ಬೆಂಗಳೂರು: ನಗರದಲ್ಲಿ ಟ್ಯಾಟೂ ಕಲಾವಿದರೊಬ್ಬರನ್ನು ವಿಚಾರಣೆ ನಡೆಸಿರುವ ಕಬ್ಬನ್ ಪಾರ್ಕ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 352 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಟ್ಯಾಟೂ ಸೂತ್ರ ಎಂಬ ಟ್ಯಾಟೂ ಸ್ಟುಡಿಯೋ ನಡೆಸುತ್ತಿರುವ ಟ್ಯಾಟೂ ಕಲಾವಿದ ರಿತೇಶ್ ಅಘಾರಿಯಾ ಬಂಧಿತ.
ಗ್ರಾಹಕರೊಬ್ಬರ ಎದೆಯ ಮೇಲೆ ಪೊಲೀಸರನ್ನು ಅವಮಾನಿಸುವಂತಹ ಟ್ಯಾಟೂ ಬರೆದಿರುವ ಕಲಾವಿದ ಅದನ್ನು ತಾನೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ.ಸಾಮಾಜಿಕ ಮಾಧ್ಯಮವನ್ನು ಪರಿಶೀಲಿಸುವಾಗ ಪೊಲೀಸರನ್ನು ನಿಂದಿಸುವ ಟ್ಯಾಟೂ ಇದ್ದ ಇನ್‌ಸ್ಟಾಗ್ರಾಮ್ ಪೋಸ್ಟ್ ತನ್ನ ಗಮನಕ್ಕೆ ಬಂದಿದೆ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಚೇತನ್ ಎಸ್. ಜಿ ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಪೋಸ್ಟ್‌ನಲ್ಲಿ ಪೊಲೀಸರ ವಿರುದ್ಧ ನಿಂದನೀಯ ಮತ್ತು ಕೆಟ್ಟ ಪದಗಳ ಬಳಕೆ ಮಾಡಲಾಗಿದೆ.
ಆರೋಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ಹಚ್ಚೆ ಕಲಾವಿದನನ್ನು ಕರೆಸಿ ಅಪರಾಧವನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.ಬಿಎನ್‌ಎಸ್‌ನ ಸೆಕ್ಷನ್ 352 ರಡಿ ಶಾಂತಿ ಉಲ್ಲಂಘನೆ ಪ್ರಯತ್ನ, ಉದ್ದೇಶಪೂರ್ವಕ ಅವಮಾನ ಮಾಡುವ ವ್ಯಕ್ತಿ ತಪ್ಪಿತಸ್ಥ ಎಂದು ಕಂಡುಬಂದರೆ ಎರಡರಿಂದ ಐದು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ.