ಮೇಷ ರಾಶಿಯ ಇಂದಿನ ಭವಿಷ್ಯ

ಮೇಷ ರಾಶಿಯವರಿಗೆ ಇಂದು ಮನಸ್ಸಿನಲ್ಲಿ ತುಂಬಿದ್ದ ಚಿಂತೆ ನಿಧಾನವಾಗಿ ಕರಗುತ್ತದೆ. ಕೆಲಸದಲ್ಲಿ ನೀವು ಮಾಡಿದ ಶ್ರಮ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಹಣ ನಿಧಾನವಾಗಿ ಏರಿಕೆ ಕಾಣುತ್ತಿದೆ. ಮನೆಯಲ್ಲಿ ಮೃದು ಮಾತಿನಿಂದ ಒಡನಾಟ ಹೆಚ್ಚಾಗಲಿದೆ. ದೇಹದಲ್ಲಿ ಸ್ವಲ್ಪ ಮಟ್ಟಿನ ಆಯಾಸ ಕಂಡು ಬರಲಿದೆ. ಇಂದು ಅಗತ್ಯವಿಲ್ಲದ ವಾಗ್ವಾದ ತಪ್ಪಿಸಿ.
ವೃಷಭ ರಾಶಿಯ ಇಂದಿನ ಭವಿಷ್ಯ

ವೃಷಭ ರಾಶಿಯವರ ಮನೆಯ ವಾತಾವರಣ ಹರ್ಷ–ನೆಮ್ಮದಿಯಿಂದ ತುಂಬಿರುತ್ತದೆ. ನಿಮ್ಮ ಕೆಲಸಗಳಿಗೆ ಹಿರಿಯರಿಂದ ಸಹಕಾರ ಸಿಗುತ್ತದೆ. ಹಣದಲ್ಲಿ ಸಣ್ಣ ಮಟ್ಟಿನ ಲಾಭದ ಸೂಚನೆ ಇದೆ. ಆರೋಗ್ಯ ಉತ್ತಮವಾಗಿರುತ್ತದೆ. ನೀವೇ ಮಾಡಿದ ಮಾತು ನೀವೇ ಪಾಲಿಸಿ. ಗೌರವ ಹೆಚ್ಚಾಗುತ್ತದೆ.
ಮಿಥುನ ರಾಶಿಯ ಇಂದಿನ ಭವಿಷ್ಯ

ಮಿಥುನ ರಾಶಿಯವರು ಇಂದು ಮಾತಿನ ತೂಕ, ಮಾತಿನ ಮೃದುವು — ಎರಡನ್ನೂ ಗಮನಿಸಬೇಕು. ಅಪ್ರತೀಕ್ಷಿತ ವೆಚ್ಚ ಸಂಭವವಿದೆ. ಮನೆಯಲ್ಲಿ ಚಿಕ್ಕಪುಟ್ಟ ಗೊಂದಲ ಕಾಣಸಿಕೊಳ್ಳಬಹುದು. ಮಾನಸಿಕ ವಿಶ್ರಾಂತಿಯ ಅಗತ್ಯವಿದೆ. ಯಾವುದೇ ವಿಚಾರಕ್ಕೂ ಅತಿಯಾಗಿ ಯೋಚಿಸಬೇಡಿ.
ಕಟಕ ರಾಶಿಯ ಇಂದಿನ ಭವಿಷ್ಯ

ಕಟಕ ರಾಶಿಯವರ ಮನೆಯಲ್ಲಿಇಂದು ಸಂತೋಷದ ಹೊಳೆ ಹರಿಯಲಿದೆ. ಕೆಲಸದಲ್ಲಿಯೂ ಸಹ ನಿಮ್ಮ ಪರಿಶ್ರಮಕ್ಕೊಂದು ತಕ್ಕ ಪ್ರತಿಫಲದ ಸೂಚನೆ ಇದೆ.ಹಣ ಸ್ಥಿರವಾಗಿರುತ್ತದೆ. ಹಿತಾಹಾರ, ಹಿತವಚನ ಎರಡರ ಬಗ್ಗೆಯೂ ಇಂದು ಗಮನ ಇರಲಿ.
ಸಿಂಹ ರಾಶಿಯ ಇಂದಿನ ಭವಿಷ್ಯ

ಸಿಂಹ ರಾಶಿಯವರಿಗೆ ಇಂದು ನಿಮ್ಮ ಧೈರ್ಯ ಮಗೆ ಬಲ ನೀಡುತ್ತದೆ. ಕೆಲಸದ ಸ್ಥಳದಲ್ಲಿ ಹೊಗಳಿಕೆ ಸಿಗಲಿದೆ. ಹಣದ ವೆಚ್ಚ ಜಾಸ್ತಿಯಾಗುವ ಸಾಧ್ಯತೆಯಿದ್ದು, ಗಮನ ಅಗತ್ಯ. ದೇಹದ ಶ್ರಮ ಹೆಚ್ಚಾಗಬಹುದು. ಖರ್ಚನ್ನು ಮಿತಿಗೊಳಿಸಿ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಕನ್ಯಾ ರಾಶಿಯವರಿಗೆ ಇಂದು ಶಾಂತ–ಸಮಾಧಾನದ ದಿನವಾಗಿದೆ. ನೀವು ಆರಂಭಿಸಿದ ಕೆಲಸಗಳು ನೇರವಾಗಿ ತನ್ನ ದಾರಿಯಲ್ಲಿ ಸಾಗುತ್ತವೆ. ಹಣದಲ್ಲಿ ಸಮತೋಲನ ಇರಲಿದೆ. ಕುಟುಂಬದಲ್ಲಿ ಸೌಮ್ಯ ವಾತಾವರಣ ಇರಲಿದೆ. ಮನಃಶಾಂತಿಗೆ ಸಮಯ ಕೊಡಿ.
ತುಲಾ ರಾಶಿಯ ಇಂದಿನ ಭವಿಷ್ಯ

