
ಮೇಷ ರಾಶಿಯ ಇಂದಿನ ಭವಿಷ್ಯ

ಇಂದು ನಿಮಗೆ ಸಹಜ ಸವಾಲುಗಳು ಎದುರಾಗುತ್ತವೆ. ಆದರೆ ನಿಮ್ಮ ಧೈರ್ಯ ಅದನ್ನು ಸುಲಭವಾಗಿ ಜಯಿಸುವಂತಾಗುತ್ತದೆ. ಹಣದಲ್ಲಿ ನಿಧಾನ ಏರಿಕೆಯಾಗಲಿದೆ. ಮನೆಯಲ್ಲಿ ಮೃದುವಾದ ಮಾತು ಇರಲಿ. ದೇಹದಲ್ಲಿ ಬಳಲಿಕೆ ಹೆಚ್ಚಾಗಲಿದೆ. ಇಂದು ಕೆಲಸಗಳನ್ನು ಕ್ರಮಬದ್ಧವಾಗಿ ಮಾಡಿ.
ವೃಷಭ ರಾಶಿಯ ಇಂದಿನ ಭವಿಷ್ಯ

ಇಂದು ಮನಸ್ಸು ಹರುಷದಿಂದ ತುಂಬಿರುತ್ತದೆ. ನೀವು ಮಾಡುವ ಕೆಲಸಗಳಿಗೆ ಶ್ಲಾಘನೆ, ಬೆಂಬಲ ದೊರೆಯುತ್ತದೆ. ಇಂದು ಒಳ್ಳೆಯ ದಿನವಾಗಿದ್ದು, ಸಣ್ಣ ಆದಾಯದ ಸುಳಿವಿದೆ. ಕುಟುಂಬದಲ್ಲಿ ಹಿತ–ಮಿತ ಮಾತು ಅಗತ್ಯವಾಗಿದೆ. ಇಂದು ಸಮಯದ ಮೌಲ್ಯ ಅರಿತು ನಡೆಯಿರಿ.
ಮಿಥುನ ರಾಶಿಯ ಇಂದಿನ ಭವಿಷ್ಯ

ನಿಮ್ಮ ಮಾತು ಇಂದು ಕೆಲವು ಜನರಿಗೆ ಪ್ರೇರಣೆಯಾದರೆ, ಕೆಲವರಿಗೆ ಅಸಮಾಧಾನ ತರಬಹುದು. ನುಡಿ–ನಡಿಗೆಯಲ್ಲಿ ಜಾಗ್ರತೆ ಅಗತ್ಯ. ಅನಾವಶ್ಯಕ ವೆಚ್ಚ ತಪ್ಪಿಸಿ. ಮನೆಯಲ್ಲಿ ಚಿಕ್ಕ ಗೊಂದಲಗಳು ಬರಬಹುದು. ಯಾವುದೇ ವಿಚಾರವನ್ನು ಅತಿಯಾಗಿ ಚಿಂತಿಸಬೇಡಿ.
ಕಟಕ ರಾಶಿಯ ಇಂದಿನ ಭವಿಷ್ಯ

ಇಂದು ಮನೆಯಲ್ಲಿ ಚೈತನ್ಯ, ಸ್ನೇಹಪೂರ್ಣ ವಾತಾವರಣವಿದೆ. ಕೆಲಸದಲ್ಲಿಯೂ ಹೊಸ ಪ್ರೇರಣೆ ಸಿಗುತ್ತದೆ. ಮುಖ್ಯವಾದ ನಿರ್ಧಾರ ಸರಿಯಾಗಿದೆಯೆಂಬ ಭರವಸೆ ನಿಮ್ಮಲ್ಲಿ ಹೆಚ್ಚುತ್ತದೆ. ಮನಸ್ಸನ್ನು ಭಾರವಾಗಿಸಿಕೊಳ್ಳಬೇಡಿ ಎಲ್ಲರೊಂದಿಗೂ ಬೆರೆಯಿರಿ.
ಸಿಂಹ ರಾಶಿಯ ಇಂದಿನ ಭವಿಷ್ಯ

ನಿಮ್ಮ ವ್ಯಕ್ತಿತ್ವ ಇಂದು ಮತ್ತಷ್ಟು ಪ್ರಭಾವಶಾಲಿಯಾಗಲಿದೆ. ಕೆಲಸದಲ್ಲಿ ಮೆಚ್ಚುಗೆ, ಗೌರವ ದೊರಕುತ್ತದೆ. ವೆಚ್ಚಗಳು ಹೆಚ್ಚಾಗುವ ಸೂಚನೆ ಇದೆ ಎಚ್ಚರಿಕೆ ವಹಿಸುವುದು ಅಗತ್ಯ. ಮನೆಯಲ್ಲಿ ಶಾಂತ ವಾತಾವರಣ ಇರುತ್ತದೆ. ದೇಹದ ಶ್ರಮ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಇಂದು ಮನಸ್ಸು ನೀರಿನಂತೆ ನಿಶ್ಚಲವಾಗಿರುತ್ತದೆ. ಕಾರ್ಯಗಳಲ್ಲಿ ಸ್ವಚ್ಛತೆ, ಪಾರದರ್ಶಕತೆ ಇರಲಿ. ಹಣ ಸ್ಥಿರವಾಗಿರುತ್ತದೆ. ಇಂದು ಕುಟುಂಬಕ್ಕೆ ಸಮಯ ಕೊಡುವುದು ಒಳ್ಳೆಯದು.ಆರೋಗ್ಯ ಉತ್ತಮವಾಗಿರುತ್ತದೆ. ಇಂದು ಧ್ಯಾನ, ಪ್ರಾರ್ಥನೆ ಮಾಡಿದರೆ ಬದುಕಿಗೆ ಒಳಿತು ಹೆಚ್ಚಾಗಲಿದೆ.
ತುಲಾ ರಾಶಿಯ ಇಂದಿನ ಭವಿಷ್ಯ

