ಮೇಷ ರಾಶಿಯ ಇಂದಿನ ಭವಿಷ್ಯ

ಮೇಷ ರಾಶಿಯವರಿಗೆ ಇಂದು ಕುಟುಂಬದವರಿಂದ ಬೆಂಬಲ ಸಿಗುತ್ತದೆ ಮತ್ತು ಹೊಸ ವಿಚಾರಗಳಲ್ಲಿ ಉತ್ಸಾಹ ಇರುತ್ತದೆ. ಆದರೆ ಆತುರದ ನಿರ್ಧಾರಗಳಿಂದ ನಷ್ಟವಾಗುವ ಸಾಧ್ಯತೆ ಇದೆ. ಹಣಕಾಸಿನಲ್ಲಿ ಜಾಗ್ರತೆ ಅಗತ್ಯ.
ವೃಷಭ ರಾಶಿಯ ಇಂದಿನ ಭವಿಷ್ಯ

ವೃಷಭ ರಾಶಿಯವರ ಮನೆಯ ವಾತಾವರಣ ಇಂದು ಶಾಂತವಾಗಿರುತ್ತದೆ. ಹಳೆಯ ಸಮಸ್ಯೆಯೊಂದಕ್ಕೆ ಪರಿಹಾರ ಸಿಗುತ್ತದೆ. ಆರೋಗ್ಯದಲ್ಲಿ ಸಣ್ಣ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಕೆಲ ಕೆಲಸವನ್ನು ಮುಂದೂಡುವ ಮನಸ್ಥಿತಿ ಬರಬಹುದು. ಎಚ್ಚರಿಕೆಯಿಂದ ಎಲ್ಲವನ್ನೂ ನಿಭಾಯಿಸಿ.
ಮಿಥುನ ರಾಶಿಯ ಇಂದಿನ ಭವಿಷ್ಯ

ಮಿಥುನ ರಾಶಿಯವರಿಗೆ ಇಂದು ಸಂಭಾಷಣೆಯಿಂದ ಲಾಭವಾಗುತ್ತದೆ. ಹೊಸ ಕೆಲಸಕ್ಕೆ ಸ್ನೇಹಿತರ ಸಹಕಾರ ಸಿಗುತ್ತದೆ. ಮಾತಿನ ಅಜಾಗರೂಕತೆಯಿಂದ ಮನಸ್ತಾಪವಾಗುವ ಸಾಧ್ಯತೆ ಇದೆ. ಮಾನಸಿಕ ಚಂಚಲತೆ ಕಾಡಬಹುದು.
ಕಟಕ ರಾಶಿಯ ಇಂದಿನ ಭವಿಷ್ಯ

ಕಟಕ ರಾಶಿಯವರಿಗೆ ಮಕ್ಕಳಿಂದ ಸಂತೋಷ ಲಭಿಸುತ್ತದೆ. ಸ್ನೇಹಿತರೊಂದಿಗೆ ಒಳ್ಳೆಯ ಸಮಯ ಕಳೆಯುವಿರಿ. ಕುಟುಂಬದಲ್ಲಿ ಒಳ ಸಮಸ್ಯೆಗಳು ತಲೆದೋರುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನ ಅಗತ್ಯ.
ಸಿಂಹ ರಾಶಿಯ ಇಂದಿನ ಭವಿಷ್ಯ

ಸಿಂಹ ರಾಶಿಯವರಿಗೆ ಇಂದು ಕೆಲಸದ ಕ್ಷೇತ್ರದಲ್ಲಿ ಗೌರವ ಹಾಗೂ ಮೆಚ್ಚುಗೆ ದೊರೆಯುತ್ತದೆ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅಹಂಕಾರದಿಂದ ಸಂಬಂಧಗಳಲ್ಲಿ ಬಿರುಕು ಉಂಟಾಗಬಹುದು ಎಚ್ಚರಿಕೆ ಇರಲಿ. ಖರ್ಚು ಹೆಚ್ಚಾಗುವ ಸೂಚನೆ ಇದೆ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಕನ್ಯಾ ರಾಶಿಯವರ ಮನಸ್ಥಿತಿ ಇಂದು ಶಾಂತವಾಗಿರುತ್ತದೆ ಮತ್ತು ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಆದರೆ ಕೆಲಸಗಳಲ್ಲಿ ನಿಧಾನಗತಿ ಕಂಡುಬಂದು ನಿರೀಕ್ಷಿತ ಫಲ ತಡವಾಗಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ತುಲಾ ರಾಶಿಯ ಇಂದಿನ ಭವಿಷ್ಯ

