Important
2024 ರ ಲೋಕಸಭಾ ಚುನಾವಣೆ ಹಿನ್ನೆಲೆ.
ಹುಟ್ಟುಹಬ್ಬದ ನೆಪದಲ್ಲಿ ಡಿ.ವಿ. ಸದಾನಂದಗೌಡರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಶೋಭಾ ಕರಂದ್ಲಾಜೆ.
ಶೋಭಾ ಕರಂದ್ಲಾಜೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.
ಡಿ.ವಿ.ಸದಾನಂದಗೌಡ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ.
ಇಂದು 72 ನೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಡಿವಿಎಸ್.
ಕಾರ್ಯಕರ್ತರೊಂದಿಗೆ ತಮ್ಮ ನಿವಾಸದಲ್ಲಿ ಸರಳವಾಗಿ ಆಚರಿಸಿಕೊಂಡ ಡಿವಿಎಸ್.
ಡಿವಿಎಸ್ ಹುಟ್ಟುಹಬ್ಬ ಎಂಬುದನ್ನು ಅರಿತು, ದಿಢೀರ್ ಎಂದು ಅವರ ನಿವಾಸಕ್ಕೆ ಆಗಮಿಸಿದ ಶೋಭಾ ಕರಂದ್ಲಾಜೆ.
ಶೋಭಾ ಕರಂದ್ಲಾಜೆ ಹೆಸರು ಘೋಷಣೆಯಾಗುತ್ತಿದ್ದಂತೆ ಸೈಲೆಂಟ್‌ಗಾಗಿದ್ದ ಡಿವಿಎಸ್.
ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸುತ್ತಾಡುತ್ತಿರುವ ಶೋಭಾ ಕರಂದ್ಲಾಜೆ.
ಬೆಂಗಳೂರು ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿನ ಶಾಸಕರ ನಿವಾಸ ಹಾಗೂ ಮುಖಂಡರ ಮನೆಗಳಿಗೆ ಭೇಟಿ ಕೊಟ್ಟು ವಿಶ್ವಾಸಕದಕೆ ತೆಗೆದುಕೊಳ್ಳುತ್ತಿರುವ ಶೋಭಾ ಕರಂದ್ಲಾಜೆ.
ಶೋಭಾ ಕರಂದ್ಲಾಜೆ ನಡೆಯನ್ನು ದೂರದಿಂದಲೇ ಕುಳಿತು ವೀಕ್ಷಿಸುತ್ತಿದ್ದ ಡಿವಿಎಸ್.
ಇಂದು ಏಕಾಏಕಿ ಡಿವಿಎಸ್ ನಿವಾಸಕ್ಕೆ, ಅವರ ಹುಟ್ಟುಹಬ್ಬಕ್ಕೆ ಶುಭ ಕೋರುವ ನೆಪದಲ್ಲಿ ಆಗಮಿಸಿದ ಶೋಭಾ ಕರಂದ್ಲಾಜೆ.
ಅವರ ನಿವಾಸಕ್ಕೆ ಆಗಮಿಸಿ, ಶುಭ ಕೋರಿ, ಆಶೀರ್ವಾದವನ್ನು ಪಡೆದೆ ಎಂದು ಮಾಧ್ಯಮಗಳ ಮುಂದೆ ತಿಳಿಸಿದ ಶೋಭಾ ಕರಂದ್ಲಾಜೆ.
ಹುಟ್ಟುಹಬ್ಬಕ್ಕೆ ಶುಭ ಕೋರುವ ನೆಪದಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಶೋಭಾ ಕರಂದ್ಲಾಜೆ.