1,400ಕ್ಕೂ ಹೆಚ್ಚು ಕರೋನ ರೋಗಿಗಳಿರುವ ಆರು ಮ್ಯಾಕ್ಸ್ ಆಸ್ಪತ್ರೆಗಳಿಗೆ ತುರ್ತು ಆಮ್ಲಜನಕವನ್ನು ಪೂರೈಸುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಬುಧವಾರ ಆದೇಶಿಸಿದೆ.
ಮ್ಯಾಕ್ಸ್ ಆಸ್ಪತ್ರೆಗಳ ಮಾಲೀಕತ್ವದ ಬಾಲಾಜಿ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರ ಸಲ್ಲಿಸಿದ ಮನವಿಯನ್ನು ನ್ಯಾಯಾಲಯವು ಇಂದು ವಿಚಾರಣೆಗೆ ಒಳಪಡಿಸಿತ್ತು, ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠವು ರಾತ್ರಿ 8 ಗಂಟೆಗೆ ವಿಶೇಷ ಸಭೆ ನಡೆಸಿ, ದೆಹಲಿ ಆಸ್ಪತ್ರೆಗಳಿಗೆ ಆಮ್ಲಜನಕವನ್ನು “ಏನಾದರು ಮಾಡಿ ಒದಗಿಸಿ” ಕೈಗಾರಿಕೆಗಳಿಂದ ಬರುವ ಸಂಪೂರ್ಣ ಉತ್ಪಾದನೆಯನ್ನು ವೈದ್ಯಕೀಯ ಬಳಕೆಗಾಗಿಯಾಗುವಂತೆ ನೋಡಿಕೊಳ್ಳಿ ಎಂದು ನಿರ್ದೇಶನ ನೀಡಿದೆ.
ಗಂಭೀರವಾಗಿ ಅನಾರೋಗ್ಯದಿಂದ ಬಳಲುತ್ತಿರುವ ಮತ್ತು ಮೆಡಿಕಲ್ ಆಕ್ಸಿಜನ್ ಅಗತ್ಯವಿರುವವರಿಗೆ ಅದನ್ನು ಒದಗಿಸುವುದು ನಾಗರಿಕರ ಜೀವನ ಹಕ್ಕು ಅದನ್ನು ರಕ್ಷಿಸಲು ನಾವು ಕೇಂದ್ರ ಸರ್ಕಾರಕ್ಕೆ ಸೂಚಿಸುತ್ತೇವೆ. ಯಾವುದೇ ವಿಧಾನದಿಂದ ಆಕ್ಸಿಜನ್ ಪೂರೈಸಲು ನಾವು ಕೇಂದ್ರ ಸರ್ಕಾರವನ್ನು ನಿರ್ದೇಶಿಸುತ್ತೇವೆ. ಪೂರೈಕೆ ಖಾತ್ರಿಪಡಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಅಗತ್ಯವಿದ್ದರೆ, ಕೇಂದ್ರಗಳು ಕೈಗಾರಿಕೆಗಳಿಂದ ಸಂಪೂರ್ಣ ಸ್ಟೀಲ್ ಮತ್ತು ಪೆಟ್ರೋಲಿಯಂ ಅನ್ನು ಬೇರೆಡೆಗೆ ತಿರುಗಿಸುವಂತೆ ನ್ಯಾಯಾಲಯ ತಿಳಿಸಿತು.
ಆಕ್ಸಿಜನ್ ಪೂರೈಕೆಯನ್ನು ತಕ್ಷಣವೇ ಪೂರೈಸದಿದ್ದರೆ ಅದರ ಅಗತ್ಯ ಇರುವ ಅಷ್ಟು ರೋಗಿಗಳ ಪ್ರಾಣಕ್ಕೆ ಅಪಾಯವಿದೆ ಎಂದು ಆಸ್ಪತ್ರೆಗಳ ಮಾಲೀಕತ್ವದ ಬಾಲಾಜಿ ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರ ತಿಳಿಸಿತ್ತು.
ಈ ಕುರಿತು ಪ್ರತಿಕ್ರಿಯಿದ ಕೇಂದ್ರ ಸರ್ಕಾರ, ದೆಹಲಿಗೆ ಹೆಚ್ಚುವರಿ ಆಮ್ಲಜನಕವನ್ನು ಕೋರಿದೆ ಎಂದು ಆರೋಪಿಸಿತು.
“It is being implemented as we speak,” ಎಂದು ಕೇಂದ್ರದ ಪರ ವಕೀಲ ಅನಿಲ್ ಸೋನಿ ಹೇಳಿದರು.
ಆದರೆ ನ್ಯಾಯಪೀಠವು ಅವರ ಮಾತಿಗೆ ಪ್ರಭಾವಿತರಾಗದೆ.
