ಚುನಾವಣೆ ಮುಗೀತು.. ಇದೀಗ ಆಳುವ ಸರ್ಕಾರದ ಕಡೆಯಿಂದ ಕೆಲಸ ಮಾಡಿಸಿಕೊಳ್ಳೋದನ್ನು ನೋಡಬೇಕು. ಇದೀಗ ಕಾಂಗ್ರೆಸ್ ಸರ್ಕಾರ 200 ಯೂನಿಟ್ ವಿದ್ಯುತ್ ಫ್ರೀ ಕೊಡುವ ಬಗ್ಗೆ ಘೋಷಣೆ ಮಾಡಿತ್ತು. ಇದೀಗ ಜೂನ್ 18ರಿಂದ ಅರ್ಜಿ ಸ್ವೀಕಾರ ಮಾಡಲಾಗ್ತಿದೆ. ವಿರೋಧ ಪಕ್ಷಗಳು ಸುಖಾಸುಮ್ಮನೆ ಸರ್ವರ್ ಡೌನ್ ಅನ್ನೋ ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಇಂಧನ ಇಲಾಖೆ ಸೇವಾ ಸಿಂಧು ಪೋರ್ಟಲ್ನಲ್ಲಿ ಅತ್ಯಂತ ಸುಲಭವಾಗಿ ಸಾಮಾನ್ಯ ಜನರೂ ಕೂಡ ಅರ್ಜಿಯನ್ನು ಯಾವೇ ಹಾಕಿಕೊಳ್ಳುವ ರೀ5ತಿಯಲ್ಲಿ ಡಿಸೈನ್ ಮಾಡಿಸಿದ್ದಾರೆ ಎನ್ನುವುದು ಮಾತ್ರ ಸತ್ಯ. ತನ್ನಲ್ಲಿರುವ ಮೊಬೈಲ್ನಲ್ಲಿ 5 ನಿಮಿಷಕ್ಕೆ ತಾನೇ ಅರ್ಜಿ ಹಾಕಿಕೊಳ್ಳಬಹುದು. ಯಾರ ಬಳಿಗೂ ಹೋಗುವಂತಿಲ್ಲ. ಕ್ಯೂ ನಿಲ್ಲುವ ಅವಶ್ಯಕತೆ ಮೊದಲೇ ಇಲ್ಲ.
ಇಂಧನ ಇಲಾಖೆಗೆ ಅರ್ಜಿ ಹಾಕಲು ಸರಳ ಉಪಾಯ..!
ಮಾತನ್ನೇ ಇತಿಮಿತಿಯಲ್ಲಿ ಆಡುವ ಇಂಧನ ಸಚಿವ ಕೆ.ಜೆ ಜಾರ್ಜ್, ಅರ್ಜಿ ನಮೂನೆಯಲ್ಲೂ ಭಾರೀ ಇತಿಮಿತಿ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ಜನರನ್ನು ಮನಸ್ಸಲ್ಲಿ ಇಟ್ಟುಕೊಂಡು ಕೇವಲ ಕರೆಂಟ್ ಬಿಲ್ನಲ್ಲಿ ಬರುವ ಅಕೌಂಟ್ ನಂಬರ್ ಅಥವಾ ಅಕೌಂಟ್ ಐಡಿ, ಆಧಾರ್ ನಂಬರ್, ಮೊಬೈಲ್ ನಂಬರ್ ಅಷ್ಟೇ ಮಾಹಿತಿ ಕೇಳಿದ್ದಾರೆ. ಕರೆಂಟ್ ಬಿಲ್ನಲ್ಲಿರುವ ಅಕೌಂಟ್ ಐಡಿ ಹಾಕುತ್ತಿದ್ದ ಹಾಗೆ ತನ್ನಷ್ಟಕ್ಕೆ ತಾನೇ ಹೆಸರು ಮತ್ತು ವಿಖಾಸವನ್ನು ತೆಗೆದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಇನ್ನೂ ಮಾಲೀಕ ಅಥವಾ ಬಾಡಿಗೆದಾರ ಎನ್ನುವ ಆಯ್ಕೆ ನೀಡಲಾಗಿದ್ದು, ಸದ್ಯಕ್ಕೆ ಯಾವುದೇ ದಾಖಲೆ ಕೊಡುವಂತಿಲ್ಲ. ಆಧಾರ್ ಕಾರ್ಡ್ ನಂಬರ್ ಹಾಕುತ್ತಿದ್ದ ಹಾಗೆ ಹೆಸರನ್ನು ಅದೇ ಐಡೆಂಟಿಫೈ ಮಾಡುತ್ತದೆ. ಇನ್ನು ಒಟಿಪಿ ಹಾಕಿ ಸಬ್ಮಿಟ್ ಮಾಡಿದರೆ ಅರ್ಜಿ ಹಾಕುವ ಉಸಾಬರಿ ಮುಗೀತು. ಆದರೂ ಕೆಲವರು ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜನಸಾಮಾನ್ಯರಿಗೆ ರಾಜಕಾರಣ ಅಗತ್ಯವಿಲ್ಲ. ಜನರಿಗೆ ಆಗುವ ಲಾಭದ ಕಡೆಗೆ ಮಾತ್ರ ನೋಡೋಣ..
ಸೇವಾಸಿಂಧು ಪೋರ್ಟಲ್ನಲ್ಲಿ ಈ ಲಿಂಕ್ ಕ್ಲಿಕ್ ಮಾಡಿ..
ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ಹಾಕುವುದಕ್ಕೆ ವ್ಯವಸ್ಥೆ ಆಗಿದೆ. https://sevasindhugs.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಕರ್ನಾಟಕ ಸರ್ಕಾರ ಖಾತರಿ ಯೋಜನೆಗಳು ಎನ್ನುವ ಪೇಜ್ ಓಪನ್ ಆಗುತ್ತದೆ. ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳ ಪೈಕಿ ಅನ್ನಭಾಗ್ಯ ಹೊರತುಪಡಿಸಿ, ಉಳಿದ ನಾಲ್ಕು ಯೋಜನೆಗಳು ಕಾಣಿಸುತ್ತವೆ. ಅದರಲ್ಲಿ ಗೃಹ ಜ್ಯೋತಿ ಯೋಜನೆ ಮೇಲೆ ಕ್ಲಿಕ್ ಮಾಡಿ. ಗೃಹಜ್ಯೋತಿ ಲೇಬಲ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಅದರಲ್ಲಿ ಮೊದಲಿಗೆ ನಿಮ್ಮ ವಿದ್ಯುತ್ ಸರಬರಾಜು ಕಂಪನಿಯನ್ನು ಆಯ್ಕೆ ಮಾಡಿ, ವಿದ್ಯುತ್ ಬಿಲ್ನಲ್ಲಿ ಇರುವ ಅಕೌಂಟ್ ಐಡಿ ಎಂಟರ್ ಮಾಡಿ ಕೆಲವು ಸೆಕೆಂಡ್ ವೇಯ್ಟ್ ಮಾಡಿದರೆ, ಆ ಬಳಿಕ ನಿಮ್ಮ ಹೆಸರು ಹಾಗು ವಿಳಾಸವನ್ನು ತೆಗೆದುಕೊಳ್ಳುತ್ತದೆ. ಆ ನಂತರ ಮಾಲೀಕ ಅಥವಾ ಬಾಡಿಗೆದಾರ ಅನ್ನೋದನ್ನು ಆಯ್ಕೆ ಮಾಡಿ, ಆಧಾರ್ ನಂಬರ್, ಫೋನ್ ನಂಬರ್ ಹಾಕಬೇಕು. ನಿಮ್ಮ ಮೊಬೈಲ್ಗೆ ಒಟಿಪಿ ಬರುತ್ತದೆ. ಒಟಿಪಿ ಹಾಕಿ ಸಬ್ಮಿಟ್ ಕೊಟ್ಟರೆ, ಮತ್ತೆ ಪರಿಶೀಲನೆಗೆ ಅವಕಾಶ ಕೊಡಲಾಗಿದೆ. ಕೊನೆಯದಾಗಿ ಸಬ್ಮಿಟ್ ಕೊಟ್ಟರೆ ಅರ್ಜಿ ಸಲ್ಲಿಕೆ ಆಗಿದ್ದಕ್ಕೆ ಪಿಡಿಎಫ್ ಓಪನ್ ಆಗುತ್ತದೆ. ಸೇವ್ ಮಾಡಿಕೊಳ್ಳಬಹುದು.
