• Home
  • About Us
  • ಕರ್ನಾಟಕ
Thursday, September 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಡಿ ಗ್ಯಾಂಗ್​​ ಕೇಸ್​, ಒತ್ತಡಕ್ಕೆ ಬಗ್ಗದ ಸಿಎಂ ಸಿದ್ದರಾಮಯ್ಯ, ಬಹಿರಂಗ ಸಮರ್ಥನೆ..

Krishna Mani by Krishna Mani
June 21, 2024
in Top Story, ರಾಜಕೀಯ, ವಿಶೇಷ, ಶೋಧ, ಸಿನಿಮಾ
0
Share on WhatsAppShare on FacebookShare on Telegram

ಮದ್ದೂರು ಕಾಂಗ್ರೆಸ್ ಶಾಸಕ ಉದಯ್ ಗೌಡ ನಟ ದರ್ಶನ್ ಕೃತ್ಯದ ಸಮರ್ಥನೆಗೆ ಮುಂದಾಗಿದ್ದಾರೆ. ದರ್ಶನ್​ಗೆ ಸ್ವಲ್ಪ ‌ಮುಂಗೋಪ, ಸಿಟ್ಟು ಜಾಸ್ತಿ. ಆದ್ರೆ ಕೊಲೆ ಮಾಡುವವನಲ್ಲ ದರ್ಶನ್ ಎಂದು ಷರಾ ಬರೆದಿದ್ದಾರೆ. ಆತ ಅಭಿಮಾನಿಗಳ ಬಳಿ ಮಾಧ್ಯಮದವರ ಬಳಿ ಸ್ವಲ್ಪ ಮುಂಗೋಪದಿಂದ ಮಾತಾಡ್ತಾನೆ ಅಷ್ಟೇ. ಸದ್ಯಕ್ಕೆ ಪೋಲೀಸ್ ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ಮೇಲೆ‌ ಮಾತಾಡೋಣ ಎಂದಿದ್ದಾರೆ ಶಾಸಕ ಉದಯ್ ಗೌಡ.

