• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, February 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕ್ರಿಪ್ಟೊಕರೆನ್ಸಿಗಳು “ಚಿಟ್ ಫಂಡ್”ಗಳಿದ್ದಂತೆ: ಹೂಡಿಕೆದಾರರನ್ನು ಎಚ್ಚರಿಸಿದ ರಘುರಾಮ್ ರಾಜನ್

ಪ್ರತಿಧ್ವನಿ by ಪ್ರತಿಧ್ವನಿ
November 25, 2021
in ದೇಶ, ವಿದೇಶ
0
ಕ್ರಿಪ್ಟೊಕರೆನ್ಸಿಗಳು “ಚಿಟ್ ಫಂಡ್”ಗಳಿದ್ದಂತೆ: ಹೂಡಿಕೆದಾರರನ್ನು ಎಚ್ಚರಿಸಿದ ರಘುರಾಮ್ ರಾಜನ್
Share on WhatsAppShare on FacebookShare on Telegram

ಕ್ರಿಪ್ಟೊ ಕರೆನ್ಸಿಗಳು ಚಿಟ್ ಫಂಡ್ ಗಳಂತೆಯೇ ಹೂಡಿಕೆದಾರರಿಗೆ ಸಮಸ್ಯೆ ತಂದೊಡ್ಡುತ್ತವೆ ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ. ಚಿಟ್ ಫಂಡ್ ಗಳು ಜನರಿಂದ ಹಣ ಸಂಗ್ರಹಿಸಿ ದಂಧೆ ನಡೆಸಿ ವಂಚಿಸುವಂತೆಯೇ ಕ್ರಿಪ್ಟೊ ಕರೆನ್ಸಿಗಳೂ ಸಹ. ಚಿಟ್ ಫಂಡ್ ಸಮಸ್ಯೆಯನ್ನೇ ಕ್ರಿಪ್ಟೊ ಕರೆನ್ಸಿ ಖರೀದಿಸಿರುವವರು ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದ್ದಾರೆ.

ADVERTISEMENT

ಕ್ರಿಪ್ಟೊ ಕರೆನ್ಸಿಗಳ ಭವಿಷ್ಯ ಕುರಿತಂತೆ ಮಾತನಾಡಿರುವ ರಘುರಾಮ್ ರಾಜನ್, ಪ್ರಸ್ತುತ ಅಸ್ತಿತ್ವದಲ್ಲಿರುವ ಬಹುತೇಕ ಕ್ರಿಪ್ಟೊ ಕರೆನ್ಸಿಗಳು ನಶಿಸಲಿವೆ ಎಂದೂ ಹೇಳಿದ್ದಾರೆ. ರಘುರಾಮ್ ರಾಜನ್ ಅವರ ಪ್ರಕಾರ, ವಿಶ್ವವ್ಯಾಪಿ ಸುಮಾರು 6,000 ಕ್ರಿಪ್ಟೊ ಕರೆನ್ಸಿಗಳು ಅಸ್ವಿತ್ವದಲ್ಲಿವೆ. ಈ ಪೈಕಿ ಒಂದೆರಡು, ಬಹಳ ಎಂದರೆ ಬೆರಳೆಣಿಕೆಯಷ್ಟು ಕ್ರಿಪ್ಟೊ ಕರೆನ್ಸಿಗಳು ಉಳಿಯಬಹುದು ಎಂದು ರಾಜನ್ ಅಂದಾಜಿಸಿದ್ದಾರೆ.

ಸಿಎನ್ಬಿಸಿ 18 ಸುದ್ದಿವಾಹಿನಿಯೊಂದಿಗೆ ಮಾತನಾಡಿದ ರಘುರಾಮ್ ರಾಜನ್, ವಸ್ತುಗಳ ಮೌಲ್ಯವು ಅದರ ಬೆಲೆಗಿಂತ ಮಿತಿ ಮೀರಿದ್ದರೆ ಅದು ಗಾಳಿಯಲ್ಲಿ ತೆಳುವ ಗುಳ್ಳೆಯಿದ್ದಂತೆ, ಯಾವಾಗಲಾದರೂ ಒಡೆದು ಮಾಯವಾಗಬಹುದು. ಬಹಳಷ್ಟು ಕ್ರಿಪ್ಟೊ ಕರೆನ್ಸಿಗಳ ಮೌಲ್ಯವು ವಾಸ್ತವಿಕ ಬೆಲೆಗಿಂತ ಅದೆಷ್ಟೊ ಪಟ್ಟು ಹೆಚ್ಚಿದೆ. ಮಿತಿ ಮೀರಿದ ಮೌಲ್ಯವಿದ್ದರೂ ಅದನ್ನು ಖರೀದಿಸಲು ಮೂರ್ಖರು ಸಿದ್ದರಿದ್ದಾರೆ ಎಂದೂ ರಾಜನ್ ಹೇಳಿದ್ದಾರೆ.

