
ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಮೆಜೆಸ್ಟಿಕ್ ರೈಲು ನಿಲ್ದಾಣದ ಟ್ಯಾಕ್ಸಿ ಪಾರ್ಕಿಂಗ್ (Taxi parking)ಸ್ಥಳದಲ್ಲಿ ಐದು ವರ್ಷದ ಬಾಲಕಿಯ ಮೃತದೇಹ ಇತ್ತೀಚೆಗೆ ಪತ್ತೆ ಆಗಿತ್ತು. ಆದರೆ ಇದೀಗ ರೈಲ್ವೇ ಪೊಲೀಸರು ಬಾಲಕಿಯ ಗುರುತು ಪತ್ತೆಯಾಗಿದೆ.ಮರಿಯಮ್ (5) ಮೃತ ದುರ್ದೈವಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಡು ಹಿಡಿದು ಹೊರಟ ರೈಲ್ವೇ ಪೊಲೀಸರು ಬಾಲಕಿಯ ತಾಯಿಯೇ ಮಗಳನ್ನು ಕೊಲೆ ಗೈದಿದ್ದಾರೆ ಎಂಬ ಶಂಕೆ ವ್ಯಕ್ತ ಪಡಿಸಿದ್ದಾರೆ.ಕೊಲೆಯಾದ (murdered)ಮರಿಯಮ್ ಸುತ್ತ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು, ಮೃತ ಬಾಲಕಿ ಶಿವು-ಹೀನಾ ದಂಪತಿಯ ಪುತ್ರಿ ಎನ್ನಲಾಗಿದೆ. ತಾಯಿಯ ಅಕ್ರಮ ಸಂಬಂಧದ ವಿಚಾರಕ್ಕೆ ಬಾಲಕಿ ಕೊಲೆಯಾಗಿದ್ದಾಳೆ ಎನ್ನಲಾಗಿದೆ. ರಾಜು ಎಂಬಾತನ ಜೊತೆ ಹೀನಾ ಅನೈತಿಕ ಸಂಬಂಧ ಹೊಂದಿದ್ದು, ಪತಿ ಶಿವುನನ್ನು ಬಿಟ್ಟು ರಾಜು ಜೊತೆ ಭಿಕ್ಷಾಟನೆ ಮಾಡುತ್ತಿದ್ದರು. ಇವರಿಬ್ಬರ ಜೊತೆಯೇ ಕೊಲೆಯಾದ ಬಾಲಕಿ ಮರಿಯಮ್ ಇರುತ್ತಿದ್ದಳು. ಈ ವೇಳೆ ಎಲ್ಲಿ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂದು ಪ್ರಿಯಕರ ರಾಜು ಜತೆ ಸೇರಿಕೊಂಡು ಮಗಳನ್ನು ಕೊಲೆಗೈದಿರಬಹುದು ಎಂದು ರೈಲ್ವೇ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಶವ ಪತ್ತೆಯಾದ ದಿನದಿಂದಲೂ ಹೀನಾ ಮತ್ತು ರಾಜು ನಾಪತ್ತೆಯಾಗಿದ್ದಾರೆ. ಹೀಗಾಗಿ ಪೊಲೀಸರಿಗೆ ಹೀನಾ ಹಾಗೂ ರಾಜು ಮೇಲೆ ಸಾಕಷ್ಟು ಅನುಮಾನ ಮೂಡಿದೆ. ಹೀಗಾಗಿ ಇವರಿಬ್ಬರಿಗಾಗಿ ರೈಲ್ವೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಇನ್ನು ಮೃತದೇಹದ ಮೇಲೆ ಗಾಯಗಳು ರಕ್ತದ ಕಲೆಗಳು ಕಂಡುಬಂದಿದ್ದು, ಅತ್ಯಾಚಾರವೆಸಗಲಾಗಿ ಕೊಲೆ ಮಾಡಿದ್ದಾರೆ ಎಂದು ರೈಲ್ವೇ ಪೊಲೀಸರು ತಿಳಿಸಿದ್ದಾರೆ