ತುಲಾ ರಾಶಿಯವರಿಗೆ ಇಂದು ಸ್ನೇಹಿತರಿಂದ ಬೆಂಬಲ ಸಿಗುತ್ತದೆ. ಸಾಮಾಜಿಕ ಸಂಪರ್ಕ ವೃದ್ಧಿಯಾಗುತ್ತದೆ. ಹಣಕಾಸಿನಲ್ಲಿ ಅಸ್ಥಿರತೆ ಕಾಣಬಹುದು. ನಿರ್ಧಾರಗಳಲ್ಲಿ ಗೊಂದಲ ಉಂಟಾಗಬಹುದು. ಕುಟುಂಬಸ್ಥರ ನೆರವು ಪಡೆಯಿರಿ.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಇಂದು ಹಣಕಾಸಿನಲ್ಲಿ ಲಾಭ ಕಂಡುಬರುತ್ತದೆ. ಹೊಸ ಯೋಜನೆಗಳು ಯಶಸ್ವಿಯಾಗುವ ಸೂಚನೆ ಇದೆ. ಅತಿಯಾದ ಅನುಮಾನದಿಂದ ಮನಶಾಂತಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಸಣ್ಣ ಬುದ್ಧಿಯಿಂದ ಮನೆಯ ವಾತಾವರಣ ಕೆಡಿಸಬೇಡಿ. ಮಾತಿನಲ್ಲಿ ಎಚ್ಚರಿಕೆ ಇರಲಿ.
ಧನು ರಾಶಿಯ ಇಂದಿನ ಭವಿಷ್ಯ

ಧನು ರಾಶಿಯವರಿಗೆ ಇಂದು ಹೊಸ ಅವಕಾಶಗಳು ಸಿಗುತ್ತದೆ. ಪ್ರಯಾಣ ಶುಭಕರವಾಗುತ್ತದೆ. ಆದರೆ ಅತಿಯಾದ ನಿರೀಕ್ಷೆಯಿಂದ ನಿರಾಸೆ ಉಂಟಾಗಬಹುದು. ಹೊಸ ಹೂಡಿಕೆಗೆ ಇದು ಸಕಾಲ. ಕುಟುಂಬಸ್ಥರೊಂದಿಗೆ ಚರ್ಚಿಸಿ ಹೊಸ ಹೆಜ್ಜೆ ಇಡಿ.
ಮಕರ ರಾಶಿಯ ಇಂದಿನ ಭವಿಷ್ಯ

ಮಕರ ರಾಶಿಯವರು ದೀರ್ಘಕಾಲದ ಸಮಸ್ಯೆಗೆ ಇಂದು ಪರಿಹಾರ ಸಿಗುತ್ತದೆ. ಬಾಕಿ ಹಣ ಕೈ ಸೇರುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕೆಲಸದ ಒತ್ತಡ ಹೆಚ್ಚಾಗಿ ವಿಶ್ರಾಂತಿಯ ಕೊರತೆ ಅನುಭವಿಸಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಕುಂಭ ರಾಶಿಯ ಇಂದಿನ ಭವಿಷ್ಯ

ಕುಂಭ ರಾಶಿಯವರಿಗೆ ಇಂದು ಹೊಸ ಯೋಚನೆಗಳು ಮೂಡುತ್ತವೆ. ನಿಮ್ಮ ಹೊಸ ಹೆಜ್ಜೆಗೆ ಸ್ನೇಹಿತರ ಸಹಾಯ ದೊರೆಯುತ್ತದೆ. ಮಾನಸಿಕ ಒತ್ತಡ ಹೆಚ್ಚಾಗಿ ನಿರ್ಧಾರಗಳಲ್ಲಿ ಅಸ್ಥಿರತೆ ಕಂಡುಬರಬಹುದು. ಕುಟುಂಬಸ್ಥರ ಬೆಂಬಲ ಸಿಗಲಿದೆ.
ಮೀನ ರಾಶಿಯ ಇಂದಿನ ಭವಿಷ್ಯ

ಮೀನ ರಾಶಿಯವರಿಗೆ ಇಂದು ಹಣಕಾಸಿನಲ್ಲಿ ಬೆಳವಣಿಗೆ ಕಂಡುಬರುತ್ತದೆ. ಹೊಸ ಕೆಲಸದಲ್ಲಿ ಕುಟುಂಬದ ಬೆಂಬಲ ಲಭಿಸುತ್ತದೆ. ಭಾವನಾತ್ಮಕ ಅತಿಸ್ಪಂದನೆಯಿಂದ ಸಣ್ಣ ವಿಷಯಕ್ಕೂ ಚಿಂತೆ ಉಂಟಾಗಬಹುದು. ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ. ಬಹು ದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗಲಿದೆ.



