ಕಾಂಗ್ರೆಸ್ ಸರ್ಕಾರ (Congress government) ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ (BPL card) ರದ್ದು ಮಾಡಲು ಮುಂದಾಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಸಿ.ಟಿ ರವಿ (CT ravi) ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜ್ಯ ಸರ್ಕಾರ ಈಗ ಬಿಪಿಎಲ್ ಕಾರ್ಡ್ ರದ್ದುಪಡಿಸಿರುವ ಪೈಕಿ ಬಡವರು, ಬಡ ಕುಟುಂಬಗಳು ಇದ್ರೆ, ಆಗ ಮುಖ್ಯಮಂತ್ರಿಗಳೇ ರಾಜೀನಾಮೆ ಕೊಡ್ತೀರಾ ಎಂದು ಸಿಎಂ ಸಿದ್ದರಾಮಯ್ಯನವ್ರನ್ನ ಪ್ರಶ್ನೆ ಮಾಡಿದ್ದಾರೆ.
ಜೀವನಕ್ಕೆ ಯಾವುದೇ ಆಧಾರವಿಲ್ಲದ ವಿಧವೆಯರು,ಕೇವಲ 1 ಗುಂಟೆ ಜಮೀನು ಇಲ್ಲದವರನ್ನೂ ಕೂಡ ಫಲಾನುಭವಿಗಳ ಪಟ್ಟಿಯಿಂದ ರದ್ದು ಮಾಡಿದ್ದೀರ. ಆ ರೀತಿ ರದ್ದುಪಡಿಸಿದ್ರೆ ನೀವು ರಾಜೀನಾಮೆ ಕೊಡ್ತೀರಾ, ನಿಮ್ಮ ಯಾವ ಅಧಿಕಾರಿಯನ್ನ ಡಿಸ್ಮಿಸ್ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಬಿಪಿಎಲ್ ಕಾರ್ಡ್ ರದ್ದತಿ ಕೂಡ ಈಗಾಗಲೇ ರಾಜಕೀಯ ಸ್ವರೂಪ ಪಡೆದಿದ್ದು, ಕೆಲವು ಕಡೆ ಶಾಸಕರು ತಮ್ಮ ತಮ್ಮ ಓಟ್ ಬ್ಯಾಂಕ್ (Vote bank) ಗಾಗಿ ಕಾರ್ಡ್ ಗಳನ್ನು ಉಳಿಸಿಕೊಂಡಿದ್ದಾರೆ ಎಂದು ಸರ್ಕಾರದ ವಿರುದ್ಧ ಸಿ.ಟಿ ರವಿ ಕೆಂಡಾಮಂಡಲರಾಗಿದ್ದಾರೆ.