ಈ ಬಾರಿ ಲೋಕಸಭಾ ಚುನಾವಣೆಗೆ(mp election) ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರ (Bangalore rural)ಕ್ಷೇತ್ರ ಕೂಡ ಒಂದು. ಡಿ.ಕೆ. ಬ್ರದರ್ಸ್ ಭದ್ರಕೋಟೆ ಅಂತ ಗುರುತಿಸಿಕೊಂಡಿರುವ ಈ ಪ್ರಾಂತ್ಯದಲ್ಲಿ ಈ ಬಾರಿ ಸಂಸದ ಸುರೇಶ್ (Dk Suresh)ರನ್ನ ಹೇಗಾದ್ರೂ ಪರಾಭವಗೊಳಿಸಬೇಕು ಅಂತ ಬಿಜೆಪಿ-ಜೆಡಿಎಸ್ (BJP-Jds) ಮೈತ್ರಿ ತಂತ್ರಗಾರಿಕೆ ನಡೆಸಿದೆ. ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ಮೈತ್ರಿ ನಾಯಕರಿಗೆ ಈಗ ಪರ್ಫೆಕ್ಟ್ (Perfect) ಕ್ಯಾಂಡಿಡೇಟ್ ಸಿಕ್ಕಹಾಗಿದೆ.

ಜಯದೇವ ಆಸ್ಪತ್ರೆಯ (jayadeva hospital) ನಿರ್ದೇಶಕನ ಸ್ಥಾನದಿಂದ ಡಾಕ್ಟರ್ ಮಂಜುನಾಥ್ (Dr.manjunath) ನಿವೃತ್ತಿಗೊಂಡ ನಂತರ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ಜೋರಾಗಿದ್ದವು. ಆದ್ರೆ ಮೈಸೂರಿನಿಂದಲೋ (mysore)ಅಥವಾ ಬೆಂಗಳೂರು ಗ್ರಾಮಾಂತರದಿಂದಲೋ (Bangalore rural) ಎಂಬ ಸ್ಪಷ್ಟತೆ ಇರಲಿಲ್ಲ. ಆದ್ರೆ ಈಗ ಒಂದು ಸ್ಪಷ್ಟ ಚಿತ್ರಣ ಸಿಕ್ಕಂತಾಗಿದೆ. ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ (Dk Suresh)ಸುರೇಶ್ ವಿರುದ್ಧವಾಗಿ ಡಾಕ್ಟರ್ ಮಂಜುನಾಥ್ ಅಖಾಡಕ್ಕಿಳಿಯೋದು ಬಹುತೇಕ ಫಿಕ್ಸ್ ಎನ್ನಲಾಗ್ತಿದೆ.

ಬಿಜೆಪಿ(BJP) ಉನ್ನತ ಮೂಲಗಳ ಮಾಹಿತಿಯ ಪ್ರಕಾರ , ಡಾಕ್ಟರ್ ಮಂಜುನಾಥ್ (Dr.manjunath)ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ (Bangalore)ಕ್ಷೇತ್ರದಿಂದ ಕಣಕ್ಕಿಳಿಯೋದು ಬಹುತೇಕ ಖಾತ್ರಿಯಾಗಿದೆ. ಜಯದೇವ ಸಂಸ್ಥೆಯ ನಿರ್ದೇಶರಾಗಿ ಅವರು ಸಲ್ಲಿಸಿರುವ ಸೇವೆ ಮತ್ತು ದೇವೇಗೌಡರ (Devegowda) ಕುಟುಂಬಕ್ಕೆ ಸೇರಿದವರು ಎಂಬ ಬಲ ಜೊತೆಗೆ ಒಕ್ಕಲಿಗ ಸಮುದಾಯದವರೂ ಆಗಿರೋದ್ರಿಂದ , ಡಿ.ಕೆ ಸುರೇಶ್ ಗೆ ಎಲ್ಲಾ ಹಂತದಲ್ಲೂ ಸಮಬಲದ ಪೈಪೋಟಿ ನೀಡಬಲ್ಲ ಅಭ್ಯರ್ಥಿ ಎಂಬ ನಿರ್ಧಾರಕ್ಕೆ ಬಿಜೆಪಿ ಹೈಕಮಾಂಡ್ (Highcommand) ಬಂದಿದ್ದು , ಅವರನ್ನೇ ಬಹುತೇಕ ಅಂತಿಮಗೊಳಿಸುವುದು ಎಂದು ಹೇಳಲಾಗ್ತಿದೆ.

ಅಲ್ಲಿಗೆ ಮತ್ತೊಮ್ಮೆ ಬೆಂಗಳೂರು ಗ್ರಾಮಾಂತರದಲ್ಲಿ ಒಕ್ಕಲಿಗ VS ಒಕ್ಕಲಿಗ ಅಭ್ಯರ್ಥಿಗಳ(Candidates) ನಡುವೆ ಪ್ರಬಲ ಸ್ಪರ್ಧೆ ಏರ್ಪಡುವ ಎಲ್ಲಾ ಸಾಧ್ಯತೆಗಳಿದ್ದು ಫಲಿತಾಂಶ (Result) ಏನಾಗಲಿದೆ ಎಂಬ ಕದನ ಕುತೂಹಲ ಹೆಚ್ಚಾಗಿದೆ.