ಬೆಂಗಳೂರು: ಪ್ರತಿ ವರ್ಷ ಮಳೆ ಒಂದು ವಾರ ವಿಳಂಬವಾದರೆ ಕೃಷಿಗೆ ದೊಡ್ಡ ಸಮಸ್ಯೆಯಾಗುತ್ತದೆ. ಪ್ರತಿ ಜಿಲ್ಲೆಗೆ ಐವತ್ತು ಲಕ್ಷ ರೂ. ಬಿಡುಗಡೆ ಮಾಡಿ, ಶಾಸ್ವತ ಟಾಸ್ಕ್ ಫೋರ್ಸ್ ರಚನೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಅಲ್ಲಮ ಪ್ರಭು ಪಾಟೀಲ್ ಕೇಳಿದ ಪ್ರಶ್ನೆಗೆ ಬೆಂಬಲಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿ ವರ್ಷ ಒಂದು ವಾರ ಮಳೆ ವಿಳಂಬವಾದರೆ ಕೃಷಿ ಮೇಲೆ ದೊಡ್ಡ ಪರಿಣಾಮ ಬೀರಲಿದೆ, ಈ ಸಮಸ್ಯೆಯನ್ನ ಬಗೆ ಹರಿಸಲು ಸರ್ಕಾರ ಕೆಲವೊಂದು ದೃಢ ನಿರ್ಧಾರವನ್ನ ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ..
ಈ ಕುರಿತು ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರೈತರು ಬಿತ್ತನೆ ಮಾಡಿದರೂ ಮೊಳಕೆ ಒಡೆಯದಿದ್ದರೆ ಅದಕ್ಕೆ ವಿಮೆ ಕೂಡ ಬರುವುದಿಲ್ಲ. ಹವಾಮಾನ ಇಲಾಖೆಯ ಮುನ್ಸೂಚನೆ ನಂಬಿ ಕೂಡಬೇಡಿ, ಅವರು ಮುಂದಿನ ಐದು ದಿನ ನಿರಂತರ ಮಳೆ ಅಂತ ಹೇಳಿದ್ದಾರೆ. ಆದರೆ, ಎಲ್ಲ ಕಡೆ ನಿರ್ಧಿಷ್ಟ ಮಳೆ ಆಗುತ್ತಿಲ್ಲ. ನೀವು ವಾಸ್ತವ ನೋಡಿ ಕೆಲಸ ಮಾಡಬೇಕು. ಅದಕ್ಕಾಗಿ ಶಾಸ್ವತ ಟಾಸ್ಕ್ ಫೋರ್ಸ್ ರಚನೆ ಮಾಡಬೇಕು. ಅಲ್ಲದೇ ಪ್ರತಿ ಜಿಲ್ಲೆಗೂ ತಕ್ಷಣ ಐವತ್ತು ಲಕ್ಷ ರೂ.ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ಮಾಜಿ ಮುಖ್ಯಮಂತ್ರಿ ಅವರ ಸಲಹೆಗೆ ವಿವಿಧ ರೀತಿಯಾದ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಸರ್ಕಾರ ಕೂಡ ಇದಕ್ಕೆ ಸಕರಾತ್ಮಕವಾಗಿ ಸ್ಪಂಧಿಸಿದ್ದು, ಈ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಲಿದೆಯೇ ಎಂಬ ಕುತೂಹಲ ರೈತರು ಹಾಗೂ ಸರ್ವಾಜನಿಕರಲ್ಲಿ ಮನೆ ಮಾಡಿದೆ.