ADVERTISEMENT

ದರ್ಶನ್ ತುಂಬಾ ಸಿಡುಕು, ಸಿಟ್ಟು ಸ್ವಭಾವದವರು. ನನಗೆ ಹಲವು ವರ್ಷಗಳಿಂದ ದರ್ಶನ್ ಸ್ನೇಹಿತ. ಆದರೆ ಈ ರೀತಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಅವರ ಜೊತೆಗಿರುವವರು ಮಾಡಿದ್ರಾ..? ಇವರ ಮೇಲೆ ಏನಾದ್ರೂ‌ ಹಾಕಿದ್ರಾ;;? ಗೊತ್ತಿಲ್ಲ. ತನಿಖೆಯಿಂದ ಎಲ್ಲವೂ ಹೊರಗೆ ಬರಬೇಕು. ನಾನು ಈಗಲೇ ಏನನ್ನೂ‌ ಹೇಳೋಕೆ ಆಗಲ್ಲ. ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ತನಿಖೆ ಆಗಲಿ ಸತ್ಯ ಹೊರಗೆ ಬರಲಿ ಎಂದಿದ್ದಾರೆ. ಇನ್ನೇನು‌ ಕೆಲವೇ ದಿನಗಳಲ್ಲಿ ಏನು ಎತ್ತ ಹೊರಬರುತ್ತೆ. ರಾಜ್ಯದ ಜನರಿಗೂ‌ ಗೊತ್ತಾಗುತ್ತದೆ. ನಾವ್ಯಾರೂ ದರ್ಶನ್ ರಕ್ಷಣೆ ಮಾಡುವಂತೆ ಸಿಎಂ ಬಳಿ ಹೋಗಿಲ್ಲ. ಈ ಪ್ರಕರಣ ನಡೆದು 15 ದಿನ ಆಗಿದೆ. ಒಂದು ವೇಳೆ ಆ ರೀತಿ ಮಾಡಿದ್ರೆ ಹೀಗೆ ನಡೆಯುತ್ತಿರಲಿಲ್ಲ ಎಂದಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರದ ವೇಳೆ ತನ್ನ ಗನ್ ಮ್ಯಾನ್ ಮೇಲೆ ದರ್ಶನ್ ಬೆಂಬಲಿಗರ ಹಲ್ಲೆ ಮಾಡಿರುವ ವಿಚಾರದ ಬಗ್ಗೆ ಮಾತನಾಡಿ, ನನ್ನ ಗನ್ ಮ್ಯಾನ್‌ ಮೇಲೆ ಹಲ್ಲೆ ಅನ್ನೋದು ಗೊತ್ತಿಲ್ಲ. ಅದೆಲ್ಲವೂ ಸುಳ್ಳು. ನನಗೆ ಐದಾರು ಮಂದಿ ಗನ್ ಮ್ಯಾನ್ ಇದ್ದಾರೆ. ಹಲ್ಲೆ ಮಾಡಿದ್ದರೆ ನನಗೆ ಗೊತ್ತಾಗುತ್ತಿರಲಿಲ್ವೇ? ಎಂದಿದ್ದಾರೆ. ಅಂತಾದ್ದೂ ಯಾವುದೂ ಆಗಿಲ್ಲ. ಅದೆಲ್ಲವೂ‌ ಸುಳ್ಳು ಸೃಷ್ಟಿ ಅಷ್ಟೇ ಎಂದು ದರ್ಶನ್​ ಪರವಾಗಿ ಮಾತನಾಡಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರಕ್ಕೆ ದರ್ಶನ್​ ಬಂದಿದ್ದ ವೇಳೆ ದರ್ಶನ್​ ಬೆಂಬಲಿಗರನ್ನು ತಡೆದಿದ್ದರು ಅನ್ನೋ ಕಾರಣಕ್ಕೆ ಗನ್​ ಮ್ಯಾನ್​ ಮೇಲೆ ಹಲ್ಲೆ ನಡೆದಿತ್ತು. ಮದ್ದೂರು ಶಾಸಕನ ಮನೆಯಲ್ಲಿಯೇ ಗನ್ ಮ್ಯಾನ್ ಆಗಿದ್ದ ಡಿಎಆರ್ ಪೇದೆ ನಾಗೇಶ್ ಮೇಲೆ ಏಪ್ರಿಲ್ 22 ರಂದು ಹಲ್ಲೆ ನಡೆದಿತ್ತು. ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಗಿದ್ದ ಸ್ಟಾರ್ ಚಂದ್ರು ಪರ ದರ್ಶನ್ ಕ್ಯಾಂಪೇನ್‌ಗೆ ಬಂದಿದ್ದ ವೇಳೆ ದರ್ಶನ್ ಪಟಾಲಂ ಗಲಾಟೆ ನಡೆದಿತ್ತು. ಮುಖಂಡರನ್ನ ಹತ್ತಿರಕ್ಕೆ ಬಿಟ್ಟುಕೊಳ್ಳುವ ವಿಚಾರದಲ್ಲಿ ಜಗಳ ತೆಗೆದಿದ್ದ ಲಕ್ಷ್ಮಣ್, ನಾಗರಾಜು ಹಾಗೂ ಇತರರು ಕದಲೂರು ಉದಯ್ ಮನೆ ಮುಂದೆ ಪೇದೆ ನಾಗೇಶ್‌ ಮೇಲೆ ಹಲ್ಲೆ ಮಾಡಿದ್ದರು.

