Karnataka Lock-down: ಪೊಲೀಸರೇ ಲಾಠಿ ಸಂಭಾಷಣೆ ನಿಲ್ಲಿಸಿ, ನಿಯಮ ಮೀರಿದ್ರೆ ದಂಡ ವಿಧಿಸಿ -ರವಿ ಕೃಷ್ಣಾ ರೆಡ್ಡಿ

ಲಾಕ್‌ಡೌನ್‌ ಸಮಯದಲ್ಲಿ ರಸ್ತೆಗಿಳಿದರೆ ಪೊಲೀಸರಿಂದ ಪೆಟ್ಟು ಗ್ಯಾರಂಟಿ ಅನ್ನೋದು ಜನಸಾಮಾನ್ಯರ ಮನಸಲಿ ಅಚ್ಚೂರಿದೆ. ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಗೆ ಹಾಗು ರಾಜ್ಯದ ಜನತೆಗೆ ಕೆಆರ್‌ಎಸ್‌ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣ ರೆಡ್ಡಿ ಸಲಹೆ ಕೊಟ್ಟಿದ್ದಾರೆ.

ಪೊಲೀಸರಿಗೆ ಶಿಕ್ಷಿಸುವ ಅಧಿಕಾರವಿಲ್ಲ. ಈ ಎರಡನೇ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ನಿಯಮ ಮೀರಿ ಹೊರಗೆ ಓಡಾಡುವ ಸಂದರ್ಭದಲ್ಲಿ ಕರ್ನಾಟಕದ ಪೊಲೀಸರು ಅವರನ್ನು ಸೌಜನ್ಯದಿಂದ ವಿಚಾರಿಸಬೇಕು ಅವರು ನಿಯಮ ಮೀರಿದ್ದ ಪಕ್ಷದಲ್ಲಿ ದಂಡ ವಿಧಿಸಬೇಕು ಅಥವ ಪ್ರಕರಣ ದಾಖಲಿಸಿ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೇ ಹೊರತು ಆರಂಭದಲ್ಲಿಯೇ ಪೊಲೀಸರ ಲಾಠಿ ಮಾತನಾಡಬಾರದು.

ಓಡಾಡುತ್ತಿರುವ ಜನರನ್ನು ಪ್ರಶ್ನಿಸಿದಾಗ ಅವರು ನೀಡುವ ಉತ್ತರವನ್ನು ಪರಿಶೀಲಿಸಿ ಪೊಲೀಸರು ತಮ್ಮ ವಿವೇಚನೆಯನ್ನು ಬಳಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ಹೊರಗೆ ಬರುವ ಎಲ್ಲರೂ ಪುಂಡರು, ಪೋಕರಿಗಳು, ತರಲೆಗಳೇ ಆಗಿರುವುದಿಲ್ಲ. ಸಕಾರಣ ಇಲ್ಲದೆ ತಿರುಗಾಡುವ ಜನರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುವುದು ಮಾತ್ರ ಸರಿಯಾದ ನಡೆ ಎಂದು ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಹೇಳಿದ್ದಾರೆ.

ಈ ಲಾಕ್‌ಡೌನ್ ಸಂದರ್ಭದಲ್ಲಿಯಾದರೂ ಮೊದಲ ಲಾಕ್‌ಡೌನ್ ಅವಧಿಯಲ್ಲಿ ಆದಂತೆ ಆಗದೆ, ಪೊಲೀಸರ ದೌರ್ಜನ್ಯದ ಪ್ರಕರಣಗಳು ಕಡಿಮೆ ಆಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಪ್ರಿಯ ಪೊಲೀಸರೇ, ನಿಮ್ಮ ಲಾಠಿಗಳು ಜನರ ಬೆನ್ನಿನ ಜೊತೆಗೆ ಸಂಭಾಷಣೆ ಮಾಡುವುದನ್ನು ನಿಲ್ಲಿಸಿ. ದೊಂಬಿ ಅಥವ ಹಿಂಸಾಕೃತ್ಯಗಳ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಕಾರಣಕ್ಕಾಗಿ ಬಿಟ್ಟರೆ ಮಿಕ್ಕ ಸಂದರ್ಭದಲ್ಲಿ ಹೀಗೆ ನಡೆದುಕೊಳ್ಳಲು ನಿಮಗೆ ಯಾವ ಅಧಿಕಾರವೂ ಇಲ್ಲ ಎಂದು ಪೊಲೀಸ್‌ ಇಲಾಖೆಯನ್ನು ಎಚ್ಚರಿಸಿದ್ದಾರೆ.

