆದರೆ ವಿನೋದನನ್ನು ಹಾಕಿ ಸ್ಟಿಕ್ ಗಳಿಂದ ಸುಮಾರು 20-30 ಬಾರಿ ಹೊಡೆದರು ಅವರನ್ನು ರಾವತ್ಸರ್ಗೆ ಕರೆದೊಯ್ಯಲಾಯಿತು. ಅಲ್ಲಿಂದ ಮತ್ತೆ ಹನುಮನ್ಗಡ ಮತ್ತು ಶ್ರೀಗಂಗಾನಗರ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಕೊನೆಯುಸಿರೆಳೆದರು ”ಎಂದು ಮುಖೇಶ್ ಹೇಳಿದರು.
ಈ ಹತ್ಯೆಯನ್ನು ಭೀಮ್ ಆರ್ಮಿ ರಾಜ್ಯ ಅಧ್ಯಕ್ಷ ಇಂದಾಸರ್ ಖಂಡಿಸಿದ್ದು, ವಿನೋದ್ ನೀದಿದ ದೂರಿನ ಆಧಾರದ ಮೇಲೆ ಪೋಲಿಸಲು ಎಫ್ಐಆರ್ಗಳಲ್ಲಿ ಸಮಯೋಚಿತ ಕ್ರಮ ಕೈಗೊಂಡಿದ್ದರೆ ಮತ್ತು ಬಂಧನಗಳನ್ನು ಮಾಡಿದ್ದರೆ, ವಿನೋದ್ ಉಳಿಯುತ್ತಿದ್ದರು. ಎಫ್ಐಆರ್ಗಳಲ್ಲಿ ಆರೋಪಿಗಳು ಒಂದೇ ಸಮುದಾಯಕ್ಕೆ ಸೇರಿದವರು ”ಎಂದು ಇಂದಾಸರ್ ಹೇಳಿದ್ದಾರ. ಜೊತೆಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.
ವಿನೋದ್ ಭೀಮ್ ಆರ್ಮಿಯ ಅತ್ಯಂತ ಸಕ್ರಿಯ ಸದಸ್ಯರಾಗಿದ್ದರು ಮತ್ತು ಜಾತಿ ತಾರತಮ್ಯದ ಸಮಸ್ಯೆಗಳ ವಿರುದ್ಧ ದನಿಯೆತ್ತುತ್ತಿದ್ದರು. ಅವನ ಕೊಲೆಯ ಹಿಂದಿನ ಕಾರಣ ಜಾತಿವಾದ. ಪರಿಹಾರ ಸೇರಿದಂತೆ ಅವರ ಬೇಡಿಕೆಗಳ ಬಗ್ಗೆ ವಿನೋದ್ ಅವರ ಕುಟುಂಬಕ್ಕೆ ಆಡಳಿತದಿಂದ ಅನುಕೂಲಕರ ಪ್ರತಿಕ್ರಿಯೆ ಬರುವವರೆಗೆ ನಾವು ಬುಧವಾರ ಪ್ರತಿಭಟಿಸಿದ್ದೇವೆ ”ಎಂದು ಭೀಮ್ ಆರ್ಮಿಯ ರಾಜ್ಯ ಅಧ್ಯಕ್ಷ ಸತ್ಯವನ್ ಇಂದಾಸರ್ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು.