ನಟ ದರ್ಶನ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 47ನೇ ಹುಟ್ಟುಹಬ್ಬವನ್ನು ಡಿ ಬಾಸ್ ಆಚರಿಸಿಕೊಳ್ಳುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮುಂದೆ ಸಾವಿರಾರು ಜನರು ಜಮಾಯಿಸಿದ್ದು, ಪ್ರೀತಿಯ ನಟನಿಗೆ ಶುಭಾಷಯ ಕೋರುತ್ತಿದ್ದಾರೆ . ದಾಸನ ಹುಟ್ಟುಹಬ್ಬದ ವಿಶೇಷ ದಿನದಂದು ಚಿತ್ರತಂಡ ಡೆವಿಲ್ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಿದೆ. ಕಾಟೇರ ಸಿನಿಮಾ ಸಕ್ಸಸ್ ಪ್ರದರ್ಶನದ ಬಳಿಕ ದರ್ಶನ್ ಡೆವಿಲ್ ಸಿನಿಮಾಸದಲ್ಲಿ ನಟಿಸುತ್ತಿದ್ದಾರೆ. ಡೆವಿಲ್ನಲ್ಲಿ ದಾಸ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಫೋಟೋ ತೆಗೆಯಲು ಅದಕೆ ಬಲು ಕೋಪ ಬರುವುದು’ ಎಂದು ಹೇಳುತ್ತಾ ಸಿಗರೇಟ್ ಸೇದುವ ಲುಕ್ ಅನ್ನು ಬಿಡುಗಡೆ ಮಾಡಿದ್ದಾರೆ. ಸದ್ಯ ಯ್ಯೂಟೂಬ್ನಲ್ಲಿ ದರ್ಶನ್ ನ್ಯೂ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನು ಡೆವಿಲ್ ಸಿನಿಮಾ ಪ್ರಕಾಶ್ ವೀರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಇದಕ್ಕಿದೆ. ಜೆ ಜಯಮ್ಮ ಡೆವಿಲ್ ಸಿನಿಮಾಗೆ ಬಂಡವಾಳ ಹಾಕಿದ್ದು, ಶ್ರೀ ಜೈ ಮಾತಾ ಕಂಬೈನ್ಸ್ನಡಿ ಸಿನಿಮಾ ಮೂಡಿಬರುತ್ತಿದೆ.
ತರುಣ್ ಜೊತೆ D 59..
![](https://pratidhvani.com/wp-content/uploads/2024/02/WhatsApp-Image-2024-02-16-at-10.58.54-AM-1024x683.webp)
ತರುಣ್ ಸುಧೀರ್ ಡಿ ಬಾಸ್ ಜೊತೆಗೆ ಮತ್ತೆ ಕೈ ಜೋಡಿಸಿದ್ದಾರೆ. ದರ್ಶನ್ 59ನೇ ಸಿನಿಮಾ ಮಾಡಲು ಹೊರಟಿದ್ದಾರೆ. ಅಂದಹಾಗೆಯೇ ತರುಣ್ ನಿರ್ದೇಶನಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾದ ಹೆಸರು ‘ವೀರ ಸಿಂಧೂರ ಲಕ್ಷ್ಮಣ’ ಎಂದಾಗಿದ್ದು, ದಾಸನ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾವನ್ನು ತರುಣ್ ಸುಧೀರ್ ಘೋಷಿಸಿದ್ದಾರೆ. ವೀರ ಸಿಂಧೂರ ಲಕ್ಷ್ಮಣ ಐತಿಹಾಸಿಕ ಸಿನಿಮಾವಾಗಿದ್ದು, ಕಾಟೇರ ಬಳಿಕ ಈ ಜೋಡಿಯಾದ ಒಂದಾಗಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಬ್ರಿಟಿಷ್ ವಿರುದ್ಧ ಕ್ರಾಂತಿಕಾರಿ ಗುಡುಗಿದ್ದ ವೀರ ಸಿಂಧೂರ ಲಕ್ಷ್ಮಣನ ಬಯೋಪಿಕ್ ಆಗಿದೆ.ಮತ್ತೊಂದೆಡೆ KVN ಪ್ರೊಡಕ್ಷನ್ D 58 ಸಿನಿಮಾಗೆ ಬಂಡವಾಳ ಹೂಡುತ್ತಿದ್ದು , ನಟ ಪ್ರೇಮ್ ನಿರ್ದೇಶನ ಮಾಡ್ತಿದ್ದಾರೆ. ಆ ಚಿತ್ರದ ಅಪ್ಡೇಟ್ ಕೂಡ ಸದ್ಯದಲ್ಲೇ ಅನಾವರಣಗೊಳ್ಳಲಿದೆ.
![](https://pratidhvani.com/wp-content/uploads/2024/02/Challenging-Star-Darshan-2-780x470-1-jpg.webp)
ರಾಜ್ಕೋಟ್ ಟೆಸ್ಟ್ನಲ್ಲಿ ಭಾರತಕ್ಕೆ ಇಂಗ್ಲೆಂಡ್ ಪ್ರತ್ಯುತ್ತರ ನೀಡುತ್ತಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ 445ಕ್ಕೆ ಆಲೌಟ್ ಆಗಿದೆ. ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ 2ನೇ ದಿನದಾಂತ್ಯಕ್ಕೆ 207ಕ್ಕೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದೆ. ಇದೆಲ್ಲದರ ಮಧ್ಯೆ ಟೀಂ ಇಂಡಿಯಾ ಸ್ಪಿನ್ನರ್ ಇತಿಹಾಸ ಪುಟ ಸೇರುವಂತಹ ರೆಕಾರ್ಡ್ ಮಾಡಿದ್ದಾರೆ. ಟೀಂ ಇಂಡಿಯಾ ಆಟಗಾರ ಆರ್. ಅಶ್ವಿನ್ ಅವರು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅಶ್ವಿನ್ ಅವರು 500ನೇ ವಿಕೆಟ್ ಕಬಳಿಸೋ ಮೂಲಕ ಸಂಭ್ರಮ ಆಚರಿಸಿದ್ದಾರೆ. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ರೆಕಾರ್ಡ್ ಕನ್ನಡಿಗ ಅನಿಲ್ ಕುಂಬ್ಳೆ ಅವರ ಹೆಸರಲ್ಲಿದೆ. ಅದಾದ ಬಳಿಕ ಆರ್.ಅಶ್ವಿನ್ ಅವರು 500 ವಿಕೆಟ್ ಪಡೆಯೋ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ನಲ್ಲಿ 619 ವಿಕೆಟ್ ಗಳಿಸಿದ್ದಾರೆ. ಇದಾದ ಬಳಿಕ 500 ವಿಕೆಟ್ ಪಡೆದ ಮತ್ತೊಬ್ಬ ಅಂತಾರಾಷ್ಟ್ರೀಯ ಆಟಗಾರ ಆರ್.ಅಶ್ವಿನ್ ಅವರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳಲ್ಲಿ ಆರ್.ಅಶ್ವಿನ್ 9ನೇ ಸ್ಥಾನದಲ್ಲಿದ್ದಾರೆ.
![](https://pratidhvani.com/wp-content/uploads/2024/02/images-2.jpeg)