ಬೆಂಗಳೂರು: ಸೈಬರ್ ವಂಚನೆಗೆ ಒಳಗಾಗಿದ್ದ ಕಂಪನಿಗೆ ಗೋಲ್ಡನ್ ಅವರ್ ಅಂದ್ರೆ 1 ಗಂಟೆಯೊಳಗೆ ಸಿಸಿಬಿ ಸೈಬರ್ ಪೊಲೀಸರು ಹಣ ವಾಪಸ್ ಮಾಡಿಸಿದ್ದಾರೆ.
ಕಳೆದ ನವೆಂಬರ್ ನಲ್ಲಿ ನಕಲಿ ಇಮೇಲ್ ನಿಂದ ಡಾ.ರೆಡ್ಡೀಸ್ ಲ್ಯಾಬೋರೇಟರಿಗೆ ಗ್ರೂಪ್ ಫಾರ್ಮ್ ಕಂಪನಿಯ ಅಕೌಂಟೆಂಟ್ ಹೆಸರಲ್ಲಿ ನಕಲಿ ಇಮೇಲ್ ಬಂದಿತ್ತು. ಗ್ರೂಪ್ ಫಾರ್ಮ್ ಮತ್ತು ರೆಡ್ಡೀಸ್ ಲ್ಯಾಬೋರೇಟರಿ ಪಾರ್ಟನರ್ ಆಗಿರೋದ್ರಿಂದ ಇಮೇಲ್ ನಂಬಿದ ಸಿಬ್ಬಂದಿ ಬ್ಯುಸಿನೆಸ್ ಸಲುವಾಗಿ ಮನವಿಯಂತೆ ಗುಜರಾತ್ ಮೂಲದ ಮಹಿಳೆ ಪಟೇಲ್ ದಕ್ಷ್ಯಾ ಬೆನ್ ಹೆಸರಿನಲ್ಲಿದ್ದ ನಕಲಿ ಖಾತೆಗೆ 2.16 ಕೋಟಿ ಪೇಮೆಂಟ್ ಆಗಿತ್ತು. ಆದರೆ
ಕೆಲವೇ ಕ್ಷಣಗಳಲ್ಲಿ ಇದು ಫ್ರಾಡ್ ಎಂದು ತಿಳಿದು ಪೊಲೀಸರಿಗೆ ದೂರು ನೀಡಲಾಗಿತ್ತು.
ಗ್ರೂಪ್ ಫಾರ್ಮ್ ಕಂಪನಿ ದೂರು ಸ್ವೀಕರಿಸಿದ ಸಿಸಿಬಿ ಸೈಬರ್ ಪೊಲೀಸರು ತಕ್ಷಣ ಹಣ ವರ್ಗಾವಣೆಯಾಗಿದ್ದ ಅಕೌಂಟ್ ಫ್ರೀಜ್ ಮಾಡಿದ್ದರು. ಬಳಿಕ ಕಾನೂನಾತ್ಮಕವಾಗಿ ಬ್ಯಾಂಕ್ ಖಾತೆಯಿಂದ ಹಣ ವಾಪಸ್ ಮಾಡಿಸಿದ್ದಾರೆ.