ತುಲಾ ರಾಶಿಯವರಿಗೆ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಖುಷಿ ನೆಮ್ಮದಿ ಸಿಗುತ್ತದೆ. ಹಣಕಾಸು ವ್ಯವಹಾರದಲ್ಲಿ ಜಾಗೃತಿಯ ಅಗತ್ಯ. ಹಣದ ವಿಷಯದಲ್ಲಿ ಯಾರೊಂದಿಗೂ ಅತಿಯಾದ ನಂಬಿಕೆ ಬೇಡ.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಇಂದು ನಿಮ್ಮ ಬುದ್ಧಿವಂತಿಕೆ, ದೃಢನಿಲುವು ಕೆಲಸದಲ್ಲಿ ಯಶಸ್ಸು ತರುತ್ತದೆ. ಹಣದಲ್ಲಿ ಉತ್ತಮ ಲಾಭದ ಸೂಚನೆ ಇದೆ. ಮನೆಯಲ್ಲಿ ಶಾಂತಿ–ಸಮಾಧಾನ ಇರಲಿದೆ.ಇಂದು ಹೊಸ ಯೋಜನೆಗೆ ಆರಂಭಿಕ ಹೆಜ್ಜೆ ಹಾಕಲು ಸೂಕ್ತ ಕಾಲ.
ಧನು ರಾಶಿಯ ಇಂದಿನ ಭವಿಷ್ಯ

ಧನು ರಾಶಿಯವರಿಗೆ ಇಂದು ನಿಮ್ಮ ಆಸಕ್ತಿ ವಿಷಯಗಳಲ್ಲಿ ಹೊಸ ಜ್ಞಾನ ಬೆಳೆಯುವ ದಿನ. ಮನೆದಲ್ಲಿಯೂ ಶುಭಚರ್ಚೆ ಸಂಭವಿದೆ. ಪ್ರಯಾಣದಲ್ಲಿ ಜಾಗ್ರತೆ. ಯಾವುದೇ ವಿಚಾರದಲ್ಲಿ ಆತುರದ ನಿರ್ಣಯ ಬೇಡ.
ಮಕರ ರಾಶಿಯ ಇಂದಿನ ಭವಿಷ್ಯ

ಮಕರ ರಾಶಿಯವರಿಗೆ ಹಳೆಯ ಕೆಲಸಗಳಿಂದ ಇಂದು ಮುಕ್ತಿ ಸಿಗುತ್ತದೆ. ಮನೆಯಲ್ಲಿ ನೆಮ್ಮದಿ. ಹಣ ನಿಧಾನವಾಗಿ ಸುಧಾರಣೆಯಾಗಲಿದೆ. ಇಂದು ಕುಟುಂಬದವರ ಮಾತಿಗೂ ಕಿವಿಗೊಡಿ.
ಕುಂಭ ರಾಶಿಯ ಇಂದಿನ ಭವಿಷ್ಯ

ಕುಂಭ ರಾಶಿಯವರಿಗೆ ಇಂದು ಬೆಳಿಗ್ಗೆ ಸ್ವಲ್ಪ ತುರ್ತು ಕೆಲಸಗಳು ಕಾಡಬಹುದು. ಮಧ್ಯಾಹ್ನದ ನಂತರ ಎಲ್ಲಾ ಸರಿಯಾಗಿ ಜೋಡಣೆಯಾಗುತ್ತದೆ. ಮನೆಯಲ್ಲಿ ಹೊಂದಾಣಿಕೆಯಿಂದ ಮಾತಾಡಿದರೆ ಒಗ್ಗಟ್ಟು ಹೆಚ್ಚಾಗಲಿದೆ. ಶುಭ ಕಾರ್ಯಕ್ಕೆ ಆತ್ಮೀಯರ ನೆರವು ಸಿಗಲಿದೆ. ಆರೋಗ್ಯಕ್ಕಾಗಿ ಹೆಚ್ಚು ವಿಶ್ರಾಂತಿ ಅಗತ್ಯವಿದೆ. ಇಂದು ಒತ್ತಡದ ಕೆಲಸ ತಪ್ಪಿಸಿ.
ಮೀನ ರಾಶಿಯ ಇಂದಿನ ಭವಿಷ್ಯ

ಮೀನ ರಾಶಿಯವರಿಗೆ ಇಂದು ನಿಮ್ಮ ಕಲ್ಪನೆಗಳು ಪ್ರಕಾಶಮಾನವಾಗಿರಲಿದ್ದು, ಕಾರ್ಯಕ್ಷೇತ್ರದಲ್ಲಿಯೂ ಆದ್ಯತೆಯ ಸ್ಥಾನ ಸಿಗಲಿದೆ. ಹಣದಲ್ಲಿ ಲಾಭದ ಬೆಳಕು ಕಾಣಿಸಿಕೊಳ್ಳಲಿದೆ. ಆತ್ಮೀಯರ ಭೇಟಿಯಿಂದ ಮನೆಯಲ್ಲಿ ಸಂತೋಷ ಹೆಚ್ಚಾಗಲಿದೆ. ಇಂದು ನಿಮ್ಮ ಹವ್ಯಾಸಕ್ಕೆ ಸಮಯ ಕೊಡಿ.










