ಸಂಸದ ಪ್ರಜ್ವಲ್ ರೇವಣ್ಣ (prajwalrevanna) ಅಶ್ಲೀಲ ವೀಡಿಯೋ (sex video) ಹರಿದಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ (Dk shivakumar) ವಿರುದ್ಧ ಬಿಜೆಪಿ (Bjp) ಅಭ್ಯರ್ಥಿ ರಾಜೂಗೌಡ (Raju gowda) ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ.ಡಿ.ಕೆ ಶಿವಕುಮಾರ್ ಪೆನ್ ಡ್ರೈವ್ ಯೂನಿವರ್ಸಿಟಿ ತೆಗೆದಿದ್ದಾನೆ ಎಂದು ಹೇಳಿದ್ದಾರೆ. ಆ ಮೂಲಕ ಕುಮಾರಸ್ವಾಮಿ (kumaraswamy) ನಂತರದಲ್ಲಿ ಇದೀಗ ರಾಜೂಗೌಡ ಡಿಕೆ ವಿರುದ್ಧ ಮಾತನಾಡಿದ್ದಾರೆ.
![](https://pratidhvani.com/wp-content/uploads/2024/05/IMG_7418.jpeg)
ಡಿಕೆಶಿ ಒಂಥರಾ 24 ಅವರ್ಸ್ (24 hours) ರಾಜಕೀಯ ಮಾಡುವ ರಾಜಕಾರಣಿ. ಎದುರಾಳಿಗಳಿಗೆ ಯಾವಾಗ ಯಾವ ಅಸ್ತ ಪ್ರಯೋಗಿಸಬೇಕು, ಹೆಂಗೆ ಬಗ್ಗೆ ಬಡಿಬೇಕು ಅಂತ ಗೊತ್ತಿದೆ. ಹೀಗಾಗಿ ಅವರು ಎಲ್ಲಾ ಅಸ್ತ್ರ ಉಪಯೋಗಿಸುತ್ತಾರೆ. ಕೆಲವೊಬ್ಬರಿಗೆ ಬೆದರಿಸುವ ಅಸ್ತ್ರ. ಕೆಲವೊಬ್ಬರಿಗೆ ಸಿಡಿ (cd) ಅಸ್ತ್ರ ಉಪಯೋಗಿಸ್ತಾರೆ. ಟೈಮ್ ಬಂದಾಗ ಯಾವ್ಯಾವ ಎದುರಾಳಿಗೆ ಏನ್ ಕೊಡಬೇಕು ಕೊಡ್ತಾರೆ ಎಂದಿದ್ದಾರೆ.
ಒಂದೆರಡು ವರ್ಷದಿಂದ ಡ್ರೈವರ್ (Driver) ಗೆ ಗೊತ್ತಿತ್ತು ಅಂತೆ. ಮತ್ಯಾಕೆ ಅವಾಗಲೇ ಹೇಳಲಿಲ್ಲ. ಆಗ್ಲೆ ಮಾಡಿದ್ರೆ ಇಷ್ಟೋತ್ತಿಗೆ ಸಜಾನೇ ಮಾಡಿಸಬಹುದಿತ್ತು. ಇವರಿಗೆ ತಪ್ಪು ಮಾಡಿದವನಿಗಿಂತ ರಾಜಕೀಯನೇ ಮುಖ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.