ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿರುದ್ಧ ಗುರುತರ ಆರೋಪ ಕೇಳಿ ಬಂದಿದೆ. ಮಗನ ಹೆಸರಲ್ಲಿ ಮಗಳ ವಿರುದ್ಧವೇ ಸಿ.ಪಿ.ಯೋಗೇಶ್ವರ್ ದೂರು ದಾಖಲಿಸಿರುವ ಆರೋಪ ಕೇಳಿ ಬಂದಿದೆ.
ಬೆಂಗಳೂರಿನ ಮನೆಯಲ್ಲಿ ಪಾಲು ಕೇಳಿ ಕೋರ್ಟ್ಗೆ ಅರ್ಜಿ ಹಾಕಿದ್ದಾರೆ. ಮಗ ಶ್ರವಣ್ ಗಮನಕ್ಕೆ ತರದೇ ನಿಶಾ ಹಾಗೂ ಪತ್ನಿ ವಿರುದ್ಧ ಸಿ.ಪಿ.ಯೋಗೇಶ್ವರ್ ದೂರು ದಾಖಲಿಸಿದ್ದು,ಕೋರ್ಟ್ ಕೇಸ್ ವಕಾಲತ್ತು ಹಾಗೂ ಪ್ರಮಾಣ ಪತ್ರಕ್ಕೆ ಮಗ ಶ್ರವಣ್ ಸಹಿಯನ್ನು ಪೋರ್ಜರಿ ಮಾಡಿದ್ದಾರೆ.
ಈ ಬಗ್ಗೆ ತಂದೆ ವಿರುದ್ಧವೇ ಮಗ ಶ್ರವಣ್ ಕೋರ್ಟ್ಗೆ ದೂರು ನಿಡಿದ್ದಾರೆ. ನಾಳೆ ಶ್ರವಣ್ ಅರ್ಜಿ ಸಂಬಂಧ ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.
ಬೆಂಗಳೂರು ಮನೆಯಲ್ಲಿ ಕೇಸ್ ದಾಖಲು ಬಳಿಕ ವಕೀಲರು ಶ್ರವಣ್ಗೆ ಕರೆ ಮಾಡಿದ್ದಾರೆ.ಈ ವೇಳೆ ತಾನು ಯಾವುದೇ ಸಹಿ ಮಾಡಿಲ್ಲ ಎಂದ ಶ್ರವಣ್, ತಂದೆಗೆ ಕರೆ ಮಾಡಿ ವಿಚಾರಿಸಿದ್ದಾನೆ. ಆಗ ತಾನೇ ನಿನ್ನ ಸಹಿ ಮಾಡಿದ್ದೇನೆ ಎಂದು ಮಗ ಶ್ರವಣ್ ಬಳಿ ಸಿ.ಪಿ ಯೋಗೇಶ್ವರ್ ಒಪ್ಪಿಕೊಂಡಿದ್ದಾರೆ. ಇದೀಗ ತನ್ನ ಸಹಿ ಪೋರ್ಜರಿ ಆರೋಪದ ಅಡಿ ಮಗ ಶ್ರವಣ್ ದೂರು ದಾಖಲು ಮಾಡಿದ್ದಾರೆ.