ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ವರದಿ ಮಾಡಿದ ಕೆಲವೇ ಗಂಟೆಗಳಲ್ಲಿ ಭಾರತೀಯ ಸರ್ವರ್‌ಗಳಿಂದ ತಮ್ಮ ವೆಬ್‌ಸೈಟ್ ಮೇಲೆ ಸೈಬರ್ ದಾಳಿ ನಡೆದಿದೆ ಎಂದು ದಕ್ಷಿಣ ಆಫ್ರಿಕಾದ ʼಡೈಲಿ ಮೇವೆರಿಕ್’ ಎಂಬ ಸುದ್ದಿ ಮಾಧ್ಯಮ ಹೇಳಿದೆ.
ಬ್ರಿಕ್ಸ್ ಸಮ್ಮೇಳನಕ್ಕೆ ದಕ್ಷಿಣಾ ಆಫ್ರಿಕಾ ತೆರಳಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ದಕ್ಷಿಣ ಆಫ್ರಿಕಾ ಸರ್ಕಾರ ಕ್ಯಾಬಿನೆಟ್ ಸಚಿವನನ್ನು ಕಳುಹಿಸಿದ್ದು ಪ್ರಧಾನಿ ಮೋದಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿ, ಅವರು ತಮ್ಮ ವಿಮಾದಿಂದ ಇಳಿಯಲು ನಿರಾಕರಿಸಿದ್ದಾರೆ ಎಂದು ಡೈಲಿ ಮೇವರಿಕ್ ವರದಿ ಮಾಡಿತ್ತು.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ವಿಮಾನದಿಂದ ಇಳಿಯಲು ನಿರಾಕರಿಸಿದ ವರದಿಯನ್ನು ಪ್ರಕಟಿಸಿದ ಬಳಿಕ, ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಸೈಬರ್ ದಾಳಿ ನಮ್ಮ ವೆಬ್‌ಸೈಟ್ ಮೇಲೆ ನಡೆದಿದೆ ಡೈಲಿ ಮೇವರಿಕ್ ವರದಿ ಮಾಡಿದೆ.
“ಬ್ರಿಕ್ಸ್ ಸಮ್ಮೇಳನಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆಗಮಿಸಿದಾಗ ಅವರನ್ನು ಅಧಿಕೃತವಾಗಿ ಸ್ವಾಗತಿಸಲು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರೇ ಖುದ್ದು ಹಾಜರಿದ್ದರು. ಆದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದಾಗ ಅವರನ್ನು ಸ್ವಾಗತಿಸಲು ಕೇವಲ ಮಂತ್ರಿಯೊಬ್ಬರನ್ನು ಮಾತ್ರ ಕಳುಹಿಸಿತ್ತು. ಇದರಿಂದ ಅಸಮಾಧಾನಗೊಂಡ ಪ್ರಧಾನಿ ಮೋದಿ ಅವರು ತಮ್ಮ ವಿಮಾನದಿಂದ ಇಳಿಯಲು ನಿರಾಕರಿಸಿದ್ದಾರೆ. ಕೊನೆಗೆ ಉಪಾಧ್ಯಕ್ಷ ಪಾಲ್ ಮಶಾಟೈಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಂದಿದ್ದಾರೆ” ಎಂದು ಡೈಲಿ ಮೇವರಿಕ್ ವರದಿಯಲ್ಲಿ ಹೇಳಿತ್ತು.
ಈ ಲೇಖನವನ್ನು ಪ್ರಕಟಿಸಿದ ಬಳಿಕ ತಮ್ಮ ವೆಬ್‌ಸೈಟ್ ಮೇಲೆ ಭಾರತೀಯ ಸರ್ವರ್‌ಗಳಿಂದ ದಾಳಿಯಾಗಿದೆ. ಇದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಭಾರತದಲ್ಲಿ ನಮ್ಮ ವೆಬ್‌ಸೈಟ್ ಈಗ ಕಾರ್ಯನಿರ್ವಹಿಸುತ್ತಿಲ್ಲ. ಹಾಗಾಗಿ, ಇದನ್ನು ಸರಿಪಡಿಸಲು ಮತ್ತು ಭಾರತೀಯ ಓದುಗರಿಗೆ ಲೇಖನ ತಲುಪಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಡೈಲಿ ಮೇವರಿಕ್ ಮೂಲಗಳು ಹೇಳಿವೆ.