“ನೀವು 400 ಮೆಟ್ರಿಕ್ ಟನ್ ಸರಬರಾಜು ಮಾಡುತ್ತಿರುವುದು ಯಾರಿಗೂ ಸಮಾಧಾನವಿಲ್ಲ.. ಕೇಂದ್ರವು ಆಜ್ಞೆ ಮಾಡುವ ಎಲ್ಲಾ ಶಕ್ತಿ ಮತ್ತು ಸಂಪನ್ಮೂಲಗಳನ್ನು ಹೊಂದಿದೆ.. ಟಾಟಾ ಸಹ ಸರಬರಾಜು ಮಾಡುತ್ತಿದೆ. ಮಿಸ್ಟರ್ ಟಾಟಾ ಕೂಡ ಸಹಾಯ ಮಾಡಲು ಸಿದ್ಧರಿರುತ್ತಾರೆ. ಎಲ್ಲರೂ ಈ ಕ್ಷಣದಲ್ಲಿ ಸಹಾಯ ಮಾಡಲು ಸಿದ್ಧರಿರಬೇಕು,” ಎಂದು ಸ್ವತಃ ಕೇಂದ್ರದ ನಿಲುವನ್ನು ಟೀಕಿಸಿದೆ.
ಮ್ಯಾಕ್ಸ್ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಗೆ ಸಂಬಂಧಿಸಿದಂತೆ ತುರ್ತು ಅರ್ಜಿಯನ್ನು ದೆಹಲಿ ಹೈಕೋರ್ಟ್ ಆಲಿಸಿ ಕೇಂದ್ರಕ್ಕೆ ಚಾಟಿ ಬೀಸಿದ ಪರಿಣಾಮ, ಕೇಂದ್ರವನ್ನು ಪ್ರತಿನಿಧಿಸುವ ಎಸ್‌ಜಿ ತುಷಾರ್ ಮೆಹ್ತಾ ಅವರು ಆಮ್ಲಜನಕದ ಪೂರೈಕೆ ದಾರಿಯಲ್ಲಿದೆ, ಶೀಘ್ರದಲ್ಲೇ ಅದು ಆಸ್ಪತ್ರೆಗೆ ತಲುಪಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. O2 ಅನ್ನು ಮ್ಯಾಕ್ಸ್ ಆಸ್ಪತ್ರೆಗೆ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ನೀವು (ಕೇಂದ್ರ) ಆಮ್ಲಜನಕವನ್ನು ತಲುಪಿಸುವಿರಿ ಎಂಬ ಸಂಪೂರ್ಣ ನಂಬಿಕೆ ನಮ್ಮಲ್ಲಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.ಆದರೆ ಇನ್ನೂ ಅನೇಕ ಆಸ್ಪತ್ರೆಗಳು ಸಹ ಆಕ್ಸಿಜನ್ ಕೊರತೆಯನ್ನು ಎದುರಿಸುತ್ತಿವೆ. ಇದು ರಾಷ್ಟ್ರೀಯ ತುರ್ತುಸ್ಥಿತಿಯಾಗಿರುವುದರಿಂದ ನೀವು ಆಕ್ಸಿಜನ್ ಪೂರೈಸುವಂತೆ ಆದೇಶವನ್ನು ರವಾನಿಸಬಹುದು ಎಂದು ತಿಳಿಸಿದೆ.
ಮ್ಯಾಕ್ಸ್ ಆಸ್ಪತ್ರೆ, ವೈಶಾಲಿ ಮತ್ತು ಗುರಗಾಂವ್‌ಗಳಿಗೆ ಕೇವಲ 8 ಗಂಟೆಗಳ ಆಕ್ಸಿಜನ್ ಸಾಮರ್ಥ್ಯವಿದೆ, ಬೆಳಿಗ್ಗೆ ತನಕ ಅದು ಉಳಿಯುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮುಂದೆ ಮ್ಯಾಕ್ಸ್ ಆಸ್ಪತ್ರೆಯನ್ನು ಪ್ರತಿನಿಧಿಸುವ ವಕೀಲ ಸಂದೀಪ್ ಸೇಥಿ ನ್ಯಾಯಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಈಗ 8000 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಇದೆ ಎಂದು ಗೋಯಿ ಹೆಚ್ಚುವರಿ ಕಾರ್ಯದರ್ಶಿ ಮತ್ತು ಆಮ್ಲಜನಕದ ಪೂರೈಕೆಯ ಉಸ್ತುವಾರಿಯಾದ ಸುಮಿತಾ ದಾವ್ರಾ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಈ ವಿಷಯವನ್ನು ಪರಿಗಣಿಸಿ ನ್ಯಾಯಾಲಯವು, the fact of the matter is oxygen shortage, and we have to fulfill it ಎಂದು ಕೇಂದ್ರಕ್ಕೆ ಸೂಚಿಸಿದೆ.
ಆಮ್ಲಜನಕದ ಪೂರೈಕೆಯ ಕೊರತೆಯಿಂದ ಜನರು ಸಾಯುವುದನ್ನು ನಾವು ನೋಡಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಅರ್ಜಿಯಲ್ಲಿ ಹೇಳಿರುವಂತೆ ಆರು ಆಸ್ಪತ್ರೆಗಳು ಮತ್ತು ರೋಗಿಗಳ ಸಂಖ್ಯೆ ಈ ಕೆಳಗಿನಂತಿದೆ