ಮೇಷ ರಾಶಿಯ ಇಂದಿನ ಭವಿಷ್ಯ

ಮೇಷ ರಾಶಿಯವರು ಇಂದು ಪರೋಪಕಾರ ಮಾಡಲು ಹೋಗಿ ಸಮಸ್ಯೆಗಳನ್ನು ತಂದುಕೊಳ್ಳಬೇಡಿ. ವ್ಯಾಪಾರ ಅಭಿವೃದ್ಧಿಯಾಗಲಿದೆ. ವಿವಾಹಕ್ಕೆ ಸಂಬಂಧಪಟ್ಟಂತ ಸಮಸ್ಯೆಗಳು ನಿವಾರಣೆ ಆಗುತ್ತೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ.
ವೃಷಭ ರಾಶಿಯ ಇಂದಿನ ಭವಿಷ್ಯ

ವೃಷಭ ರಾಶಿಯವರು ಇಂದು ಹಣದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ದುಂದು ವೆಚ್ಚದಿಂದ ಹಣ ವ್ಯಯವಾಗುವ ಅನೇಕ ಸನ್ನಿವೇಶಗಳು ಎದುರಾಗಲಿದೆ. ಹೊಸ ಜವಾಬ್ದಾರಿಗಳು ದೊರೆಯುವ ಸಾಧ್ಯತೆ ಇದೆ. ಯಾವುದಕ್ಕೂ ಹೆದರಬೇಡಿ. ಧೈರ್ಯದಿಂದ ಎದುರಿಸಿ ಯಶಸ್ಸು ನಿಮ್ಮದಾಗಲಿದೆ.
ಮಿಥುನ ರಾಶಿಯ ಇಂದಿನ ಭವಿಷ್ಯ

ಮಿಥುನ ರಾಶಿಯವರಿಗೆ ಸಂಘ ಸಂಸ್ಥೆಗಳಲ್ಲಿ ಹೆಚ್ಚಿನ ಅಭಿವೃದ್ಧಿಯಾಗಲಿದೆ. ಆರ್ಥಿಕ ಕೊರತೆ ನೀಗುವುದರಿಂದ ನೆಮ್ಮದಿ ಹೆಚ್ಚಾಗಲಿದೆ. ಮಾನಸಿಕ ಕಿರಿ ಕಿರಿ ಕಡಿಮೆಯಾಗುತ್ತದೆ. ನೈಜತೆಯನ್ನು ಅರ್ಥ ಮಾಡಿಕೊಂಡು ಪರಿಸ್ಥಿತಿಯನ್ನು ಎದುರಿಸಿ.
ಕರ್ಕಾಟಕ ರಾಶಿಯ ಇಂದಿನ ಭವಿಷ್ಯ

ಕರ್ಕಾಟಕ ರಾಶಿಯವರು ಇಂದು ಸಹೋದ್ಯೋಗಿಗಳಿಂದ ಮಹತ್ವದ ನೆರವು ಪಡೆಯಲು ಸಫಲರಾಗುತ್ತೀರಿ. ಖರ್ಚುಗಳು ಇನ್ನಷ್ಟು ಹೆಚ್ಚಾಗಲಿವೆ. ಮನೆಯಲ್ಲಿ ಮಾತನಾಡುವಾಗ ಎಚ್ಚರಿಕೆ ಇರಲಿ. ತಾಳ್ಮೆಯಿಂದ ಯಶಸ್ಸು ನಿಮ್ಮದಾಗಲಿದೆ.
ಸಿಂಹ ರಾಶಿಯ ಇಂದಿನ ಭವಿಷ್ಯ

ಸಿಂಹ ರಾಶಿಯ ವಸ್ತ್ರ ಬಂಗಾರ ವ್ಯಾಪಾರಿಗಳಿಗೆ ಇಂದು ಉತ್ತಮವಾದ ಲಾಭ ದೊರೆಯಲಿದೆ. ಇತರರ ವ್ಯವಹಾರಗಳಿಂದ ದೂರವಿರಲು ಪ್ರಯತ್ನಿಸಿ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ನೀರು ಹೆಚ್ಚಾಗಿ ಕುಡಿಯುವುದನ್ನು ರೂಢಿಸಿಕೊಳ್ಳಿ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಕನ್ಯಾ ರಾಶಿಯವರಿಗೆ ಇಂದು ಅನಿರೀಕ್ಷಿತವಾಗಿ ಹಣಕಾಸು ಪಡೆದುಕೊಳ್ಳುವ ಅವಕಾಶಗಳು ಇದೆ. ಬಹು ದಿನಗಳಿಂದ ನಿರೀಕ್ಷಿಸಿದ್ದ ಕೆಲವು ಶುಭ ಸುದ್ದಿಗಳನ್ನು ಕೇಳುವಿರಿ. ಉದ್ಯೋಗದಲ್ಲಿ ಅಭಿವೃದ್ಧಿ ಸಿಗಲಿದೆ. ನಡೆ-ನುಡಿಯಲ್ಲಿ ಎಚ್ಚರಿಕೆ ಇರಲಿ.
ತುಲಾ ರಾಶಿಯ ಇಂದಿನ ಭವಿಷ್ಯ

