ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ದರ್ಶನ್ ಅನುಪಸ್ಥಿತಿಯಲ್ಲೇ ಡೆವಿಲ್ ಮೊದಲ ದಿನವೇ ಭರ್ಜರಿ ಗೆಲುವು ಸಾಧಿಸಿದ್ದು, ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುವತ್ತ ದಾಪುಗಾಲು ಹಾಕುತ್ತಿದೆ. ಈ ನಡುವೆ ಡೆವಿಲ್ ಚಿತ್ರತಂಡ ಮಹತ್ವದ ನಿರ್ಧಾರ ಮಾಡಿದೆ.

ಡೆವಿಲ್ ಚಿತ್ರತಂಡ ಟಿಕೆಟ್ ಬುಕಿಂಗ್ ಮಾಡುವ ಆ್ಯಪ್ ಬುಕ್ ಮೈ ಶೋನಲ್ಲಿ ಸಿನಿಮಾಗೆ ರೇಟಿಂಗ್ ನೀಡದಂತೆ ಕೋರ್ಟ್ನಿಂದ ಆದೇಶ ತಂದಿದೆ. ಇತ್ತೀಚಿನ ದಿನಗಳಲ್ಲಿ ಬುಕ್ ಮೈ ಶೋ ರೇಟಿಂಗ್ ನೋಡಿಯೇ ಸಿನಿಮಾ ನೋಡಲು ಬರುವವರು ಅನೇಕರಿದ್ದಾರೆ. ಹೀಗಾಗಿ ಮೊದಲ ದಿನ ಸಿನಿಮಾ ವೀಕ್ಷಿಸಿದ ಬಳಿಕ ಕೆಲವರು ಉದ್ದೇಶ ಪೂರ್ವವಾಗಿ ನೆಗೆಟಿವ್ ವಿಮರ್ಶೆ ಕೊಡುವ ಸಾಧ್ಯತೆ ಇದೆ. ಹೀಗಾಗಿ ಬುಕ್ ಮೈ ಶೋನಲ್ಲಿ ಡೆವಿಲ್ ರೇಟಿಂಗ್ ತೆಗೆಯಲಾಗಿದೆ.

ಇನ್ನು ಈಗಾಗಲೇ ಸಿನಿಮಾ ನೋಡಿದವರು ಡೆವಿಲ್ಗೆ ಬುಕ್ ಮೈ ಶೋನಲ್ಲಿ ರೇಟಿಂಗ್ ಕೊಡಲು ಮುಂದಾಗಿದ್ದಾರೆ. ಈ ವೇಳೆ ಕೋರ್ಟ್ ಆದೇಶದಂತೆ ರೇಟಿಂಗ್ ಹಾಗೂ ವಿಮರ್ಶೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎನ್ನುವ ಸಂದೇಶ ಬಂದಿದ್ದು, ಏನಿದು ಎಂದು ಗೊಂದಲಕ್ಕೊಳಗಾಗಿದ್ದಾರೆ. ಹೀಗಾಗಿ ನಟ ದರ್ಶನ್ ಸಹೋದರ, ನಿರ್ದೇಶಕ ದಿನಕರ್ ತೂಗುದೀಪ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ನೆಗೆಟಿವ್ ವಿಮರ್ಶೆ ಬರುವ ಸಾಧ್ಯತೆ ಇರುತ್ತದೆ. ದುಡ್ಡು ಕೊಟ್ಟು ರೇಟಿಂಗ್ ಮಾಡಿಸುವ ಕೆಲಸ ಆಗುತ್ತದೆ. ಹೀಗಾಗಿ ತಡೆ ತರಲಾಗಿದೆ ಎಂದಿದ್ದಾರೆ.













