ಭಾನುವಾರ ಹೊಸಪೇಟೆಯಲ್ಲಿ ದರ್ಶನ್‌ಗೆ ಆದ ಅನುಮಾನ ಎಲ್ಲರನ್ನೂ ವಿಚಲಿತರನ್ನಾಗಿ ಮಾಡಿದೆ. ‘ಕ್ರಾಂತಿ’ ಚಿತ್ರದ ಎರಡನೇ ಹಾಡು ಬಿಡುಗಡೆ ವೇದಿಕೆಯಲ್ಲಿ ಕಿಡಿಗೇಡಿಯೊಬ್ಬ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದ ವಿಡಿಯೋ ಕ್ಷಣ ಮಾತ್ರದಲ್ಲಿ ವೈರಲ್ ಆಗಿತ್ತು. ಸ್ಯಾಂಡಲ್‌ವುಡ್ ಗಣ್ಯರು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದರು. ಸುದೀಪ್ ಕೂಡಾ ಹೊಸಪೇಟೆ ಘಟನೆ ಬಗ್ಗೆ ಸುದೀರ್ಘ ಟ್ವೀಟ್ ಮಾಡಿದ್ದರು.
ಇದೀಗ ದರ್ಶನ್, ಕಿಚ್ಚನ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುದೀಪ್ ಗೆ ಟ್ಯಾಗ್ ಮಾಡಿ, ಕಿಚ್ಚ ಸುದೀಪ್ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಸುದೀಪ್ ಅವರ ಹೆಸರು ಹೇಳಿರುವ ದರ್ಶನ್ ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು” ಎಂದು ಸ್ಮೈಲ್ ಎಮೋಜಿಯೊಂದಿಗೆ ಬರೆದುಕೊಂಡಿದ್ದಾರೆ. ಈ ಟ್ವೀಟ್‌ಗೆ ರಾಕೆಟ್ ವೇಗದಲ್ಲಿ ಲೈಕ್ಸ್, ಕಮೆಂಟ್ಸ್ ಬರುತ್ತಿದ್ದು . ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಸಂತೋಷದಿಂದ ಕಮೆಂಟ್ ಮಾಡುತ್ತಿದ್ದಾರೆ. ಅಂದು ಸುದೀಪ್ ಟ್ವೀಟ್, ಇಂದು ದರ್ಶನ್ ಟ್ವೀಟ್ ನೋಡಿ ಬಹಳ ಖುಷಿಯಾಗುತ್ತಿದೆ. ಈ ಟ್ವೀಟ್ ನಿಜವಾ ಇಲ್ಲವಾ ಫೇಕ್ ಇರಬಹುದಾ ಎಂಬುದನ್ನು ಕನ್ಫರ್ಮ್ ಮಾಡಿಕೊಳ್ಳಲು ಬಹಳ ಸಮಯ ಬೇಕಾಯ್ತು ಎಂದು ಕೆಲವರು ಕಮೆಂಟ್ ಮಾಡಿದರೆ, ಕೆಲವರು ಇದು ಹೀಗೆ ಮುಂದುವರೆಯಲಿ, ನಿಮ್ಮ ಗೆಳೆತನ ಮತ್ತೆ ಮೊದಲಿನಂತೆ ಆಗಲಿ ಎಂದು ಹಾರೈಸುತ್ತಿದ್ದಾರೆ