ಕ್ರಿಪ್ಟೊ ಕರೆನ್ಸಿಗೆ ಮೂಲ ಆಧಾರವಾಗಿರುವ ಬ್ಲಾಕ್ಚೈನ್ ತಂತ್ರಜ್ಞಾನವನ್ನು ಪ್ರವರ್ಧಮಾನಕ್ಕೆ ತರಲು ಕೇಂದ್ರ ಸರ್ಕಾರ ಉತ್ತೇಜನ ನೀಡುವುದು ಅತ್ಯಗತ್ಯ ಎಂದೂ ರಾಜನ್ ಹೇಳಿದ್ದಾರೆ.

ಕ್ರಿಪ್ಟೊ ಕರೆನ್ಸಿ ಮೌಲ್ಯ ಮತ್ತು ಭವಿಷ್ಯ ಕುರಿತಂತೆ ವಿಶ್ವವ್ಯಾಪಿ ಚರ್ಚೆ ಆಗುತ್ತಿರುವ ಹೊತ್ತಿನಲ್ಲಿ ರಘುರಾಮ್ ರಾಜನ್ ಅವರ ಈ ಹೇಳಿಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬಿಡುಗಡೆ ಮಾಡಲುದ್ದೇಶಿಸಿರುವ ಅಧಿಕೃತ ಡಿಜಿಟಲ್ ಕರೆನ್ಸಿಯ ರಚನೆಗೆ ಚೌಕಟ್ಟನ್ನು ಒದಗಿಸುವಾಗ ಮತ್ತು ಖಾಸಗಿ ನಾಣ್ಯಗಳನ್ನು ನಿಯಂತ್ರಿಸುವ, ಕ್ರಿಪ್ಟೋಕರೆನ್ಸಿಗಳಿಗೆ ನಿಯಂತ್ರಣಕ್ಕೆ ನಿಯಮಗಳನ್ನು ರೂಪಿಸುವ ಸಲುವಾಗಿ ಕೇಂದ್ರ ಸರ್ಕಾರವು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ಮಸೂದೆ (2021) ಮಂಡಿಸಲಿದೆ.

ಕ್ರಿಪ್ಟೊ ಕರೆನ್ಸಿಯು ಹಾಲಿ ಆರ್ಥಿಕ ವ್ಯವಸ್ಥೆಯ ಮೇಲೆ ಉಂಟುಮಾಡಬಹುದಾದ ಮತ್ತು ಅಕ್ರಮಗಳಿಗೆ ಬಳಕೆಯಾಗಬಹುದಾದ ಸಾಧ್ಯತೆಗಳ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆರಂಭದಿಂದಲೂ ಕ್ರಿಪ್ಟೊಕರೆನ್ಸಿ ವಹಿವಾಟಿಗೆ ಅನುಮತಿ ನೀಡಲು ನಿರಾಕರಿಸುತ್ತಲೇ ಬಂದಿದೆ. ಆದರೆ, ಅಧಿಕೃತವಾಗಿ ಅದನ್ನು ನಿಷೇಧಿಸುವ ಯಾವುದೇ ಪ್ರಸ್ತಾಪ ಮಾಡಿರಲಿಲ್ಲ.
ಕ್ರಿ
ಪ್ಟೊಕರೆನ್ಸಿಗೆ ಪರ್ಯಾಯವಾಗಿ ಡಿಜಿಟಲ್ ಕರೆನ್ಸಿಯನ್ನು ಅಧಿಕೃತವಾಗಿ ತರುವ ಮತ್ತು ಅದನ್ನು ವಿನಿಮಯ ಮಾಧ್ಯಮವಾಗಿ ಬಳಕೆ ಮಾಡುವ ಸಾಧ್ಯತೆಯನ್ನು ಆರ್ಬಿಐ ಪ್ರಸ್ತಾಪಿಸಿತ್ತು. ಅದರ ಹಿನ್ನೆಲೆಯಲ್ಲೇ ಕೇಂದ್ರ ಸರ್ಕಾರ ಕ್ರಿಪ್ಟೊಕರೆನ್ಸಿ ನಿಷೇಧಿಸಲು ಮತ್ತು ದೇಶೀಯ ಮತ್ತು ನಿಯಂತ್ರಿತ ಡಿಜಿಟಲ್ ಕರೆನ್ಸಿಯನ್ನು ತರಲು ಮಸೂದೆ ರೂಪಿಸಿದೆ. ಚಳಿಗಾಲದ ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ದೊರೆಯುವ ನಿರೀಕ್ಷೆ ಇದೆ.

ಭಾರತದಲ್ಲಿ ಕ್ರಿಪ್ಟೊ ಕರೆನ್ಸಿ ನಿಷೇಧಿಸುವ ಮತ್ತು ಪರ್ಯಾಯ ಡಿಜಿಟಲ್ ಕರೆನ್ಸಿ ತರಲು ಸಂಸತ್ತಿನಲ್ಲಿ ಮಸೂದೆ ಮಂಡಿಸುವ ಸುದ್ದಿ ಪ್ರಕಟವಾದ ನಂತರ ಕಳೆದ ಎರಡು ದಿನ ಸತತ ಕುಸಿತ ದಾಖಲಿಸಿದ್ದ ಕ್ರಿಪ್ಟೊ ಕರೆನ್ಸಿಗಳು ಚೇತರಿಸಿಕೊಂಡಿವೆ. ನವೆಂಬರ್ 25ರ ವಹಿವಾಟಿನಲ್ಲಿ ಬಿಟ್ ಕಾಯಿನ್ ಶೇ.2ರಷ್ಟು, ಇಥಿರಿಯಂ ಶೇ.1ರಷ್ಟು, ಬಿನೆನ್ಸ್ ಕಾಯಿನ್ ಶೇ.4ರಷ್ಟು ಏರಿಕೆ ದಾಖಲಿಸಿವೆ. ಸೊಲೊನಾ, ಕರ್ಡಾನೊ, ಎಕ್ಸ್ಆರ್ಪಿ, ಪೊಲ್ಕಾಡಾಟ್ ಕರೆನ್ಸಿಗಳು ಶೇ.1ರಿಂದ 5ರಷ್ಟು ಕುಸಿದಿವೆ.

Tags: BJPCongress PartyCovid 19ಕ್ರಿಪ್ಟೊಕರೆನ್ಸಿಚಿಟ್ ಫಂಡ್ನರೇಂದ್ರ ಮೋದಿಬಿಜೆಪಿರಘುರಾಮ್ ರಾಜನ್ಹೂಡಿಕೆದಾರ
Previous Post

ನಟ ಚೇತನ್‌ ಈ ದೇಶದ ಪ್ರಜೆಯೇ ಅಲ್ಲ, ಮಾಂಸಹಾರಿ & ಸಸ್ಯಹಾರಿಗಳ ನಡುವೆ ತಂದಿಟ್ಟು ಧರ್ಮ ಒಡೆಯುತ್ತಿದ್ದಾರೆ – ಹಿಂದೂಪರ ಸಂಘಟನೆ

Next Post

MLC ಕಾಂಗ್ರೆಸ್‌ ರಾಜಣ್ಣ ನಾವು ಸೇಹ್ನಿತರು ಆದರೆ ಪಕ್ಷದ ವಿಚಾರ ಬಂದರೆ ನಾನು ರಾಜಿ ಆಗಲ್ಲ : ಜೆ.ಸಿ.ಮಾಧುಸ್ವಾಮಿ

Related Posts

Oracle Layoffs: ಒರಾಕಲ್‌ನಲ್ಲಿ ಭಾರೀ ಲೇ-ಆಫ್ ಪ್ಲ್ಯಾನ್: 20–30 ಸಾವಿರ ಉದ್ಯೋಗಿಗಳಿಗೆ ಬಿಗ್‌ ಶಾಕ್‌
Top Story

Oracle Layoffs: ಒರಾಕಲ್‌ನಲ್ಲಿ ಭಾರೀ ಲೇ-ಆಫ್ ಪ್ಲ್ಯಾನ್: 20–30 ಸಾವಿರ ಉದ್ಯೋಗಿಗಳಿಗೆ ಬಿಗ್‌ ಶಾಕ್‌

by ಪ್ರತಿಧ್ವನಿ
February 5, 2026
0

ಬೆಂಗಳೂರು: ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದು ಟೆಕ್ ಜಗತ್ತಿನ ಬಹುತೇಕ ಸಂಸ್ಥೆಗಳಿಗೆ ಸಾಮಾನ್ಯವಾದ ವಿಚಾರವಾಗಿದೆ. ಇತ್ತೀಚಿಗೆ ಅಮೆಜಾನ್(Amazon) ಸಂಸ್ಥೆ ಸಾವಿರಾರು ಉದ್ಯೋಗಿಗಳನ್ನು ಲೇ-ಆಫ್(layoffs) ಮಾಡಿದ ಬೆನ್ನಲ್ಲೇ ಇದೀಗ...

Read more
Sabarimala Gold Theft: ʼಶಬರಿಮಲೆ ಚಿನ್ನ ಕಳ್ಳತನ ಕೇಸ್‌ನಿಂದ ಕೇರಳ ಸರ್ಕಾರವೇ ಕುಸಿಯುವ ಭಯʼ

Sabarimala Gold Theft: ʼಶಬರಿಮಲೆ ಚಿನ್ನ ಕಳ್ಳತನ ಕೇಸ್‌ನಿಂದ ಕೇರಳ ಸರ್ಕಾರವೇ ಕುಸಿಯುವ ಭಯʼ

February 5, 2026
Donald Trump: ಟ್ರಂಪ್ ಜೀವ ತೆಗೆಯಲು ಯತ್ನಿಸಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

Donald Trump: ಟ್ರಂಪ್ ಜೀವ ತೆಗೆಯಲು ಯತ್ನಿಸಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

February 5, 2026
Ajit Pawar: ವಿಮಾನ ಅಪಘಾತ  ಮುನ್ನ ಅಜಿತ್ ಪವಾರ್ ಫೋನ್  ಸಂಭಾಷಣೆಯಲ್ಲಿ ಹೇಳಿದ್ದೇನು?

Ajit Pawar: ವಿಮಾನ ಅಪಘಾತ  ಮುನ್ನ ಅಜಿತ್ ಪವಾರ್ ಫೋನ್  ಸಂಭಾಷಣೆಯಲ್ಲಿ ಹೇಳಿದ್ದೇನು?

February 5, 2026
ದಿಕ್ಕುಗಾಣದ ಜನತೆಯೂ ದಾರಿ ತೋರದ ಪ್ರಹಸನವೂ

ದಿಕ್ಕುಗಾಣದ ಜನತೆಯೂ ದಾರಿ ತೋರದ ಪ್ರಹಸನವೂ

February 5, 2026
Next Post
MLC  ಕಾಂಗ್ರೆಸ್‌  ರಾಜಣ್ಣ ನಾವು ಸೇಹ್ನಿತರು ಆದರೆ ಪಕ್ಷದ ವಿಚಾರ ಬಂದರೆ ನಾನು ರಾಜಿ ಆಗಲ್ಲ : ಜೆ.ಸಿ.ಮಾಧುಸ್ವಾಮಿ

MLC ಕಾಂಗ್ರೆಸ್‌ ರಾಜಣ್ಣ ನಾವು ಸೇಹ್ನಿತರು ಆದರೆ ಪಕ್ಷದ ವಿಚಾರ ಬಂದರೆ ನಾನು ರಾಜಿ ಆಗಲ್ಲ : ಜೆ.ಸಿ.ಮಾಧುಸ್ವಾಮಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!