ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗೆ (Dr G Parameshwar) ಪರಿಷತ್ ಸದಸ್ಯ ಸಿ.ಟಿ ರವಿ (CT Ravi) ಪತ್ರ ಬರೆದಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalakar) ಅವರಿಗೆ ಅವಾಚ್ಯ ಶಬ್ದ ಬಳಸಿದ ಪ್ರಕರಣದಲ್ಲಿ ನಡೆಯುತ್ತಿರುವ ಸಿಐಡಿ (CID) ತನಿಖೆ ವಿರುದ್ಧ ಈ ಪತ್ರದಲ್ಲಿ ಸಿ.ಟಿ ರವಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ತನಿಖೆಗೆ ಸಹಕರಿಸುತ್ತಿಲ್ಲ ಅಂತ ಸಿಐಡಿ ಅಧಿಕಾರಿಗಳು ಕೋರ್ಟ್ ಗೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ.ನಾನು ವಿಚಾರಣೆಗೆ ಹಾಜರಾಗಿದ್ದೆ, ಆದ್ರೆ ವಿಚಾರಣೆಗೆ ಬರುವಂತೆ ನನಗೆ ಟಪಾಲು ಮೂಲಕ ನೊಟೀಸ್ ಕೊಟ್ಟಿಲ್ಲ, ವಾಟ್ಸಪ್‌ನಲ್ಲಿ ನೊಟೀಸ್ ಕೊಟ್ಟಿದ್ರು ಎಂದು ಹೇಳಿದ್ದಾರೆ.
ನನ್ನ ವಿಚಾರದಲ್ಲಿ ಸಿಐಡಿನವ್ರು ಪೂರ್ವಾಗ್ರಹ ಪೀಡಿತರಾಗಿ ವರ್ತನೆ ಮಾಡ್ತಿದ್ದಾರೆ.ಸಿಐಡಿ ತನಿಖೆಯಲ್ಲಿ ಪ್ರಭಾವಿ ಮಂತ್ರಿಗಳ ಹಾಗೂ ನನಗೆ ಹಲ್ಲೆ ಮಾಡಿದವರ, ಜೀವ ಬೆದರಿಕೆ ಹಾಕಿದವರರ ಹಸ್ತಕ್ಷೇಪ ಇದೆ.ಅವರ ಪ್ರಭಾವಕ್ಕೆ ಮಣಿದು ಸಿಐಡಿ ತನಿಖೆ ನಡೀತಿದೆ ಎಂದು ಹೇಳಿದ್ದಾರೆ.
ಸಿಐಡಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ.ಗೃಹ ಸಚಿವರು ಮಧ್ಯಪ್ರವೇಶ ಮಾಡಿ ಸಿಐಡಿ ಅಧಿಕಾರಿಗಳಿಗೆ ಸೂಚನೆ ಕೊಡಬೇಕು.ಜೊತೆಗೆ ತಾವು ಕೊಟ್ಟ ಪೊಲೀಸ್ ದೂರಿನಲ್ಲಿ ಇನ್ನೂ ಎಫ್ಐಆರ್ ದಾಖಲಿಸಿಲ್ಲ, ಕೂಡಲೇ ಎಫ್ಐಆರ್ ದಾಖಲಿಸಿ ತಮ್ಮ ದೂರಿನ ತನಿಖೆ ನಡೆಸುವಂತೆ ಪೋಲೀಸರಿಗೆ ಸೂಚಿಸಬೇಕು ಎಂದು ಈ ಪತ್ರದಲ್ಲಿ ಗೃಹ ಸಚಿವ ಪರಮೇಶ್ವರ್‌ಗೆ ಸಿ ಟಿ ರವಿ ಆಗ್ರಹಿಸಿದ್ದಾರೆ.