ತುಲಾ ರಾಶಿಯವರಿಗೆ ಸಹಕಾರ ಸಂಘಗಳ ಕ್ಷೇತ್ರದವರಿಗೆ ಉತ್ತಮ ಲಾಭ ಸಿಗಲಿದೆ. ಹಣಕಾಸು ವಿಷಯಗಳೊಂದಿಗೆ ವ್ಯವಹರಿಸುವಾಗ ಜಾಗ್ರತೆಯಿಂದಿರಿ. ಕೌಟುಂಬಿಕ ನೆಮ್ಮದಿ ಹೆಚ್ಚಾಗಿದೆ. ದೂರ ಪ್ರಯಾಣದ ಅವಕಾಶ ಸಿಗಲಿದೆ.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ವೃಶ್ಚಿಕ ರಾಶಿಯ ಕೃಷಿಕರಿಗೆ ಇಂದು ಹೆಚ್ಚಿನ ಲಾಭ ಸಿಗಲಿದೆ. ಬಹು ದಿನಗಳಿಂದ ಸತಾಯಿಸುತ್ತಿದ್ದ ಹಣವೊಂದು ಕೈ ಸೇರಲಿದೆ. ದೈವ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಮನಸ್ಸಿನ ನೆಮ್ಮದಿ ಹೆಚ್ಚಾಗುತ್ತದೆ. ಮಕ್ಕಳಿಂದ ಶುಭ ಸುದ್ದಿ ಸಿಗಲಿದೆ.
ಧನಸ್ಸು ರಾಶಿಯ ಇಂದಿನ ಭವಿಷ್ಯ

ಧನಸ್ಸು ರಾಶಿಯವರಿಗೆ ಇಂದು ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿಯಾಗಲಿದೆ. ಆಸ್ತಿ ಖರೀದಿ ಅಥವಾ ಮಾರಾಟ ಮಾಡುವ ಸಂದರ್ಭದಲ್ಲಿ ಎಚ್ಚರವಹಿಸುವುದು ಸೂಕ್ತ. ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗಲಿದೆ.
ಮಕರ ರಾಶಿಯ ಇಂದಿನ ಭವಿಷ್ಯ

ಮಕರ ರಾಶಿಯವರ ವ್ಯಾಪಾರ ಕ್ಷೇತ್ರದಲ್ಲಿ ಪ್ರಗತಿಯಾಗಲಿದೆ. ಮಿತ್ರರು ನಿಮಗೆ ಸಹಕಾರ ನೀಡಲಿದ್ದಾರೆ. ಮಹತ್ವಕರ ಕೆಲಸದಲ್ಲಿ ಇಂದು ಕಾರ್ಯಸಿದ್ಧಿಯಾಗಲಿದೆ. ಮನೆಯಲ್ಲಿ ಖುಷಿ ಸಂತೋಷ ಹೆಚ್ಚಾಗಲಿದೆ.
ಕುಂಭ ರಾಶಿಯ ಇಂದಿನ ಭವಿಷ್ಯ

ಕುಂಭ ರಾಶಿಯವರಿಗೆ ಇಂದು ನಿಮ್ಮ ಕುಟುಂಬ ಸದಸ್ಯರು ಸಹ ನಿಮ್ಮೊಂದಿಗೆ ಸಹಕರಿಸುವುದಿಲ್ಲ. ಕುಂಟುಂಬ ಕಲಹವಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ. ಮಾತಿನಲ್ಲಿ ವಿನಯತೆ ಇರಲಿ. ಆದಷ್ಟು ತಾಳ್ಮೆಯಿಂದ ನಡೆದುಕೊಳ್ಳಿ.
ಮೀನ ರಾಶಿಯ ಇಂದಿನ ಭವಿಷ್ಯ

ಮೀನ ರಾಶಿಯವರಿಗೆ ಈ ದಿನ ಹಿತ ಶತ್ರುಗಳಿಂದ ತೊಂದರೆ ಉಂಟಾಗುತ್ತದೆ. ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳುವ ಮುನ್ನ ಎರಡು ಬಾರಿ ಆಲೋಚನೆ ಮಾಡಿ. ತಾಳ್ಮೆಯಿಂದ ನಡೆದುಕೊಳ್ಳಿ. ಆರೋಗ್ಯದಲ್ಲಿ ಎಚ್ಚರಿಕೆ ಇರಲಿ.