ಸ್ನೇಹಿತರ ಸಹವಾಸವು ಇಂದು ಮನಸ್ಸಿಗೆ ಖುಷಿ ಕೊಡುತ್ತದೆ. ಆದರೆ ಹಣಕಾಸಿನ ವಿಷಯದಲ್ಲಿ ಜಾಗೃತಿ ತುಂಬಾ ಅಗತ್ಯ.ಹಣದಲ್ಲಿ ಅನಿರೀಕ್ಷಿತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸ ನಿಧಾನವಾಗಿ ಆಗುತ್ತದೆ ಆದರೆ ಸರಿಯಾದ ಸಮಯಕ್ಕೆ ಆಗುತ್ತದೆ. ಇಂದು ಯಾರಿಗೂ ಹಣ ಸಾಲವಾಗಿ ಕೊಡದಿರುವುದು ಒಳಿತು.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ಇಂದು ನಿಮ್ಮ ತೀರ್ಮಾನ ಶಕ್ತಿ ಆಳವಾದುದು. ಕೆಲಸದಲ್ಲಿ ಉತ್ತೇಜನ, ಆತ್ಮವಿಶ್ವಾಸ ಹೆಚ್ಚಳವಾಗುತ್ತದೆ. ಹಣದಲ್ಲಿ ಇಂದು ಲಾಭದ ಬೆಳಕು ಕಾಣಿಸುತ್ತದೆ.ಮನೆಯಲ್ಲಿ ನೆಮ್ಮದಿ ವಾತಾವರಣ ಇರುತ್ತದೆ. ನಿಮ್ಮ ಗುರಿಯತ್ತ ಹೊಸ ಹೆಜ್ಜೆ ಹಾಕಿ. ಯಶಸ್ಸು ನಿಮ್ಮದಾಗುತ್ತದೆ.
ಧನು ರಾಶಿಯ ಇಂದಿನ ಭವಿಷ್ಯ

ಹೊಸ ಅವಕಾಶಗಳು ನಿಮ್ಮತ್ತ ಕೈಬೀಸುವ ದಿನವಾಗಿದೆ. ಕಲಿಕೆಯ ವಿಷಯಗಳು ಜಾಗೃತವಾಗುತ್ತವೆ. ಹಣದಲ್ಲಿ ಸಮತೋಲನ ಇರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳ ಬಗ್ಗೆ ಚರ್ಚೆಗಳು ನಡೆಯುತ್ತದೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಇಂದು ಆತುರದ ನಿರ್ಧಾರ ತಪ್ಪಿಸಿ.
ಮಕರ ರಾಶಿಯ ಇಂದಿನ ಭವಿಷ್ಯ

ಇಂದು ಹಳೆಯ ಕೆಲಸಗಳ ತಳಹದಿಯನ್ನು ಸರಿ ಮಾಡಿಕೊಳ್ಳುವ, ಹೊಸ ಆರಂಭಕ್ಕೆ ಸಿದ್ಧತೆ ಮಾಡುವ ದಿನವಾಗಿದೆ.ಹಣದಲ್ಲಿ ಚೇತರಿಕೆಯಾಗಲಿದೆ. ಮನೆಯಲ್ಲಿ ಕುಟುಂಬಸ್ಥರ ಮಾತಿಗೂ ಮಹತ್ವ ಕೊಡಿ.
ಕುಂಭ ರಾಶಿಯ ಇಂದಿನ ಭವಿಷ್ಯ

ಬೆಳಗ್ಗೆ ಮನಸ್ಸಿನ ಚಂಚಲತೆ ಹೆಚ್ಚುತ್ತದೆ ಮಧ್ಯಾಹ್ನದ ನಂತರ ಮನಸ್ಸಿನಲ್ಲಿ ಸ್ಪಷ್ಟತೆ ಇರುತ್ತದೆ. ಮೃದು ಮಾತಿನಲ್ಲಿ ಎಲ್ಲವೂ ಸಾಧ್ಯ. ಆರೋಗ್ಯದಲ್ಲಿ ದೌರ್ಬಲ್ಯ ಹೆಚ್ಚಾಗಲಿದ್ದು, ವಿಶ್ರಾಂತಿ ಅವಶ್ಯಕವಾಗಿದೆ.ಇಂದು ಮುಖ್ಯವಾದ ನಿರ್ಧಾರಗಳನ್ನು ಮುಂದೂಡಿ.
ಮೀನ ರಾಶಿಯ ಇಂದಿನ ಭವಿಷ್ಯ

ಇಂದು ನಿಮ್ಮ ಕಲ್ಪನೆ–ಸೃಜನಶೀಲತೆ ಹೆಚ್ಚಾಗು ದಿನ. ಹೊಸ ಆಲೋಚನೆಗಳು ಲಾಭ ನೀಡುತ್ತದೆ. ಮನೆಯಲ್ಲಿ ಸಂತೋಷ, ಹರ್ಷ ಹೆಚ್ಚಾಗುತ್ತದೆ. ಆರೋಗ್ಯದತ್ತ ಗಮನ ಇರಲಿ. ಆಧ್ಯಾತ್ಮಿಕ ಚಿಂತನೆ ಉತ್ತಮ ಫಲ ಕೊಡುತ್ತದೆ.












