ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯವರು ಇಂದು ದೂರದ ಪ್ರಯಾಣ ಹೋಗುವ ಸಾಧ್ಯತೆ ಹೆಚ್ಚಿದೆ. ರಾಜಕೀಯ ನಾಯಕರಿಗೆ ವಿರೋಧಿಗಳಿಂದ ಸಮಸ್ಯೆ ಹೆಚ್ಚಾಗುತ್ತದೆ. ಇಂದು ನಿಮ್ಮ ಮೇಲಿರುವ ಜವಾಬ್ದಾರಿಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ.
ವೃಷಭ ರಾಶಿಯ ಈ ದಿನದ ಭವಿಷ್ಯ

ವೃಷಭ ರಾಶಿಯವರಿಗೆದೀರ್ಘಕಾಲದಿಂದ ಕಿರಿಕಿರಿ ನೀಡುತ್ತಿದ್ದ ತೊಂದರೆಗೆ ಇಂದು ಪರಿಹಾರ ದೊರೆಯಲಿದೆ. ಹಣಕಾಸಿನ ತೊಂದರೆ ನಿವಾರಣೆಯಾಗುತ್ತದೆ. ಮಾನಸಿಕ ನೆಮ್ಮದಿ ಹೆಚ್ಚಾಗಲಿದೆ.
ಮಿಥುನ ರಾಶಿಯ ಈ ದಿನದ ಭವಿಷ್ಯ

ಮಿಥುನ ರಾಶಿಯವರಿಗೆ ಇಂದು ಕೆಲಸ ಕಾರ್ಯಗಳಲ್ಲಿ ವಿಳಂಬವಾಗಲಿದೆ. ವಸ್ತ್ರ ಆಭರಣ ಖರೀದಿ ಯೋಗವಿದೆ. ಪ್ರಯಾಣದಲ್ಲಿ ಎಚ್ಚರ ಇರಲಿ. ಆರೋಗ್ಯ ಸುಧಾರಣೆಯಾಗಲಿದೆ.
ಕರ್ಕಾಟಕ ರಾಶಿಯ ಈ ದಿನದ ಭವಿಷ್ಯ

ಕರ್ಕಾಟಕ ರಾಶಿಯವರಿಗೆ ಇಂದು ನಿಂತು ಹೋದ ಕೆಲಸ ಕಾರ್ಯಗಳಲ್ಲಿ ಚಾಲನೆ ಸಿಗಲಿದೆ. ಆರೋಗ್ಯದ ಬಗ್ಗೆ ಗಮನ ಹರಿಸಿ. ಯೋಗ ಧ್ಯಾನದತ್ತ ಗಮನ ಹರಿಸುವುದು ಉತ್ತಮ.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರು ಇಂದು ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ಮಾನಸಿಕ ನೆಮ್ಮದಿ ಹೆಚ್ಚಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ಅನುಕೂಲ ಆಗುತ್ತದೆ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯವರಿಗೆ ಇಂದು ಬೇರೆಯವರ ಕೆಲಸದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಂದರೆ ಉಂಟಾಗುತ್ತದೆ. ಪತ್ರಿಕಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಗೌರವ ದೊರೆಯಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯವರಿಗೆ ಇಂದು ವ್ಯವಹಾರದಲ್ಲಿ ಅನುಕೂಲತೆ ಉಂಟಾಗುತ್ತದೆ. ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ಧನ ಲಾಭವಾಗಲಿದೆ. ಕೌಟುಂಬಿಕ ನೆಮ್ಮದಿ ಹೆಚ್ಚಾಗಲಿದೆ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಇಂದು ಅನಿರೀಕ್ಷಿತವಾಗಿ ಹಣಕಾಸು ಪಡೆದುಕೊಳ್ಳುವ ಅವಕಾಶಗಳು ಪ್ರಾಪ್ತಿ ಆಗುತ್ತದೆ. ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ಧನುಸ್ಸು ರಾಶಿಯ ಈ ದಿನದ ಭವಿಷ್ಯ

ಧನುಸ್ಸು ರಾಶಿಯವರಿಗೆ ಹೆಚ್ಚು ಕೆಲಸದ ಒತ್ತಡದಿಂದ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ. ಕೃಷಿಕರಿಗೆ ತೋಟಗಾರಿಕೆಯಲ್ಲಿ ಹೆಚ್ಚಿನ ಲಾಭವಾಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರು ಗೃಹ ನಿರ್ಮಾಣಕ್ಕೆ ಸಂಬಂಧಪಟ್ಟ ಕೆಲಸ ಕಾರ್ಯಗಳಲ್ಲಿ ಹೆಚ್ಚು ತೊಂದರೆಗಳು ಉಂಟಾಗುತ್ತದೆ. ದೈವ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರಿಗೆ ಇಂದು ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆಗಳಿವೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಿ. ಕುಟುಂಬದ ಸೌಖ್ಯ ಹೆಚ್ಚಾಗಲಿದೆ.
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರಿಗೆ ಇಂದು ದೂರ ಪ್ರಯಾಣದಲ್ಲಿ ಕಾರ್ಯಸಿದ್ಧಿಯಾಗಲಿದೆ. ಯಾವುದೇ ವ್ಯವಹಾರವನ್ನು ಮಾಡುವ ಮುನ್ನ ಎರಡು ಬಾರಿ ಯೋಚಿಸಿ. ಹೊಸ ಸ್ನೇಹಿತರ ಬಗ್ಗೆ ಅತಿಯಾದ ನಂಬಿಕೆ ಬೇಡ.