ಪೊಲೀಸರು ನಮ್ಮನ್ನ ಏನು ಮಾಡಲು ಆಗಲ್ಲ. ನಮ್ಮತ್ರ ಏನು ಕಿತ್ಕೊಳೋಕೆ ಆಗಲ್ಲ ಎಂದು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ ಬಗ್ಗೆ ಕೆಸ್ತೂರು ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ರು ನಾಗೇಶ್. ಮದ್ದೂರಿನ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ನಾಗೇಶ್‌ ಬಗ್ಗೆ Medical Legal Case ಕೂಡ ಆಗಿತ್ತು. ಆ ನಂತರ ರಾಜಿ ಸಂಧಾನದ ಮೂಲಕ ನಾಗೇಶರನ್ನ ಕಳುಹಿಸಿದ್ದರು ಶಾಸಕ ಉದಯ್ ಗೌಡ. ಶಾಸಕ ಉದಯ್​ ಗೌಡ ಕೂಡ ಗನ್​ ಮ್ಯಾನ್​ ಬೆಂಬಲಕ್ಕೆ ನಿಲ್ಲಲಿಲ್ಲ ಎನ್ನುವ ಕಾರಣಕ್ಕೆ ಶಾಸಕ ಉದಯ್ ಗನ್‌ ಮ್ಯಾನ್ ಹುದ್ದೆಯಿಂದ ಹೊರಬಂದಿದ್ದರು ಪೇದೆ ನಾಗೇಶ್. ಇದೀಗ ಡಿಎಆರ್ ತುಕಡಿಯಲ್ಲಿ ನಾಗೇಶ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆದರೂ ದರ್ಶನ್‌ ಬಗ್ಗೆ ಕಾಂಗ್ರೆಸ್‌ ಶಾಸಕ ಸಾರ್ವಜನಿಕವಾಗಿ ಸಮರ್ಥನೆಗೆ ಮುಂದಾಗಿದ್ದಾರೆ. ಹಲ್ಲೆ ಕೇಸ್‌ ಬಗ್ಗೆ ಸಚಿವ ಚಲುವರಾಯಸ್ವಾಮಿ ಮಾಗಡಿಯಲ್ಲಿ ಮಾತನಾಡಿ, ಗನ್‌ ಮ್ಯಾನ್‌ ಮೇಲೆ ಹಲ್ಲೆ ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ವಿಚಾರ ತಿಳಿದುಕೊಳ್ತೀನಿ ಎಂದಿದ್ದಾರೆ. ಪೊಲೀಸ್‌ ಮೇಲೆ ಹಲ್ಲೆ ಮಾಡಿರುವ ಪ್ರಕರಣ ಮತ್ತಷ್ಟು ಚುರುಕು ಪಡೆಯುವ ಸಾಧ್ಯತೆಯಿದೆ. ಆದರೆ ಸಿಎಂ ಸಿದ್ದರಾಮಯ್ಯ ಒತ್ತಡ ಹಾಕಿದ್ರೂ ನಾನು ಕೇಳಲ್ಲ ಎಂದ ಬಳಿಕವೂ ಕಾಂಗ್ರೆಸ್‌ ಶಾಸಕರು ದರ್ಶನ್‌ ಬಗ್ಗೆ ಜನರಲ್ಲಿ ಸಾಫ್ಟ್‌ ಕಾರ್ನರ್‌ ಮೂಡಿಸುವ ಪ್ರಯತ್ನ ಆರಂಭಿಸಿದ್ದಾರೆ ಎನ್ನಬಹುದು.

ಕೃಷ್ಣಮಣಿ

Tags: BJPCongress PartyDarshan Arrestmandya dist administrationMandya DistrictPavitragowdaನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಫುಟ್ ಪಾತ್ ಏರಿ ಅಂಗಡಿಗೆ ನುಗ್ಗಿದ ಪಿಕಪ್ ವಾಹನ..!

Next Post

IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತಕ್ಕೆ ದೂರು..!

Related Posts

Top Story

ಡಿಕೆಶಿಗೆ ಧನ್ಯವಾದ ಸಲ್ಲಿಸಿದ ಮುಳುಗಡೆ ಸಂತ್ರಸ್ತರ ರೈತ..!

by ಪ್ರತಿಧ್ವನಿ
September 4, 2025
0

https://youtu.be/7sJfAbaHets

Read moreDetails
ಜಿ.ಎಸ್.ಟಿ ಸರಳೀಕರಣ – ಯಾವೆಲ್ಲಾ ವಸ್ತುಗಳು ಅಗ್ಗ- ಯಾವುದೆಲ್ಲ ದುಬಾರಿ ..?! 

ಜಿ.ಎಸ್.ಟಿ ಸರಳೀಕರಣ – ಯಾವೆಲ್ಲಾ ವಸ್ತುಗಳು ಅಗ್ಗ- ಯಾವುದೆಲ್ಲ ದುಬಾರಿ ..?! 

September 4, 2025
ಜಿ.ಎಸ್.ಟಿ ಸ್ಲ್ಯಾಬ್ ನಲ್ಲಿ ಮಹತ್ತರ ಬದಲಾವಣೆ – ದೇಶದ ಜನರಿಗೆ ಮೋದಿ ಭರ್ಜರಿ ಗಿಫ್ಟ್ 

ಜಿ.ಎಸ್.ಟಿ ಸ್ಲ್ಯಾಬ್ ನಲ್ಲಿ ಮಹತ್ತರ ಬದಲಾವಣೆ – ದೇಶದ ಜನರಿಗೆ ಮೋದಿ ಭರ್ಜರಿ ಗಿಫ್ಟ್ 

September 4, 2025
ಬೃಹನ್ನಗರ ಕಲ್ಪನೆ–ಸಮಸ್ಯೆಗಳ ವಿರಾಟ್‌ ರೂಪ

ಬೃಹನ್ನಗರ ಕಲ್ಪನೆ–ಸಮಸ್ಯೆಗಳ ವಿರಾಟ್‌ ರೂಪ

September 4, 2025
ಶ್ರೀದುರ್ಗಾ ಪರಮೇಶ್ವರಿ ಸನ್ನಿಧಾನದಲ್ಲಿ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ “ಕೊನಾರ್ಕ್” ಚಿತ್ರಕ್ಕೆ ಚಾಲನೆ .

