ಪ್ರಪಂಚದಾದ್ಯಂತ ಕೋವಿಡ್ ಸೋಂಕಿನ ಉಲ್ಬಣ ದಿನೇ ದಿನೇ ಹೆಚ್ಚುತ್ತಿದ್ದು, ವೈರಾಣುವನ್ನು ಲಘುವಾಗಿ ಪರಿಗಣಿಸಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಮುಂದಿನ 6-8 ವಾರಗಳ ಅವಧಿಯಲ್ಲಿ ಅರ್ಧದಷ್ಟು ಯೂರೋಪಿನ ಜನಸಂಖ್ಯೆ ಓಮಿಕ್ರಾನ್ ರೂಪಾಂತರಿ ಸೋಂಕಿಗೆ ಒಳಗಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದೆ.
ಪ್ರಪಂಚದಾದ್ಯಂತ ಕೋವಿಡ್ ಸೋಂಕಿನ ಉಲ್ಬಣ ದಿನೇ ದಿನೇ ಹೆಚ್ಚುತ್ತಿದ್ದು, ವೈರಾಣುವನ್ನು ಲಘುವಾಗಿ ಪರಿಗಣಿಸಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ ಕೇಂದ್ರವು ನಡೆಸಿರುವ ಸಂಶೋಧನೆಯಲ್ಲಿ ಮುಂದಿನ 6-8 ವಾರಗಳ ಅವಧಿಯಲ್ಲಿ ಅರ್ಧದಷ್ಟು ಯೂರೋಪಿನ ಜನಸಂಖ್ಯೆ ಓಮಿಕ್ರಾನ್ ರೂಪಾಂತರಿ ಸೋಂಕಿಗೆ ಒಳಗಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದೆ.
ಈ ಕುರಿತು ವರ್ಚುವಲ್ ಸಭೆ ನಡೆಸಿದ WHOನ ಹಿರಿಯ ಅಧಿಕಾರಿ ಕ್ಯಾಥರೀನ್ ಸ್ಮಾಲ್ವುಡ್ ಅವರು ಸೋಂಕನ್ನು ಲಘುವಾಗಿ ಪರಿಗಣಿಸಬೇಡಿ. ಇದು ಯಾವಾಗ ಬೇಕಾದರೂ ತನ್ನ ಅಟ್ಟಹಾಸವನ್ನ ಮುಂದುವರೆಸಬಹುದು ಎಂದು ಹೇಳಿದ್ದಾರೆ.
ಪ್ರಪಂಚ ಅನಿರೀಕ್ಷಿತವಾಗಿ ವೈರಾಣುವಿನ ರೂಪಾಂತರಿಯನ್ನು ನೋಡುತ್ತಲೇ ಇದೆ. ಈ ರೂಪಾಂತರಿಯು ಮನುಷ್ಯನ ದೇಹ ಸ್ಥಿತಿ ಮೇಲೆ ನಿಯಂತ್ರಣ ಸಾಧಿಸುತ್ತದೆ. ನಾವು ಸುಮ್ಮನೆ ಕುಳಿತುಕೊಂಡು ವೈರಾಣು ಹೆಚ್ಚಾಗುವುದನ್ನು ನೋಡಲು ಸಾಧ್ಯವಿಲ್ಲ ಎಂದು ಸ್ಮಾಲ್ವುಡ್ ತಿಳಿಸಿದ್ದಾರೆ.
ಹಲವಾರು ರಾಜಕೀಯ ನಾಯಕರು ಓಮಿಕ್ರಾನ್ ರೂಪಾಂತರಿಯನ್ನು ಲಘುವಾಗಿ ಪರಿಗಣಿಸಿದ್ದಾರೆ. ಭಾರತದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನವರಿ 3ರಂದು ಓಮಿಕ್ರಾನ್ ಒಂದು ಸಾಮಾನ್ಯ ವೈರಲ್ ಜ್ವರ ಅಷ್ಟೇ ಎಂದು ಹೇಳಿದ್ದರು. ಒಂದು ವಾರದ ನಂತರ ಸ್ಪ್ಯಾನಿಶ್ನ ಪ್ರಧಾನಿ ಸ್ಯಾಂಚೆಝ್ ಕೋವಿಡ್ ಪ್ರಕರಣಗಳು ಕಡಿಮೆಯಾಗಿರುವ ಕಾರಣ ಓಮಿಕ್ರಾನ್ ಹುಟ್ಟಿಕೊಂಡಿದೆ ಎಂದು ಹೇಳಿದ್ದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಕ್ಲೂಗೆ ಈ ಬಗ್ಗೆ ಮಾತನಾಡಿದ್ದು, ಓಮಿಕ್ರಾನ್ ರೂಪಾಂತರಿಯೂ ಡೆಲ್ಟಾಗಿಂತ ಹೆಚ್ಚು ಪರಿಣಾಮ ಬೀರುತ್ತದೆ. ಕೋವಿಡ್ ಪ್ರಕರಣಗಳು ಕಡಿಮೆ ಲಸಿಕೆ ಪಡೆದಿರುವ ದೇಶಗಳಲ್ಲಿ ಓಮಿಕ್ರಾನ್ ತೀವ್ರ ಪರಿಣಾಮ ಬೀರುತ್ತದೆ ಎಂದಿದ್ದಾರೆ.