ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಮತ್ತು ರೂಪಾಂತರಿ ಓಮಿಕ್ರಾನ್ ಮೂರನೇ ಅಲೆಗೆ ಮುನ್ನುಡಿಯನ್ನು ಬರೆಯಬಹುದು ಎನ್ನಲಾಗಿದೆ. ಈ ಮಧ್ಯೆ ಸೋಂಕು ಹೆಚ್ಚಳವಾಗುತ್ತಿದ್ದು ದೊಡ್ಡ ದೊಡ್ಡ ಚುನಾವಣಾ ರ್ಯಾಲಿಗಳಿಗೆ ಅನುಮತಿ ಮತ್ತು ರೋಡ್ ಶೋ ಗೆ ಅನುಮತಿ ನೀಡದೆ ಇರುವುದು ಒಳ್ಳೆಯದು ಎಂದು ಚುನಾವಣಾ ಆಯೋಗಕ್ಕೆ ಕೇಂದ್ರ ಕೋವಿಡ್ ಟಾಸ್ಕ್ ಫೋರ್ಸ್ ಸಲಹೆ ನೀಡಿದೆ.
ಈ ಕುರಿತು ಗುರುವಾರ ಚುನಾವಣೆ ನಡೆಯುವ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಕೋವಿಡ್ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲು ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಚುನಾವಣಾ ಆಯೋಗಕ್ಕೆ ಟಾಸ್ಕ್ಫೋರ್ಸ್ ಮಾಹಿತಿ ನೀಡಿದೆ.
NITI ಆಯೋಗ ಮತ್ತು ಕೇಂದ್ರ ಕೋವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ವಿಕೆ ಪಾಲ್ ಅವರು ಚುನಾವಣಾ ಆಯೋಗಕ್ಕೆ ದೇಶದ ಪ್ರಸ್ತುತ ಕೋವಿಡ್ ಪರಿಸ್ಥಿತಿಯಲ್ಲಿ ದೊಡ್ಡ ರ್ಯಾಲಿಗಳು ಮತ್ತು ರೋಡ್ಶೋಗಳಿಗೆ ಅನುಮತಿ ನೀಡದೆ ಇರುವುದು ಒಳ್ಳೆಯದು ಎಂದು ತಿಳಿಸಿದ್ದಾರೆ. ಅದಾಗ್ಯೂ, ರಾಜಕೀಯ ಪಕ್ಷಗಳು ಅಂತಹ ದೊಡ್ಡ ಪ್ರಮಾಣದ ರ್ಯಾಲಿಗಳು ಮತ್ತು ರೋಡ್‌ಶೋಗಳನ್ನು ಸ್ವಯಂಪ್ರೇರಿತವಾಗಿ ನಿಲ್ಲಿಸಬೇಕು ಎಂದು ಆಯೋಗವು ಅಭಿಪ್ರಾಯಪಟ್ಟಿದೆ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ. ಅಂತಹ ಘಟನೆಗಳನ್ನು ನಿಲ್ಲಿಸಲು ಚುನಾವಣಾ ಸಂಸ್ಥೆ ಮುಂದಾಗುವ ಸಾಧ್ಯತೆಯಿಲ್ಲ ಎಂದು ಸೂಚಿಸುತ್ತದೆ.

ಓಮಿಕ್ರಾನ್ ಪ್ರಕರಣಗಳ ಉಲ್ಬಣದ ನಡುವೆ ದೊಡ್ಡ ದೊಡ್ಡ ರ್ಯಾಲಿಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದೆ ಇರುವುದು ಮತ್ತು ಸೋಂಕಿತರ ಪ್ರಮಾಣ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸಮಯದಲ್ಲಿ ಚುನಾವಣೆಯನ್ನು ನಡೆಸುವ ಕುರಿತು NITI ಆಯೋಗ್ ಮತ್ತು ಕೇಂದ್ರ ಕೋವಿಡ್ ಟಾಸ್ಕ್ ಕಳವಳ ವ್ಯಕ್ತಪಡಿಸಿದೆ. ದೇಶವು ಇಂದು 90,000 ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ವರದಿ ಮಾಡಿದೆ .
ಲಸಿಕೆಗಳನ್ನು ಹೆಚ್ಚಿಸುವಂತೆ ಮತ್ತು ಚುನಾವಣಾ ಕರ್ತವ್ಯದಲ್ಲಿರುವವರು ಎರಡು ಡೋಸ್ ಲಸಿಕೆ ಹಾಕಿರುವುದನ್ನು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ರಾಜ್ಯಗಳನ್ನು ಕೇಳಿದೆ.