ಮೇಷ ರಾಶಿಯ ಇಂದಿನ ಭವಿಷ್ಯ

ಇಂದು ನಿಮ್ಮ ಆತ್ಮವಿಶ್ವಾಸಕ್ಕೆ ಹೊಸ ಬಲ ಸಿಗುತ್ತದೆ. ಕೆಲಸಗಳಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯಕ್ಕೆ ದಿಕ್ಕು ನೀಡುವಂತಿರುತ್ತವೆ. ಹಣ ನಿಧಾನವಾಗಿ ಕೈಸೇರಿದರೂ ಭದ್ರವಾಗಿರುತ್ತದೆ. ಕುಟುಂಬದೊಂದಿಗೆ ಮನದಾಳದ ಮಾತು ಹಂಚಿಕೊಳ್ಳಲು ಉತ್ತಮವಾದ ದಿನ. ದೇಹಕ್ಕಿಂತ ಮನಸ್ಸಿಗೆ ವಿಶ್ರಾಂತಿ ಅಗತ್ಯವಾಗಿದೆ. ಇಂದು ಆತುರಕ್ಕಿಂತ ವಿವೇಚನೆ ಮುಖ್ಯ.
ವೃಷಭ ರಾಶಿಯ ಇಂದಿನ ಭವಿಷ್ಯ

ಮನಸ್ಸು ಇಂದು ನೆಮ್ಮದಿಯಲ್ಲಿರುತ್ತದೆ. ನಿಮ್ಮ ಶ್ರಮವನ್ನು ಇತರರು ಗುರುತಿಸುವ ದಿನವಾಗಿದೆ. ಹಣ ಸ್ಥಿರವಾಗಿದ್ದು, ಆದಾಯ, ಉಳಿತಾಯದ ಯೋಚನೆ ಶುಭ ಕಾಲವಾಗಿದೆ. ಮನೆಯ ಕಾರ್ಯಗಳಲ್ಲಿ ಸಂತೋಷ ಇರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಇಂದು ಮಾಡಿದ ಸಣ್ಣ ಯೋಜನೆ ಮುಂದಿನ ದಿನಗಳಲ್ಲಿ ದೊಡ್ಡ ಫಲ ನೀಡುತ್ತದೆ.
ಮಿಥುನ ರಾಶಿಯ ಇಂದಿನ ಭವಿಷ್ಯ

ಮಾತು ಮತ್ತು ಬುದ್ಧಿವಂತಿಕೆ ಎರಡೂ ಇಂದು ನಿಮ್ಮ ಶಕ್ತಿಗಳು. ಆದರೆ ಅತಿಯಾಗಿ ಮಾತನಾಡುವುದು ಸಮಸ್ಯೆ ತರಬಹುದು. ಅನಗತ್ಯ ವೆಚ್ಚ ತಪ್ಪಿಸುವುದು ಒಳಿತು. ಮನೆಯಲ್ಲಿನ ಸಣ್ಣ ಗೊಂದಲಗಳು ಮಾತುಕತೆಯಿಂದ ನಿವಾರಣೆಯಾಗಲಿದೆ. ಮಾನಸಿಕ ಚಂಚಲತೆ ಉಂಟಾಗುತ್ತದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಯೋಚಿಸಿ.
ಕಟಕ ರಾಶಿಯ ಇಂದಿನ ಭವಿಷ್ಯ

ಭಾವನಾತ್ಮಕವಾಗಿ ಇಂದು ನೀವು ಬಲಿಷ್ಠರಾಗಿರುತ್ತೀರಿ. ಮನೆಯವರ ಬೆಂಬಲ ನಿಮ್ಮ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ. ಹಣದ ಸ್ಥಿತಿ ಸಾಮಾನ್ಯವಾಗಿರುತ್ತದೆ. ಆಹಾರ ಕ್ರಮ ಕಾಪಾಡಿಕೊಳ್ಳಿ. ಯಾವುದೇ ಕೆಲಸಕ್ಕೂ ಹೃದಯದ ಮಾತು ಹೇಳಿ, ಆದರೆ ಮಿತಿ ಇರಲಿ.
ಸಿಂಹ ರಾಶಿಯ ಇಂದಿನ ಭವಿಷ್ಯ

ನಿಮ್ಮ ನಾಯಕತ್ವದ ಗುಣ ಇಂದು ಪ್ರಕಾಶಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ಗೌರವ–ಮೆಚ್ಚುಗೆ ಸಿಗಲಿದೆ. ಹಣದ ವೆಚ್ಚ ಸ್ವಲ್ಪ ಹೆಚ್ಚಾಗಬಹುದು. ದಣಿವು ಕಾಣಿಸಿಕೊಳ್ಳಬಹುದು. ನಿಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿಗೆ ಬಳಸಿಕೊಳ್ಳಿ. ಮುಂದಿನ ಯೋಚನೆ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಕನ್ಯಾ ರಾಶಿಯವರಿಗೆ ಇಂದು ಶಾಂತ, ಸಮಾಧಾನದ ದಿನವಾಗಿರುತ್ತದೆ. ನಿಮ್ಮ ಕ್ರಮಬದ್ಧತೆ ಎಲ್ಲರಿಗೂ ಮಾದರಿಯಾಗಲಿದೆ. ಹಣ ಸಮತೋಲನವಾಗಿರುತ್ತದೆ. ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತೀರಿ. ಆರೋಗ್ಯ ಉತ್ತಮವಾಗಿರುತ್ತದೆ. ಚಿಂತೆ ಕಡಿಮೆ ಮಾಡಿಕೊಂಡು ಕಾರ್ಯ ಹೆಚ್ಚು ಮಾಡಿ.
ತುಲಾ ರಾಶಿಯ ಇಂದಿನ ಭವಿಷ್ಯ

ಸ್ನೇಹ, ಸಂಬಂಧಗಳು ಇಂದು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಎಲ್ಲರನ್ನೂ ಖುಷಿಪಡಿಸಲು ಹೋಗಿ ನಿಮ್ಮನ್ನು ನೀವು ಮರೆಯ ಬೇಡಿ. ನಿಮಗೆ ಇಷ್ಟವಾಗುವ ಕೆಲಸವನ್ನು ಮಾಡಿ.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ನಿಮ್ಮ ಒಳಶಕ್ತಿ ಇಂದು ಕೆಲಸದ ಸ್ಥಳದಲ್ಲಿ ಅದ್ಭುತ ಫಲ ನೀಡುತ್ತದೆ. ಹಿತ ಶತ್ರುಗಳಿಂದ ಜಯ ಸಿಗಲಿದೆ ಹಣದಲ್ಲಿ ಲಾಭದ ಸ್ಪಷ್ಟ ಸೂಚನೆ ಇದೆ. ಮನೆಯಲ್ಲಿ ಶಾಂತಿ–ಸ್ಥೈರ್ಯ ಹೆಚ್ಚಾಗುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ನಿಮ್ಮ ನಿರ್ಧಾರಗಳ ಮೇಲೆ ನಂಬಿಕೆ ಇಡಿ.
ಧನು ರಾಶಿಯ ಇಂದಿನ ಭವಿಷ್ಯ

ಹೊಸ ವಿಚಾರಗಳು, ಹೊಸ ದೃಷ್ಟಿಕೋನ ಮನಸ್ಸಿನಲ್ಲಿ ಮೂಡುತ್ತವೆ. ಪ್ರಯಾಣದಲ್ಲಿ ಜಾಗ್ರತೆವಹಿಸುವುದು ಉತ್ತಮ. ದೊಡ್ಡ ಕನಸಿಗೆ ಸಣ್ಣ ಹೆಜ್ಜೆ ಇಂದೇ ಇಡಿ. ಯಶಸ್ಸು ನಿಮ್ಮದಾಗಲಿದೆ. ಆರೋಗ್ಯದ ಬಗ್ಗೆ ಗಮನ ಇರಲಿ.
ಮಕರ ರಾಶಿಯ ಇಂದಿನ ಭವಿಷ್ಯ

ಹಳೆಯ ಪರಿಶ್ರಮ ಇಂದು ಫಲ ಕೊಡಲು ಆರಂಭಿಸುತ್ತದೆ. ಕೆಲಸದಲ್ಲಿ ಸ್ಥಿರತೆ ಇರಲಿದೆ. ಹಣ ನಿಧಾನವಾದರೂ ಭದ್ರವಾಗಿದ್ದು, ಏರಿಕೆಯಾಗುತ್ತದೆ. ನಿಮ್ಮ ಕೆಲಸಕ್ಕೆ ಮನೆಯವರ ಬೆಂಬಲ ಸಿಗಲಿದೆ. ನಿಮ್ಮ ಕೆಲಸದಲ್ಲಿ ಶ್ರಮವನ್ನು ಕಡಿಮೆ ಮಾಡಿಕೊಳ್ಳಬೇಡಿ.
ಕುಂಭ ರಾಶಿಯ ಇಂದಿನ ಭವಿಷ್ಯ

ಇಂದು ದಿನದ ಆರಂಭದಲ್ಲಿ ಆಲೋಚನೆಗಳು ಗೊಂದಲಕಾರಿಯಾಗಬಹುದು. ಸಂಜೆ ವೇಳೆಗೆ ಸ್ಪಷ್ಟತೆ ಸಿಗಲಿದೆ. ಹಣ ಸಾಮಾನ್ಯವಾಗಿರಲಿದೆ. ಉತ್ತಮ ಆರೋಗ್ಯಕ್ಕಾಗಿ ವಿಶ್ರಾಂತಿ ಅಗತ್ಯವಾಗಿದೆ. ಎಲ್ಲವನ್ನೂ ಇಂದೇ ನಿರ್ಧರಿಸುವ ಅಗತ್ಯವಿಲ್ಲ. ತಾಳ್ಮೆ ಇರಲಿ.
ಮೀನ ರಾಶಿಯ ಇಂದಿನ ಭವಿಷ್ಯ

ಸೃಜನಶೀಲತೆ, ಆಧ್ಯಾತ್ಮಿಕ ಚಿಂತನೆ ಇಂದು ನಿಮ್ಮನ್ನು ಆವರಿಸುತ್ತದೆ. ಹಣದ ಸ್ಥಿತಿ ಉತ್ತಮವಾಗಿರಲಿದೆ. ಮನೆಯಲ್ಲಿ ಸಂತೋಷ ಹೆಚ್ಚಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ವಿನಃ ಕಾರಣ ಯಾರೊಂದಿಗೂ ಮನಸ್ತಾಪ ಬೇಡ.