ನಮ್ಮ ರಾಜ್ಯದಲ್ಲಿ “ಮಾನವ ಹಕ್ಕುಗಳ ಆಯೋಗ” ಬಹುತೇಕವಾಗಿ ಸತ್ತಿದೆ. ಅದರ ಕಾರ್ಯಕ್ಷಮತೆ ಮತ್ತು ಅದಕ್ಕೆ ಖರ್ಚು ಮಾಡುತ್ತಿರುವ ಜನರ ತೆರಿಗೆಯ ಹಣ ಎಷ್ಟು ಉಪಯೋಗ ಆಗುತ್ತಿದೆ ಎನ್ನುವ ಮಾಹಿತಿಯನ್ನು ಹೊರತೆಗೆದು, ಈ ಆಯೋಗದ ಮೌಲ್ಯಮಾಪನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.  ನಿವೃತ್ತ ಅಧಿಕಾರಿಗಳಿಗೆ ಮತ್ತು ನಿವೃತ್ತ ನ್ಯಾಯಮೂರ್ತಿಗಳಿಗೆ ಗೂಟದ ಕಾರಿನ ಸಮೇತ ಇತರೆ ಐಷಾರಾಮಿ ಸವಲತ್ತುಗಳನ್ನು ಒದಗಿಸುವ well paid ನಿವೃತ್ತಿ ಕೇಂದ್ರ ಆಗಿದೆ ಎಂದು ತೆಗಳಿದ್ದಾರೆ.

 ಅದು ಜನರ ಹಕ್ಕುಗಳನ್ನು ರಕ್ಷಿಸುತ್ತಿಲ್ಲ. ಇಲ್ಲವಾದಲ್ಲಿ ಪೊಲೀಸರ ಅತಿರೇಕದ ಕೃತ್ಯಗಳ ಬಗ್ಗೆ ಇಷ್ಟೊತ್ತಿಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕನಿಷ್ಠ ಎಚ್ಚರಿಕೆಯನ್ನಾದರೂ ನೀಡಿರುತ್ತಿತ್ತು ಎಂಬುವುದು ರವಿಕೃಷ್ಣ ರೆಡ್ಡಿ ಅವರ ಆರೋಪವಾಗಿದೆ.

ಜನರಲ್ಲಿಯೂ ನನ್ನ ವಿನಂತಿ. ಇದು ಮಹಾ ವಿಪತ್ತಿನ ಕಾಲ. Covid-19 ಸಾಂಕ್ರಾಮಿಕ ರೋಗವನ್ನು ರಾಜ್ಯದಲ್ಲಿ ಹತೋಟಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಸಂದರ್ಭದಲ್ಲಿ ಲಾಕ್‌ಡೌನ್ ಹೇರಿದೆ. ನಾವೆಲ್ಲರೂ ಅದನ್ನು ಗೌರವಿಸೋಣ. ಜವಾಬ್ದಾರಿಯಿಂದ ನಡೆದುಕೊಳ್ಳೋಣ. ಸೋಂಕು ಇಂದು ರಾಜ್ಯದ ಲಕ್ಷಾಂತರ ಕುಟುಂಬಗಳನ್ನು ಹಿಂಡಿ ಹಿಪ್ಪೆ ಮಾಡಿದೆ, ಮಾಡುತ್ತಿದೆ. ಈ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡಿ ಪೊಲೀಸರ ಕೈಲಿ ಅವಾಚ್ಯ ಮಾತುಗಳಲ್ಲಿ ಬೈಸಿಕೊಂಡು ಬರುವುದು ಅಥವಾ ಲಾಠಿ ಏಟು ತಿಂದು ಬರುವುದು ತೀರಾ ಅವಮಾನಕಾರಿಯಾದುದು ಎಂದು ಜನತೆಯನ್ನೂ ಎಚ್ಚರಿಸಿದ್ದಾರೆ.

ನಿಜಕ್ಕೂ ನಿಮಗೆ ತುರ್ತುಪರಿಸ್ಥಿತಿ ಆಗಿದ್ದಲ್ಲಿ ಅಥವಾ ನಿಮ್ಮ ಓಡಾಟ ಸಕಾರಣವಾಗಿದ್ದು ಅನಿವಾರ್ಯವೂ ಆಗಿದ್ದಲ್ಲಿ, ನಿಮ್ಮನ್ನು ರಸ್ತೆಯಲ್ಲಿ ಪೊಲೀಸರು ತಡೆದಾಗ ಅವರಿಗೆ ಧೈರ್ಯವಾಗಿ ವಿಷಯ ಮನವರಿಕೆ ಮಾಡಿಕೊಡಿ. ಒಳ್ಳೆಯ ಪೊಲೀಸರೂ ಇದ್ದಾರೆ. ಆದರೆ ಪುಕ್ಕಲರ ತರಹ ವರ್ತಿಸುವ, ಕಳ್ಳರಂತೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುವ ಜನರನ್ನು ಕಂಡ ತಕ್ಷಣ ಪೊಲೀಸರು ಒಂದು ಅಭಿಪ್ರಾಯಕ್ಕೆ ಬಂದುಬಿಡುತ್ತಾರೆ. ಹಾಗಾಗಿ ಪೊಲೀಸರು ನಿಲ್ಲಿಸಿದಾಗ ಧೈರ್ಯದಿಂದ ಮತ್ತು ಗೌರವದಿಂದ ಮಾತನಾಡಿ. ಪೊಲೀಸರೂ ನಮ್ಮವರೇ ಮತ್ತು ಅವರಿಗೂ ಇದು ಕಷ್ಟದ ಸಮಯ ಎನ್ನುವುದು ನಿಮಗೆ ತಿಳಿದಿರಲಿ ಎಂಬುವುದು ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಲಹೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...