ಶ್ರೀದುರ್ಗಾ ಪರಮೇಶ್ವರಿ ಸನ್ನಿಧಾನದಲ್ಲಿ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ “ಕೊನಾರ್ಕ್” ಚಿತ್ರಕ್ಕೆ ಚಾಲನೆ .

September 3, 2025
Next Post
IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತಕ್ಕೆ ದೂರು..!

IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಲೋಕಾಯುಕ್ತಕ್ಕೆ ದೂರು..!

Recent News

Top Story

ಡಿಕೆಶಿಗೆ ಧನ್ಯವಾದ ಸಲ್ಲಿಸಿದ ಮುಳುಗಡೆ ಸಂತ್ರಸ್ತರ ರೈತ..!

by ಪ್ರತಿಧ್ವನಿ
September 4, 2025
ಜಿ.ಎಸ್.ಟಿ ಸರಳೀಕರಣ – ಯಾವೆಲ್ಲಾ ವಸ್ತುಗಳು ಅಗ್ಗ- ಯಾವುದೆಲ್ಲ ದುಬಾರಿ ..?! 
Top Story

ಜಿ.ಎಸ್.ಟಿ ಸರಳೀಕರಣ – ಯಾವೆಲ್ಲಾ ವಸ್ತುಗಳು ಅಗ್ಗ- ಯಾವುದೆಲ್ಲ ದುಬಾರಿ ..?! 

by Chetan
September 4, 2025
ಜಿ.ಎಸ್.ಟಿ ಸ್ಲ್ಯಾಬ್ ನಲ್ಲಿ ಮಹತ್ತರ ಬದಲಾವಣೆ – ದೇಶದ ಜನರಿಗೆ ಮೋದಿ ಭರ್ಜರಿ ಗಿಫ್ಟ್ 
Top Story

ಜಿ.ಎಸ್.ಟಿ ಸ್ಲ್ಯಾಬ್ ನಲ್ಲಿ ಮಹತ್ತರ ಬದಲಾವಣೆ – ದೇಶದ ಜನರಿಗೆ ಮೋದಿ ಭರ್ಜರಿ ಗಿಫ್ಟ್ 

by Chetan
September 4, 2025
ಬೃಹನ್ನಗರ ಕಲ್ಪನೆ–ಸಮಸ್ಯೆಗಳ ವಿರಾಟ್‌ ರೂಪ
Top Story

ಬೃಹನ್ನಗರ ಕಲ್ಪನೆ–ಸಮಸ್ಯೆಗಳ ವಿರಾಟ್‌ ರೂಪ

by ನಾ ದಿವಾಕರ
September 4, 2025
ಶ್ರೀದುರ್ಗಾ ಪರಮೇಶ್ವರಿ ಸನ್ನಿಧಾನದಲ್ಲಿ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ “ಕೊನಾರ್ಕ್” ಚಿತ್ರಕ್ಕೆ ಚಾಲನೆ .
Top Story

ಶ್ರೀದುರ್ಗಾ ಪರಮೇಶ್ವರಿ ಸನ್ನಿಧಾನದಲ್ಲಿ ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ “ಕೊನಾರ್ಕ್” ಚಿತ್ರಕ್ಕೆ ಚಾಲನೆ .

by ಪ್ರತಿಧ್ವನಿ
September 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಡಿಕೆಶಿಗೆ ಧನ್ಯವಾದ ಸಲ್ಲಿಸಿದ ಮುಳುಗಡೆ ಸಂತ್ರಸ್ತರ ರೈತ..!

September 4, 2025
ಜಿ.ಎಸ್.ಟಿ ಸರಳೀಕರಣ – ಯಾವೆಲ್ಲಾ ವಸ್ತುಗಳು ಅಗ್ಗ- ಯಾವುದೆಲ್ಲ ದುಬಾರಿ ..?! 

ಜಿ.ಎಸ್.ಟಿ ಸರಳೀಕರಣ – ಯಾವೆಲ್ಲಾ ವಸ್ತುಗಳು ಅಗ್ಗ- ಯಾವುದೆಲ್ಲ ದುಬಾರಿ ..?! 

September 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!