ಬಾಡಿಗೆದಾರ, ಮಾಲೀಕ ಪತ್ತೆ ಮಾಡೋದು ಹೇಗೆ..?
ಮಾಲೀಕರು ಯಾವುದೇ ಸಮಸ್ಯೆ ಇಲ್ಲದೆ ಅರ್ಜಿ ಹಾಕಬಹುದು. ಆದರೆ ಬಾಡಿಗೆದಾರರು ಅಥವಾ ಲೀಸ್ನಲ್ಲಿ ಇದ್ದವರು ದಾಖಲೆ ಅಗ್ರಿಮೆಂಟ್ ಹಾಕುವುದಕ್ಕೆ ಸೇವಾ ಸಿಂಧು ಪೋರ್ಟಲ್ನಲ್ಲಿ ಅವಕಾಶವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಬಾಡಿಗೆದಾರ ಅಥವಾ ಮಾಲೀಕನ ಬಗ್ಗೆ ಪರಿಶೀಲನೆ ಮಾಡಲು ಮೀಟರ್ ರೀಡರ್ ಮನೆ ಬಳಿಗೆ ಬರುತ್ತಾರೆ. ಅಂದೇ ನೀವು ಕಳೆದ ಒಂದು ವರ್ಷದಲ್ಲಿ ಬಳಕೆ ಮಾಡಿರುವ ಸರಾಸರಿ ವಿದ್ಯುತ್ ಹಾಗು ಇನ್ಮುಂದೆ ನೀವು ಬಳಸಬಹುದಾದ ವಿದ್ಯುತ್ ಪ್ರಮಾಣದ ಬಗ್ಗೆ ಅರಿವು ಮೂಡಿಸುತ್ತಾರೆ. ನೀವು ಕಳೆದೊಂದು ವರ್ಷದಿಂದ ಪ್ರತಿ ತಿಂಗಳು ಸರಾಸರಿ 50 ಯೂನಿಟ್ ವಿದ್ಯುತ್ ಬಳಸುತ್ತಿದ್ದರೆ, ಇನ್ಮುಂದೆ 55 ಯೂನಿಟ್ ಬಳಸುವ ಅವಕಾಶ ಸಿಗಲಿದೆ. ಅಂದರೆ ನಿಮ್ಮ ಅಗತ್ಯಕ್ಕಿಂತ ಶೇಕಡ 10 ರಷ್ಟು ಮಾತ್ರ ವಿದ್ಯುತ್ ಬಳಕೆ ಮಾಡಬಹುದು. ಎಲ್ಲರಿಗೂ 200 ಯೂನಿಟ್ ಎಂದುಬಿಟ್ಟರೆ ಅನಗತ್ಯವಾಗಿ ಇಂಧನ ವೇಸ್ಟ್ ಆಗುವ ಸಾಧ್ಯತೆ ಇರುತ್ತದೆ. 50 ಯೂನಿಟ್ ಬಳಸುವ ಗ್ರಾಹಕ ಉಚಿತ ಅನ್ನೋ ಕಾರಣಕ್ಕೆ 200 ಯೂನಿಟ್ ಬಳಸಿದಾಗ ಇಧನ ಅನಗತ್ಯವಾಗಿ ವ್ಯರ್ಥ ಆಗುತ್ತದೆ ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಬಳಿಕ ಗೃಹಜ್ಯೋತಿಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿದೆ ಎನ್ನಬಹುದು.
ಕೃಷ್ಣಮಣಿ